ಜೀವನ ಶೈಲಿಫ್ಯಾಷನ್ಸೌಂದರ್ಯ

ಹೀಗಿರಲಿ ನಿಮ್ಮ ಮುಖ ತೊಳೆಯುವ ಕ್ರಮ

ಫೇಸ್ ವಾಶ್ ಅರ್ಥಾತ್ ಮುಖ ತೊಳೆಯುವುದು! ಪ್ರತಿದಿನ ನಾವು ಅದೆಷ್ಟೋ ಬಾರಿ ಮುಖ ತೊಳೆಯುತ್ತೇವೆ. ಸಿಕ್ಕ ಸಿಕ್ಕ ಫೇಸ್ ವಾಶ್ ಬಳಸಿ, ಗಡಿಬಿಡಿಯಿಂದ ಮುಖ ತೊಳೆದು ಬರುವವರೇ ಹೆಚ್ಚು. ದಯವಿಟ್ಟು ಹಾಗೆ ಮಾಡಬೇಡಿ. ನಿಮ್ಮ ಗಡಿಬಿಡಿಯಿಂದ ನಿಮ್ಮ ಮುಖದ ಅಂದವೇ ಹಾಳಾಗಬಹುದು, ಜೋಕೆ!

ಮುಖದ ಸೌಂದರ್ಯಕ್ಕೂ ಮುಖ ತೊಳೆಯುವುದಕ್ಕೂ ಅದೇನು ಸಂಬಂಧ ಎಂದು ಹಲವರಿಗೆ ಅನ್ನಿಸಿರಬಹುದು. ಆದರೆ ಎಲ್ಲಾ ಕೆಲಸಗಳಿಗೂ ಅದರದೇ ಆದ ರೀತಿ ನೀತಿಯೊಂದಿದೆ. ಅದೇನೆಂದು ನಾವಿಂದು ತಿಳಿಯೋಣ.

ಫೇಸ್ ವಾಶ್ ಆಯ್ಕೆಯಲ್ಲಿ ಎಚ್ಚರವಿರಲಿ! ಸಿಕ್ಕ ಸಿಕ್ಕ ಫೇಸ್ ವಾಶ್ ಅನ್ನು ದಯಮಾಡಿ ಬಳಸಬೇಡಿ. ಸರಿಯಾದ ಫೇಸ್‌ವಾಶ್‌ ಬಳಸಿ. ಅಂದರೆ ನಿಮ್ಮ ತ್ವಚೆಗೆ ಬೇಕಾದಂತಹ ಫೇಸ್ ವಾಶ್ ಅನ್ನೇ ಬಳಸಿ. ಉದಾಹರಣೆಗೆ ಆಯಿಲ್‌ ಸ್ಕಿನ್‌ ಮತ್ತು ಡ್ರೈ ಸ್ಕಿನ್‌ ಅವರು ಒಂದೇ ರೀತಿಯ ಫೇಸ್‌ವಾಶ್‌ ಬಳಸಲು ಸಾಧ್ಯವಿಲ್ಲ. ಅದನ್ನು ಗಮನವಿರಿಸಿ ಬಳಸಿ.

ನಂತರ ಹೀಗೆ ಮಾಡಿ! ಫೇಸ್ ವಾಶ್ ಹಾಕಿದ ನಂತರ ಗಡಿಬಿಡಿಯಿಂದ ನೀರು ಹಾಕಿ ತೊಳೆದು ಬರುವವರಿಗೇನು ಕಡಿಮೆಯಿಲ್ಲ. ಆದರೆ ಹಾಗೇ ಮಾಡಲೇ ಬಾರದು‌‌. ಮೊದಲು ಮುಖಕ್ಕೆ ಫೇಸ್‌ವಾಶ್‌ ಹಾಕಬೇಕು. ನಂತರ ಚೆನ್ನಾಗಿ ನೊರೆ ಬರುವವರೆಗೆ ಸ್ಕ್ರಬ್‌ ಮಾಡಿ.  ಈ ರೀತಿ ಮಾಡುವುದರಿಂದ ತ್ವಚೆಯಲ್ಲಿ ಅಡಗಿ ಕುಳಿತ ಧೂಳಿನಂಶ ಕಡಿಮೆಯಾಗುತ್ತದೆ.

ಇನ್ನು ಚೆನ್ನಾಗಿ ಮುಖ ತೊಳೆದ ನಂತರ ಮುಖವನ್ನು ಒರೆಸಲು ಸ್ವಚ್ಛವಾದ ಟವಲ್ ಬಳಸಿ. ಯಾಕೆಂದರೆ ಮುಖದ ತ್ವಚೆ ತುಂಬಾ ಸೂಕ್ಷ್ಮ. ಆದುದರಿಂದ ಕ್ಲೀನ್ ಆಗಿರುವ ಟವೆಲ್ ಗೆ ಮೊದಲ ಆದ್ಯತೆ ನೀಡಿ. ಮುಖ ತಿಳೆದು ಬಂದಾಗ ಕೈಗೆ ದೊರಕಿತು ಎಂದು ಸಿಕ್ಕ ಸಿಕ್ಕ ಟವೆಲ್ ನಲ್ಲಿ ಮುಖ ಒರೆಸಬೇಡಿ.

ಮುಖ್ಯವಾದ ಸಂಗತಿಯೆಂದರೆ ಮುಖ ತೊಳೆಯುವಾಗ ತಣ್ಣೀರು ಬಳಸುವುದು ಒಳ್ಳೆಯದು. ಅದು ಮುಖದ ಆರೋಗ್ಯಕ್ಕೂ ಉತ್ತಮ. ಆದರೆ ಚಳಿಯಿದ್ದಾಗ ಅಥವಾ ಚಳಿಗಾಲದಲ್ಲಿ ಉಗುರು ಬೆಚ್ಚಗಿನ ನೀರು ಬಳಸಿ. ಇದನ್ನು ನೆನಪಿಡಿ. ಚೆನ್ನಾಗಿ  ಮುಖ ತೊಳೆದ ನಂತರ ಬೇಕಿದ್ದರೆ ಮುಖಕ್ಕೆ ಮಾಯಿಶ್ಚರೈಸರ್‌ ಹಚ್ಚಿ. ಮಾಯಿಶ್ಚರೈಸರ್‌ ಹಚ್ಚಿದರೆ ಮುಖದ ತ್ವಚೆ ಮತ್ತಷ್ಟು ಮೃದುವಾಗುವುದು.

ಮೋಡಿ ಮಾಡುವ ‘ಮೂಕವಿಸ್ಮಿತ’

#facewash ,#health, #Tips, #balkaninews

Tags