18+ಜೀವನ ಶೈಲಿ

ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಆಹಾರ ಪದಾರ್ಥಗಳು

ಆರೋಗ್ಯಕರ ಸಂಬಂಧಗಳಿಗೆ ಲೈಂಗಿಕ ಜೀವನದಲ್ಲಿ ಸಂತೃಪ್ತಿ ಅಗತ್ಯ. ಪುರುಷರಲ್ಲಿ ಸಹಜ ಲೈಂಗಿಕ ಬಯಕೆಗಳನ್ನು ಹೆಚ್ಚಿಸುವ ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಲೈಂಗಿಕ ಜೀವನ

ಲೈಂಗಿಕ ಜೀವನದಲ್ಲಿ ಸಮಸ್ಯೆಗಳ ಕಾರಣ ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿ, ಅವರ ನಡುವಿನ ಅಂತರ ಹೆಚ್ಚಾಗುತ್ತದೆ. ಆರೋಗ್ಯ ಸಂಬಂಧಗಳಿಗೆ, ಜೀವನಕ್ಕೆ ಸೆಕ್ಸ್ ಅಥವಾ ಲೈಂಗಿಕ ಸಂತೃಪ್ತಿ ಅತ್ಯಗತ್ಯ. ಲೈಂಗಿಕ ಸಮಸ್ಯೆಗಳಿಂದ ