ಆರೋಗ್ಯಆಹಾರಜೀವನ ಶೈಲಿಫ್ಯಾಷನ್ಸೌಂದರ್ಯ

ಹೊಳೆಯುವ ಚರ್ಮಕ್ಕಾಗಿ ಅತ್ಯುತ್ತಮ ಈ ಫೇಸ್ ಮಾಸ್ಕ್

ಚೆಂದ ಕಾಣಬೇಕು ಎಂಬುದು ಎಲ್ಲರ ಹೆಬ್ಬಯಕೆ. ನೈಸರ್ಗಿಕವಾಗಿ, ಆಕರ್ಷಕ ತ್ವಚೆ ಪಡೆಯಲು, ಈ ಕೆಳಗಿನ ಫೇಸ್ಮಾಸ್ಕ್‍ ಸಹಕಾರಿ. ಅದರ ವಿವರ ಹೀಗಿದೆ.

ಬಾಳೆಹಣ್ಣು ಮತ್ತು ಪುದಿನ ಎಲೆಗಳ ಮಾಸ್ಕ್‍:

ಬಾಳೆಹಣ್ಣು – ಅರ್ಧ

ಮಿಂಟ್ ಎಲೆಗಳು – 10 – 12

ಇದರಿಂದ ಮೃದುವಾದ ಪೇಸ್ಟ್ ಅನ್ನು ತಯಾರಿಸಿ. ಈಗ ಮುಖದ ಪ್ಯಾಕನ್ನು ಸಮರ್ಪಕವಾಗಿ ಹಚ್ಚಿ.

15-30 ನಿಮಿಷಗಳ ಕಾಲದ ನಂತರ ನೀರಿನಿಂದ ತೊಳೆಯಿರಿ.

ಉಪಯೋಗ:

  1. ನಿಮ್ಮ ಚರ್ಮವನ್ನು ತಂಪಾಗಿಸುತ್ತದೆ.
  2. ಮೊಡವೆ ಮತ್ತು ಚರ್ಮ ಮುಸುಕಾಗುವುದನ್ನು ತಡೆಯುತ್ತದೆ.
  3. ಬಾಳೆಹಣ್ಣು ಚರ್ಮವನ್ನು ಪೋಷಿಸುತ್ತದೆ.ಆರೋಗ್ಯಕರ ಮತ್ತು ನೈಸರ್ಗಿಕ ಹೊಳಪನ್ನು ನೀಡುತ್ತದೆ.

Image result for banana and mint face mask

ನಿಂಬೆಹಣ್ಣು ಮತ್ತು ಪುದೀನ ಎಲೆಗಳ ಮಾಸ್ಕ್‍:

ರುಬ್ಬಿದ ಪುದೀನ ಎಲೆಗಳು – 10-12

ನಿಂಬೆ ರಸ –  1 ಚಮಚ

ಇವೆರಡರನ್ನು ಮಿಶ್ರಣ ಮಾಡಿ. ಮೊಡವೆ ಇರುವ ಜಾಗಕ್ಕೆ ಹಚ್ಚಿ. ಸುಮಾರು 15 ನಿಮಿಷ ಬಿಟ್ಟು, ತಣ್ಣನೆ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕೆ ದಿನಕೊಮ್ಮೆ ಹೀಗೆ ಮಾಡಿ.

ಪ್ರಯೋಜನಗಳು:

  1. ಮಿಂಟ್ ನೈಸರ್ಗಿಕವಾಗಿ ಸ್ಯಾಲಿಸಿಲಿಕ್ ಆಮ್ಲವನ್ನು ಹೊಂದಿದೆ. ಹಾಗಾಗಿ ಇದು ಮೊಡವೆಗಳನ್ನು ತಡೆಯುತ್ತದೆ.
  2. ನಿಂಬೆಯಲ್ಲಿ ವಿಟಮಿನ್ ಸಿ ಮತ್ತು ಸೌಮ್ಯವಾದ ಬ್ಲೀಚಿಂಗ್ ಗುಣಗಳನ್ನು ಹೊಂದಿದೆ. ಹಾಗಾಗಿ ಮೊಡವೆಯಿಂದ ಆಗಿರುವ ಹಳೆಯ ಕಲೆಗಳೂ ಕೂಡ ಕಡಿಮೆ ಆಗುತ್ತದೆ.
  3. Image result for lemon and mint face mask

