ಆರೋಗ್ಯಜೀವನ ಶೈಲಿಫ್ಯಾಷನ್

ಪರಿಸರ ಸ್ನೇಹಿ ಸೈಕ್ಲಿಂಗ್

ಬೆಂಗಳೂರು, ಫೆ.03:

ಆರೋಗ್ಯ ಮತ್ತು ಪರಿಸರದ ರಕ್ಷಣೆ ಮಾಡಲು ಸೈಕಲ್ ತುಳಿಯುವ ಮೂಲಕ ವಾರ್ಷಿಕವಾಗಿ 1.8 ಟ್ರಿಲಿಯನ್ ನಷ್ಟು ರೂಪಾಯಿಗಳನ್ನು ಉಳಿಸಬಹುದು.

ಮುಂದಿನ ಬಾರಿ ನೀವು ಕೆಲಸಕ್ಕೆ ಅಥವಾ ಸ್ನೇಹಿತರನ್ನು ಭೇಟಿ ಮಾಡಲು ಹೋಗುವುದಿದ್ದರೆ ಸೈಕಲ್ ಬಳಸಿ ಹೋಗುವುದು ಉತ್ತಮ. ಎನರ್ಜಿ ಅಂಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ ಎಂಬ ಥಿಂಕ್ _ಟ್ಯಾಂಕ್ ಪ್ರಕಟಿಸಿದ ವರದಿಯ ಪ್ರಕಾರ, ಸಾರಿಗೆಯ ಒಂದೇ ವಿಧಾನದ ಮೂಲಕ ನಾವು ವಾರ್ಷಿಕವಾಗಿ ವ್ಯಾಪಕ ಪ್ರಮಾಣದಲ್ಲಿ, 1.8 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಶೇ. 1.6 ನಷ್ಟು ಪ್ರಮಾಣವನ್ನು ಉಳಿತಾಯ ಮಾಡಬಹುದು.

ಅಧ್ಯಯನ ಹೇಳುವಂತೆ, “ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮೋಟಾರಿಕರೀಕರಣವು ಇಂಧನಗಳ ಅವಲಂಬನೆ, ಜಿಹೆಚ್ ಜಿ ಹೊರಸೊಸುವಿಕೆ, ವಾಹನ ದಟ್ಟಣೆ, ಮಾಲಿನ್ಯ ಮತ್ತು ಆರೋಗ್ಯ ಸಂಬಂಧಿ ಖಾಯಿಲೆಗಳಂತಹ ನಕಾರಾತ್ಮಕತೆಗೆ ಕಾರಣವಾಗಿದೆ. ಈ ನಕಾರಾತ್ಮಕತೆಯ ವೆಚ್ಚವನ್ನು ಕಡಿಮೆಗೊಳಿಸಲು ಪ್ರಸ್ತುತ ಮತ್ತು ಭವಿಷ್ಯದ ಯೋಜಿತ ಪ್ರಯಾಣದ ಬೇಡಿಕೆಯನ್ನು ಸೈಕ್ಲಿಂಗ್ ನಂತಹ ಸುಸ್ಥಿರ ವಿಧಾನವು ಒದಗಿಸುತ್ತದೆ.

ಭಾರತೀಯರ ಸಾರಿಗೆ ವಿಧಾನವನ್ನು ವಿಶ್ಲೇಷಿಸಿದಾಗ ,”ಭಾರತದಲ್ಲಿ ಶೇ. 50ಕ್ಕಿಂತಲೂ ಹೆಚ್ಚು ಜನರು ಯಾಂತ್ರಿಕರಹಿತ ಸಾರಿಗೆಗಿಂತ ನಡಿಗೆ ಮತ್ತು ಸೈಕ್ಲಿಂಗ್ ಬಳಸುತ್ತಾರೆ. ದ್ವಿಚಕ್ರ ವಾಹನಗಳ ಮೂಲಕ (18%) ಮತ್ತು ಬಸ್ಸುಗಳಲ್ಲಿ (16%) ಪ್ರಯಾಣಿಸುತ್ತಾರೆ.  ಗ್ರಾಮೀಣ ಪ್ರದೇಶಗಳಲ್ಲಿ ಶೇ. 12ರಷ್ಟಕ್ಕಿಂತಲೂ ಹೆಚ್ಚು ಜನರು ಪಾದಚಾರಿಗಳೇ ಆಗಿದ್ದು, ನಗರ ಪ್ರದೇಶಗಳಲ್ಲೇ ಹೆಚ್ಚು ಮಂದಿ ದ್ವಿಚಕ್ರ ವಾಹನಗಳ ಮೇಲೆ ಅವಲಂಬಿತರಾಗಿದ್ದಾರೆ.

