ಜೀವನ ಶೈಲಿಫ್ಯಾಷನ್

ಫ್ಯಾನ್ಸಿ ಕಿವಿಯೋಲೆಗೆ ಡಿಮಾಂಡಪ್ಪೋ ಡಿಮ್ಯಾಂಡ್!!

ಹಿಂದಿನ ಕಾಲದಲ್ಲಾದರೆ ಮಾಟಿಯಂತಹ ದೊಡ್ಡ ದೊಡ್ಡ ಲೋಲಾಕುಗಳನ್ನು ಧರಿಸಿ ತಮ್ಮ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳ‍್ಳಿಸುತ್ತಿದ್ದರು. ಆಗೆಲ್ಲ ಬೆಂಡೋಲೆ, ಝುಮುಕಿ, ಲೋಲಾಕುಗಳಿಗೆ ಹೆಚ್ಚು ಪ್ರಾಧಾನ್ಯತೆಯ ಇತ್ತು. ಮಧುಮಗಳಿಗಂತೂ ಝುಮುಕಿಯಿಲ್ಲದೆ ಅಲಂಕಾರ ಪೂರ್ಣಗೊಳ‍್ಳುತ್ತಿರಲಿಲ್ಲ.

ಈಗಿನ ಹೊಸ ಟ್ರೆಂಡ್ ಮೊದಲಿನಂತಿಲ್ಲ ಇದು ಈಗಿನ ಜಾಯಮಾನ. ಕಿವಿಯೋಲೆಗಳು ಸಾಕಷ್ಟು ರೀತಿಯಲ್ಲಿ ಬದಲಾವಣೆಗಳಾಗಿವೆ. ಎಲ್ಲರೂ ಚಿನ್ನದ ಝುಮುಕಿ ಇಷ್ಟಪಡುವವರಾದರೂ ಇಂದಿನ ಫ್ಯಾಶನ್ ಡ್ರೆಸ್ಸ್ ಗೆ ಮ್ಯಾಚ್ ಆಗುವುದಿಲ್ಲವೆಂದು ಅದನ್ನು ಅಷ್ಟಾಗಿ ಧರಿಸಲು ಇಷ್ಟ ಪಡುವುದಿಲ್ಲ.ಬದಲಾಗಿ ಮಾರುಕಟ್ಟೆಯಲ್ಲಿ ದೊರೆಯುವ ನಾನಾ ರೀತಿಯ ಆರ್ಟಿಫಿಶಲ್ ಕಿವಿಯೋಲೆಗಳು ಇಂದು ಮಾರುಕಟ್ಟೆಯನ್ನು ಆಳುತ್ತಿವೆ. ಸ್ಟಡ್ಸ್ , ಹ್ಯಾಂಗಿಂಗ್ಸ್, ಝುಮ್ಕಾ, ಹೀಗೆ ಹಲವಾರು ಇವೆ. ಇನ್ನು ಚಿನ್ನದಂತೆ ಕಿವಿಯೋಲೆ ಕಂಡರೂ ಅದು ಚಿನ್ನವಲ್ಲ, ಬದಲಾಗಿ ಅದಕ್ಕೆ ಕೋಟಿಂಗ್ ಕೊಟ್ಟಿರುತ್ತಾರೆ.

Image result for fancy earrings wearing women

ಇನ್ನು ಕಾಲೇಜ್ ಕನ್ಯೆಯರಂತೂ ಫ್ಯಾನ್ಸಿ ಗೆ ಕಾಲಿಟ್ಟರೆ ಕೇಳಬೇಕಿಲ್ಲ. ಅವರದ್ದೇ ಸಾಮ್ರಾಜ್ಯ. ನಾನಾ ರೀತಿಯ ಕಿವಿಯೋಲೆ ಕಂಡು ಇಷ್ಟವಾದರೂ ಕೊನೆಗೆ ಖರೀದಿಸುವುದು ಒಂದೋ ಎರಡೋ. ಕಾಲೇಜ್ ಕನ್ಯೆಯರಿಗಂತೂ ಸ್ಟಡ್ಸ್ ಸೂಟ್ ಆಗುತ್ತವೆ. ದಿನಕ್ಕೊಂದು ಸ್ಟಡ್ಸ್ ಹಾಕಿ ಕಾಲೇಜ್  ಹೋಗುವವರು ಅದೆಷ್ಟು ಮಂದಿಯೋ ?. ಸ್ಟಡ್ಸ್ ಗಳು ತುಂಬಾ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಈಗ ಪೇಪರ್ ಕ್ರಾಫ್ಟ್ ಕಿವಿಯೋಲೆಗಳು ಲೇಟೆಸ್ಟ್ ಫ್ಯಾಶನ್. ಪೇಪರ್ ಕ್ರಾಫ್ಟ್ ಕಿಯೋಲೆಗಳು ತುಂಬಾ ಚೀಪ್ ಹಾಗೂ ಲೈಟ್ ವೈಟ್. ಇದು ಎಲ್ಲರ ಕಣ್ಮನನವನ್ನು ಸೆಳೆದಿದೆ. ವಿವಿಧ ಡಿಸೈನ್ ಗಳಲ್ಲಿ ದೊರೆಯುತ್ತವೆ.

