ಜೀವನ ಶೈಲಿಫ್ಯಾಷನ್

ಥ್ರಿಲ್ಲಿಂಗ್ ಫೀಲಿಂಗ್ ಬೇಕಾ..? ನೀಡುತ್ತೆ ಈ ಫ್ಲೈ ಡೈನಿಂಗ್

ಬೆಂಗಳೂರು, ಜ.16:

ಇದೊಂದು ಹೊಸ ಮತ್ತು ಸಿಹಿ ಸುದ್ದಿ. ವಿಶ್ವದ ಅತ್ಯಂತ ಸಾಹಸಮಯ ಡಿನ್ನರ್ ಅನುಭವ ಪಡೆಯಲು ದುಬೈ ಅಥವಾ ಸಿಂಗಾಪುರಕ್ಕೆ ಹೋಗಬೇಕು ಅಂತ ಏನೂ ಇಲ್ಲ. ಏಕೆಂದರೆ ಫ್ಲೈ ಡೈನಿಂಗ್‍ ರೆಸ್ಟೋರೆಂಟ್‍ ಬೆಂಗಳೂರಿನಲ್ಲಿ ಆರಂಭವಾಗಿದೆ. ನೀವು ಆಕಾಶದಲ್ಲಿ ತೇಲಾಡುತ್ತಾ ಊಟ ಮಾಡುವುದರ ಜೊತೆಗೆ ಮೋಜು ಮಸ್ತಿಯಲ್ಲಿ ಕಾಲ ಕಳೆಯಬಹುದು.

ಭೋಜನ ಪ್ರಿಯರಿಗೆ ಸಿಲಿಕಾನ್‍ ಸಿಟಿಯಲ್ಲಿ ಇದೇ ಮೊದಲ ಬಾರಿಗೆ ವಿಶೇಷ ರೀತಿಯ ಫ್ಲೈ ಡೈನಿಂಗ್‍ ರೆಸ್ಟೋರೆಂಟ್‍ ಪ್ರಾರಂಭವಾಗಿದೆ. ಇದು ಹೆಬ್ಬಾಳದ ನಾಗವಾರ ಕೆರೆಯ ಪಕ್ಕದಲ್ಲಿದ್ದು, ಪ್ರಕೃತಿ ಸೌಂದರ್ಯದಿಂದ ಕೂಡಿದೆ.

ಈ ರೆಸ್ಟೋರೆಂಟ್‍ ಅನ್ನು ಕ್ರೇನ್‍ ಸಹಾಯದಿಂದ 50 ಅಡಿ ಮೇಲಕ್ಕೆ ಎತ್ತಲಾಗುತ್ತದೆ. 16 ಮೆಟಲ್‍ ಹಗ್ಗಗಳಿಂದ ಈ ಬಿಗಿಗೊಳಿಸಲಾಗಿದೆ. ಏಕಕಾಲದಲ್ಲಿ ಮೂರು ರೆಸ್ಟೋರೆಂಟ್ ಸಿಬ್ಬಂದಿ ಸೇರಿದಂತೆ, 22 ಮಂದಿ ಕುಳಿತುಕೊಳ್ಳಬಹುದು. ಇಲ್ಲಿನ ಟೇಬಲ್‍ಗಳು 360 ಡಿಗ್ರಿಯಲ್ಲಿ ತಿರುಗುತ್ತದೆ. ಇದರಿಂದ ಎತ್ತರದಿಂದ ಎಲ್ಲಾ ಭಾಗದ ಪ್ರಕೃತಿ ಸೌಂದರ್ಯವನ್ನು, ವೈಮಾನಿಕ ದೃಶ್ಯದಂತೆ ಕಣ್ತುಂಬಿಕೊಳ್ಳಬಹುದಾಗಿದೆ.

ಫ್ಲೈ ಡೈನಿಂಗ್‍ ಅನ್ನು ಸುರಕ್ಷತಾ ದೃಷ್ಟಿಯಿಂದ ನಿರ್ಮಿಸಿರುವ ವಿವರ ಇಂತಿದೆ ನೋಡಿ.