ಮುಲ್ತಾನಿ ಮಿಟ್ಟಿ ಮತ್ತು ಪುದೀನ ಎಲೆಗಳ ಮಾಸ್ಕ್

10 ರಿಂದ 12 ಮಿಂಟ್ ಎಲೆಗಳ ಪೇಸ್ಟ್

ಒಂದು ಚಮಚ ಮಲ್ಟಾನಿ ಮಿಟ್ಟಿ ಪೌಡರ್

ಅರ್ಧ ಚಮಚದಷ್ಟು ಜೇನುತುಪ್ಪ

ಮೊಸರು

ಇವೆಲ್ಲದರ ಪೇಸ್ಟ್‍ ತಯಾರಿಸಿ ಮುಖದ ಮೇಲೆ ಸಮನಾಗಿ ಹಚ್ಚಿ.20 ನಿಮಿಷ ಬಿಟ್ಟು ತಣ್ಣನೆ ನೀರಿನಿಂದ ತೊಳೆಯಿರಿ.

ಪ್ರಯೋಜನಗಳು:

  1. ಮುಲ್ತಾನಿ ಮುಟ್ಟಿ ಚರ್ಮದಲ್ಲಿನ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ.
  2. ಪುದೀನ ಎಲೆಗಳು ಚರ್ಮದಲ್ಲಿನ ರಂಧ್ರಗಳನ್ನು ಆಳವಾಗಿ ಶುಚಿಗೊಳಿಸುತ್ತವೆ. ಹೀಗೆ ವಾರಕ್ಕೆ ಎರಡು ಬಾರಿ ಮಾಡಿದರೆ ಚರ್ಮದ ತೇವಾಂಶ ಮಟ್ಟ ಸಮತೋಲನವಾಗಿರುತ್ತದೆ.

Image result for multani mitti and mint face pack

ಸೌತೆಕಾಯಿ ಮತ್ತು ಪುದೀನ ಎಲೆಯ ಮಾಸ್ಕ್‍:

ಒಂದು ಗ್ರೈಂಡರ್ ನಲ್ಲಿ ಒಂದು ಸಣ್ಣ ಸೌತೆಕಾಯಿ ಮತ್ತು 10-12 ಮಿಂಟ್ ಎಲೆಗಳನ್ನು ಸೇರಿಸಿ. ಮೃದುವಾದ ಮಿಶ್ರಣ ಮಾಡಿ. ಸನ್ ಬರ್ನ್‍ ಆಗಿರುವ ಚರ್ಮದ ಮೇಲೆ ಮಿಶ್ರಣವನ್ನು ಹಚ್ಚಿ 20 ನಿಮಿಷದ ನಂತರ ತಂಪಾದ ನೀರಿನಿಂದ ತೊಳೆಯಿರಿ.

ಉಪಯೋಗ:

ಸೌತೆಕಾಯಿ ನೈಸರ್ಗಿಕ ಕೂಲಿಂಗ್ ಏಜೆಂಟ್ ಆಗಿದ್ದು, ಪುದೀನ ಎಲೆಯನ್ನು ಬೆರೆಸಿದಾಗ ಅದು ಸೂರ್ಯನ ಬೆಳಕನ್ನು ತಗ್ಗಿಸುತ್ತದೆ ಮತ್ತು ಚರ್ಮವನ್ನು ವೇಗವಾಗಿ ಗುಣಪಡಿಸುತ್ತದೆ.

Image result for cucumber and mint face mask

ಚರ್ಮದ ಕಾಂತಿ ಇಮ್ಮಡಿಗೊಳಿಸುವ ಬೆಣ್ಣೆ!

#balkaninews #faceppack #mint #mintfacepack #cucumberfacepack #lemonandmintfacepack

Tags