ಚಿತ್ರ ವಿಮರ್ಶೆಗಳುಫ್ಯಾಷನ್

ಪ್ರತಿ ಹಂತದಲ್ಲೂ ಕ್ಯೂರಿಯಾಸಿಟಿ: ‘ಜಂಟಲ್ ಮ್ಯಾನ್’ ಗೆ ಕೊಟ್ರು ಫುಲ್ ಮಾರ್ಕ್ಸ್..!

'ಜಂಟಲ್ ಮ್ಯಾನ್' ರಾಜ್ಯಾದ್ಯಂತ ಇಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಶಬ್ಬಾಶ್ ಗಿರಿ ಗಿಟ್ಟಿಸಿಕೊಂಡಿದೆ. ಹೊಸತನದ ಪ್ರಯತ್ನಗಳನ್ನ ಕನ್ನಡ ಸಿನಿ ಪ್ರೇಕ್ಷಕ ಯಾವಾಗಲೂ ಒಪ್ಪಿಕೊಳ್ಳುತ್ತಾನೆ ಅನ್ಬೋದಕ್ಕೆ 'ಜಂಟಲ್ ಮ್ಯಾನ್' ಸಿನಿಮಾವೇ ಸಾಕ್ಷಿ.

ಚಿತ್ರ: ಜಂಟಲ್‍ಮ್ಯಾನ್  Rating 4 / 5 

ಡೈನಾಮಿಕ್ ಪ್ರಿನ್ ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು ಅಭಿನಯದ ‘ಜಂಟಲ್‍ಮ್ಯಾನ್’ ತನ್ನ ಪೋಸ್ಟರ್ ಹಾಗೂ ಟ್ರೇಲರ್ ನಿಂದಲೇ ಸಾಕಷ್ಟು ಕುತೂಹಲವನ್ನ ಹುಟ್ಟಿಸಿತ್ತು. ಸಾಕಷ್ಟು ನಿರೀಕ್ಷೆಯನ್ನು ಚಿತ್ರ ಹುಟ್ಟುಹಾಕಿದ್ದ ‘ಜಂಟಲ್ ಮ್ಯಾನ್’ ರಾಜ್ಯಾದ್ಯಂತ ಇಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಶಬ್ಬಾಶ್ ಗಿರಿ ಗಿಟ್ಟಿಸಿಕೊಂಡಿದೆ. ಹೊಸತನದ ಪ್ರಯತ್ನಗಳನ್ನ ಕನ್ನಡ ಸಿನಿ ಪ್ರೇಕ್ಷಕ ಯಾವಾಗಲೂ ಒಪ್ಪಿಕೊಳ್ಳುತ್ತಾನೆ ಅನ್ಬೋದಕ್ಕೆ ‘ಜಂಟಲ್ ಮ್ಯಾನ್’ ಸಿನಿಮಾವೇ ಸಾಕ್ಷಿ.