ಆದರೆ ಆರ್ಟಿಫಿಶಲ್ ಝುಮುಕಿಗಳ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಆದರೆ ಇದರ ಬೆಲೆ ಮಾತ್ರ ದುಬಾರಿ. ಬಣ‍್ಣಬಣ‍್ಣದ ಸ್ಟೋನ್ ಗಳಿಂದ ಪೋಣಿಸಿ ಅದರ ಅಲಂಕಾರವನ್ನು ಇನ್ನಷ್ಟು ಹೆಚ್ಚಿಸಿ ಮಾರುಕಟ್ಟೆಗೆ ಬಿಡುತ್ತಾರೆ. ಈ ಝುಮುಕಿ ಬಾಲಿವುಡ್ ಸೆಲೆಬ್ರೆಟಿಗಳನ್ನೂ ಬಿಟ್ಟಿಲ್ಲ. ದೊಡ್ಡ ದೊಡ್ಡ ಝುಮುಕಿ ಧರಿಸಿ ಪಾರ್ಟಿ ಸಮಾರಂಭಗಳಿಗೆ ಹೋಗುತ್ತಾರೆ. ಅವರು ಧರಿಸಿದ ಉಡುಪು ಆಭರಣಗಳೇ ಫ್ಯಾಶನ್ ಆಗಿ ಮಾರುಕಟ್ಟೆಗೆ ಬರುತ್ತದೆ.

ಝುಮುಕಿ ಸೀರೆಗೆ ತುಂಬಾ ಮ್ಯಾಚ್ ಆಗುತ್ತದೆ. ಅದನ್ನು ಧರಿಸಿ ಅಲುಗಾಡಿಸಿ ನಡೆದಾಡುವ ಪರಿಯೇ ಬೇರೆ. ರೇಷ್ಮೆ ಸೀರೆ ಉಟ್ಟಾಗ ದೊಡ್ಡದಾದ ಕಿವಿಯೋಲೆಯಲ್ಲಿ ರಿಂಗ್ ಆಕೃತಿಯಿರುವ ಕಿವಿಯೋಲೆ ಧರಿಸಿದರೆ ಇನ್ನೂ ಆಕರ್ಷಕವಾಗಿ ಮದುವೆ ಸಮಾರಂಭದಲ್ಲಿ ಕಾಣಬಹುದು. ಭರತನಾಟ್ಯ, ಕಥಕ್ಕಳಿ, ಕೂಚುಪುಡಿಯಂತಹ ಯಾವುದೇ ನೃತ್ಯವಾಗಿರಲಿ ದೊಡ್ಡ ಝುಮುಕಿ ಧರಿಸಿ ಅವರ ಅಂದವನ್ನು ಹೆಚ್ಚಿಸುತ್ತಾರೆ ಆದರೂ ಹಳೆಯ ಫ್ಯಾಶನ್ ಮತ್ತೆ ಮರುಕಳಿಸಿದೆಂದರೆ ತಪ್ಪಾಗಲಾರದು.

Related image

ಇನ್ನು ಹ್ಯಾಂಗಿಂಗ್ಸ್ ಕಿಯೋಲೆಗಳು ಚೂಡಿದಾರ್ನಂತಹ ಉಡುಪುಗಳಿಗೆ ಗ್ರ್ಯಾಂಡ್ ಲುಕ್ ನೀಡುತ್ತದೆ. ಈಗಿನ ವಿವಾಹಿತ ಮಹಿಳೆಯರೇನು ಕಮ್ಮಿಯಿಲ್ಲ, ಅವರೂ ಕೂಡ ಇಂತಹ ಫ್ಯಾನ್ಸಿ ಕಿವಿಯೋಲೆಯನ್ನು ಧರಿಸಲು ಶುರು ಮಾಡಿದ್ದಾರೆ. ಕಾಲೇಜ್ ಕನ್ಯೆಯರಿಂದ ವಿವಾಹಿತ ಹೆಂಗಳೆಯರನ್ನೂ ಬಿಟ್ಟಿಲ್ಲ ಈ ಫ್ಯಾನ್ಸಿ ಕಿವಿಯೋಲೆ ಹವಾ, ಎಲ್ಲರ ಮನ ಕದ್ದು ಬಿಟ್ಟಿದೆ.

 

Tags