ಆರೋಗ್ಯಆಹಾರಜೀವನ ಶೈಲಿ

ಬೆಳಗ್ಗಿನ ಬ್ರೇಕ್ ಫಾಸ್ಟ್ ಗೆ ದಿಢೀರ್ ಟಮೋಟೊ ರವಾ ದೋಸೆ

ಹೆಣ್ಣು ಮಕ್ಕಳು ಪ್ರತಿದಿನ ರಾತ್ರಿ ಮಲಗುವ ಮುನ್ನ ಬೆಳಿಗ್ಗೆ ಎದ್ದು ಯಾವ ತಿಂಡಿ ಮಾಡಬೇಕು.?. ಪತಿ ಹಾಗೂ ಮಕ್ಕಳಿಗೆ ಯಾವ ತಿಂಡಿ ಮಾಡಿದರೆ ಇಷ್ಟವಾಗುತ್ತದೆ ಎಂದು ಯೋಚಿಸುವ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ನಾವಿಂದು ಬಹುಬೇಗ ಮಾಡುವ ಟಮೋಟೊ ರವಾ ದೋಸೆಯ ರೆಸಿಪಿ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

ಹೌದು, ಬೆಳಿಗ್ಗೆಯ ದಿಢೀರ್ ಬ್ರೇಕ್ ಫಾಸ್ಟ್ ಗೆಂದೇ ಟಮೋಟೊ ರವಾ ದೋಸೆ ರೆಸಿಪಿಯನ್ನು ಹೇಗೆ ಮಾಡುವುದು ಹಾಗೂ ಅದಕ್ಕೆ ಬೇಕಾದ ಪದಾರ್ಥಗಳ ಬಗ್ಗೆ ಹೇಳುತ್ತಿದ್ದೇವೆ.

ಮೊದಲಿಗೆ ಟಮೋಟೊ ರವಾ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು: ಟಮೋಟೋ, ಹಸಿತೆಂಗಿನ ತುರಿ, ಬ್ಯಾಡಿಗೆ ಮೆಣಸಿನಕಾಯಿ, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಜಿರಿಗೆ, ಕೊತ್ತಂಬರಿ ಸೊಪ್ಪು, ಕರಿಬೇವು, ಉಪ್ಪು ಹಾಗೂ ಮೊಸರು.ಮಾಡುವ ವಿಧಾನ:

ಮೊದಲಿಗೆ ಟಮೋಟೊ, ಹಸಿ ತೆಂಗಿನಕಾಯಿ ತುರಿ, ಬ್ಯಾಡಿಗೆ ಮೆಣಸಿನಕಾಯಿಯನ್ನು ಮಿಕ್ಸ್ ಗೆ ಹಾಕಿ ರುಬ್ಬಬೇಕು. ಬಳಿಕ ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಟ್ಟು, ಅದಕ್ಕೆ ಅಕ್ಕಿ ಹಿಟ್ಟು ಸ್ವಲ್ಪ, ಮೈದಾ ಹಿಟ್ಟು ಸ್ವಲ್ಪ, ಜಿರಿಗೆ ಒಂದು ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಕರಿಬೇವು ಸ್ವಲ್ಪ, ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ ಐದು ಅಥವಾ ಹತ್ತು ನಿಮಿಷಗಳ ಕಾಲ ಹಾಗೇ ಬಿಡಬೇಕು. ನಂತರ ಈ ಮಿಶ್ರಣಕ್ಕೆ ಸ್ವಲ್ಪ ನೀರನ್ನು ಹಾಕಿ ತೆಳ್ಳಗೆ ಬರುವ ಹಾಗೇ ಮಾಡಿಟ್ಟುಕೊಳ್ಳಬೇಕು. ಬಳಿಕ ಇದನ್ನು ದೋಸೆಯ ತವದ ಮೇಲೆ ಸೌಟ್ ನಿಂದ ಹಾಕಬೇಕು. ಇದು ತನ್ನಿಂದ ತಾನೇ ತವದಿಂದ ಬಿಟ್ಟ ನಂತರ ಅದನ್ನು ತೆಗೆದರೇ, ರುಚಿ ರುಚಿಯಾದ ಗರಿ ಗರಿ ಟಮೋಟೊ ರವಾ ದೋಸೆ ಚಟ್ನಿ ಅಥವಾ ಗೊಜ್ಜಿನೊಂದಿಗೆ ಸವಿಯಲು ಸಿದ್ದ.

ನೋಡಿದಾಕ್ಷಣವೇ ಬಾಯಲ್ಲಿ ನೀರು ತರಿಸುವ ಬದನೆಕಾಯಿ ಎಣ್ಣೆಗಾಯಿ

ಈ ಬಹುಭಾಷಾ ಬೆಡಗಿ ಯಾರೆಂದು ಕಂಡುಹಿಡಿಯುವಿರಾ…?

#tomato #tomatogravy #tomatochutney #tomatoravadosa

Tags