‘ಜಂಟಲ್‍ಮ್ಯಾನ್’ ಚಿತ್ರದಲ್ಲಿ ಸಿನಿರಸಿಕರಿಗೆ ಬೇಕಾದ ಎಲ್ಲಾ ಎಲಿಮೆಂಟ್‍ಗಳು ಸಮಾನವಾಗಿವೆ. ಕಥೆ ಹಾಗೂ ಎಲ್ಲೂ ಬೋರ್ ಹೊಡಿಸದೆ ತೆರೆ ಮೇಲೆ ತೋರಿಸಿರುವ ರೀತಿಗೆ ಅದ್ಭುತವಾಗಿದೆ. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್‍ನಿಂದ ಬಳಲೋ ನಾಯಕ ಭರತ್ ದಿನದ ಹದಿನೆಂಟು ಗಂಟೆ ಮಲಗಿಯೇ ಇರುತ್ತಾನೆ. ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಅನ್ನೋ ಅರಿವು ಆತನಿಗೆ ಇರೋದಿಲ್ಲ. ಇದರ ನಡುವೆ ನಾಯಕ ಏನನ್ನೋ ಹುಡುಕುತ್ತಾನೆಂಬ ಟ್ರೇಲರ್ ಹುಟ್ಟುಹಾಕಿದ್ದ ಪ್ರಶ್ನೆಗೆ ಸಿನಿಮಾದಲ್ಲಿ ಉತ್ತರ ಸಿಕ್ಕಿದೆ‌. ಕಳೆದು ಹೋದ ಅಣ್ಣನ ಮಗಳನ್ನು ಹುಡುಕೋ ಜವಾಬ್ದಾರಿ, ಜೊತೆಗೆ ಪ್ರೀತಿಸಿದವಳನ್ನು ಕಾಪಾಡಿಕೊಳ್ಳೋ ಜವಾಬ್ದಾರಿ ಆತನ ಮೇಲಿರುತ್ತೆ. ಪ್ರತಿಬಾರಿ ಈ ಜವಾಬ್ದಾರಿ ನಿರ್ವಹಿಸುವಾಗ ಎದುರಾಗೋ ನಿದ್ರೆ ಏನೆಲ್ಲ ಸಮಸ್ಯೆ ಉಂಟುಮಾಡುತ್ತೆ. ಇದನ್ನೆಲ್ಲ ಮೀರಿ ಭರತ್ ಎಲ್ಲರನ್ನು ಕಾಪಾಡುತ್ತಾನಾ? ಎನ್ನುವುದು ‘ಜಂಟಲ್ ಮ್ಯಾನ್’ ಸ್ಟೋರಿಯಾಗಿದೆ.

ಸಿಂಪಲ್ ಕಥೆಯನ್ನ ಜನ ಆ ಕಡೆ ಈ ಕಡೆ ಬೋರ್ ಹೊಡೆಸದ ಹಾಗೇ ಅದ್ಭುತವಾಗಿ ಜಡೇಶ್ ಕುಮಾರ್ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಪ್ರತಿ ಹಂತದಲ್ಲೂ ಸಿನಿಮಾ ಸಾಕಷ್ಟು ಕುತೂಹಲವನ್ನು ಹುಟ್ಟಿಸುತ್ತೆ. ಸಿನಿಮಾದ ಕೊನೆಯವರೆಗೂ ಆ ಕಡೆ ಈ ಕಡೆ ಗಮನ ಹೋಗದಂತೆ ಒಂದೊಳ್ಳೆ ಸಿನಿಮಾ ಕೊಟ್ಟ ಹೆಗ್ಗಳಿಗೆ ಇಡೀ ತಂಡಕ್ಕೆ ಸೇರಿಬೇಕಾಗುತ್ತದೆ. ಢಿಪ್ರೆಂಟ್ ರೋಲ್ ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದು, ಈ ಸಿನಿಮಾ ದೊಡ್ಡ ಬ್ರೇಕ್ ನೀಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.

ಸಂಚಾರಿ ವಿಜಯ್ ನಟನೆ ಬಗ್ಗೆ ಎರಡು ಮಾತಿಲ್ಲ. ನಿಶ್ವಿಕಾ ನಾಯ್ಡು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದು, ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದ ಸಂಗೀತ, ಎಲ್ಲಾ ಪಾತ್ರವರ್ಗ ಚಿತ್ರದ ಕಥೆಗೆ ಪೂರಕವಾಗಿ ಮೂಡಿ ಬಂದಿದೆ.

ನಿರ್ದೇಶನ: ಜಡೇಶ್ ಕುಮಾರ್
ನಿರ್ಮಾಪಕ: ಗುರುದೇಶಪಾಂಡೆ
ಸಂಗೀತ: ಅಜನೀಶ್ ಲೋಕನಾಥ್
ಛಾಯಾಗ್ರಹಣ: ಸುಧಾಕರ್ ಶೆಟ್ಟಿ
ತಾರಾಬಳಗ: ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು, ಸಂಚಾರಿ ವಿಜಯ್, ಆರಾಧ್ಯ
Tags