ಸೈಕ್ಲಿಂಗ್ ಪರಿಸರ ಸ್ನೇಹಿ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ಹೊಂದಿದ್ದರೂ ಕಾಲಕಾಲಕ್ಕೆ ರಸ್ತೆಗಳಿಂದ ಕಣ್ಮರೆಯಾಗುತ್ತಿದೆ. ಸೈಕ್ಲಿಂಗ್ ನೇರ ಮತ್ತು ಪರೋಕ್ಷ ಪ್ರಯೋಜನಗಳನ್ನು ಅಧ್ಯಯನವು ಪಟ್ಟಿ ಮಾಡಿದೆ . ಅವುಗಳೆಂದರೆ:

1.ಕಾರ್ಬನ್ ಹೊರಸೂಸುವಿಕೆಯನ್ನು ಕಡಿತಗೊಳಿಸುತ್ತದೆ ಮತ್ತು ಜಿಡಿಪಿಯ ಉಳಿತಾಯ.

2.ವೈಯಕ್ತಿಕ ಇಂಧನದ ಉಳಿತಾಯ, ಹೆಚ್ಚಿನ ದೈಹಿಕ ಚಟುವಟಿಕೆಯಿಂದಾಗಿ ಆರೋಗ್ಯ ಪ್ರಯೋಜನಗಳು.

  1. ಕಡಿಮೆ ವಾಯು ಮಾಲಿನ್ಯ ಮತ್ತು ಪ್ರಯಾಣದ ಸಮಯದ ಉಳಿತಾಯ.

ಭಾರತದಲ್ಲಿ ಸೈಕ್ಲಿಂಗ್ ಉತ್ತೇಜಿಸಲು “ಬೈಸಿಕಲ್ ನ ವ್ಯಾಪಕ ಬಳಕೆ, ಕಡಿಮೆ ಆದಾಯದ ವ್ಯಕ್ತಿಗಳಿಗೆ ತೆರಿಗೆ ರಿಯಾಯಿತಿಗಳು, ಮೂಲ ಸೌಕರ್ಯದ ನಿರ್ಮಾಣ, ವಾಹನ ಬಳಕೆಯನ್ನು ಕಡಿಮೆಗೊಳಿಸಲು ಕ್ರಮವನ್ನು ಉತ್ತೇಜಿಸಲು “ದಟ್ಟಣೆ ಮತ್ತು ಪಾರ್ಕಿಂಗ್ ಪ್ರಯೋಜನಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆಗಳನ್ನು ಹೆಚ್ಚು ಮಾಡಲು ಜಾಗೃತಿ ಪ್ರಚಾರಗಳು ಸೈಕ್ಲಿಂಗ್ ಪ್ರೋತ್ಸಾಹಿಸಲು ಮತ್ತು ಉಳಿಸಿಕೊಳ್ಳಲು ಈ ಕ್ರಮಗಳನ್ನು ಅಳವಡಿಸಿಕೊಂಡಾಗ  ಮಾತ್ರ ಬದಲಾವಣೆ ಸಾಧ್ಯ .

ಬಾಲ್ಕನಿ ಹೀರೋ: ಇದು ತೆರೆಮರೆಯ ಸಾಧಕರ ಯಶೋಗಾಥೆ

#environmentcycling #cylilngadvantages #balkaninews #healthytips #environmentawareness

Tags