ಇದಕ್ಕೆ ಜರ್ಮನಿ ಟಿಯುವಿ ಸ್ಟೀಲ್‍ ಕೇಬಲ್‍ ಗಳನ್ನು ಬಳಸಿದ್ದು, ಈ ಕೇಬಲ್‍ಗಳು 100 ಟನ್‍ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಇಲ್ಲಿ ಕೇವಲ 4 ಟನ್‍ ತೂಕದ ಕ್ಯಾಬ್ ಟೇಬಲ್‍, 50 ಮೀಟರ್‍ ಎತ್ತರಕ್ಕೆ ಎತ್ತಲ್ಪಟ್ಟಿದೆ. ಈ ಕೇಬಲ್‍ ಜರ್ಮನಿಯ ಸುರಕ್ಷತಾ ಪೇಟೆಂಟ್‍ ಅನ್ನು ಹೊಂದಿದೆ. ಇಲ್ಲಿಗೆ ಭೇಟಿ ನೀಡುವ ವ್ಯಕ್ತಿಯು ಕನಿಷ್ಠ 45 ಅಡಿ ಎತ್ತರ ಮತ್ತು ಗರಿಷ್ಠ 150 ಕೆಜಿ ತೂಕ ಹೊಂದರಬೇಕು. ಇಲ್ಲಿಗೆ ಯಾವುದೇ ಬ್ಯಾಗ್‍ ಕೊಂಡೊಯ್ಯುವಂತಿಲ್ಲ. ಗರ್ಭಿಣಿಯರು ಮತ್ತು 13ಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಮೊಬೈಲ್‍ ಬಳಸಲು ಅವಕಾಶವಿದ್ದು, ರೆಸ್ಟೋರೆಂಟ್‍ ನಿಂದ ಹೊರ ಹೋಗುವ ಅನಿವಾರ್ಯತೆ ಇದ್ದರೆ ರೆಸ್ಟೋರೆಂಟ್‍ ನಿಂದ ಕೆಳಗಿಸಲಾಗುತ್ತದೆ.

ಫೋರ್ಬ್ಸ್‍ ನಿಯತಕಾಲಿಕದ ಪ್ರಕಾರ, ಪ್ರಪಂಚದ 10 ಅಸಾಧಾರಣ ರೆಸ್ಟೋರೆಂಟ್‍ ಗಳ ಪಟ್ಟಿಯಲ್ಲಿ ಫ್ಲೈ ಡೈನಿಂಗ್‍ ಕೂಡ ಒಂದಾಗಿದೆ ಎಂಬುದು ಇದರ ವಿಶೇಷತೆ. ಫ್ಲೈ ಡೈನಿಂಗ್‍ ರೆಸ್ಟೋರೆಂಟ್ ‍ನಲ್ಲಿ ಎರಡು ರೀತಿಯ ಆಯ್ಕೆಗಳಿವೆ.

ಅರ್ಧ ಗಂಟೆ ಮಾಕ್‍ ಟೈಲ್‍ ಸೆಷನ್‍: ಸಂಜೆ 5 ಗಂಟೆಗೆ ಪ್ರಾರಂಭವಾಗುತ್ತದೆ.

ಒಂದು ಗಂಟೆ ಡೈನಿಂಗ್ ಸೆಷನ್‍: 7 ಗಂಟೆಗೆ ಪ್ರಾರಂಭವಾಗುತ್ತದೆ.

ನೀವು ಕೂಡ ನಿಮ್ಮ ಸ್ನೇಹಿತರು, ಇಲ್ಲವೇ ಕುಟುಂಬದ ಜೊತೆ ಔತಣಕೂಟವನ್ನು ಆಯೋಜಿಸಬಹುದು. ಡಿಜೆ ಪಾರ್ಟಿ, ಸಂಗೀತ ಪ್ರದರ್ಶನಗಳ ಜೊತೆಗೆ ವಿಶೇಷ ಸವಲತ್ತಿನೊಂದಿಗೆ ಥ್ರಿಲ್ಲಿಂಗ್‍ ಲಂಚ್‍ ಪ್ಲಾನ್‍ ಮಾಡಬಹುದು. ಇಲ್ಲಿ ಹೊಸ ಹೊಸ ಉತ್ಪನ್ನಗಳಿಗೂ ಥ್ರಿಲ್ಲಿಂಗ್‍ ಸ್ಟಾರ್ಟ್‍ ಅಪ್‍ ನೀಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

#skydining #skydininginbengaluru #bengaluru #balkaninews #flydining

Tags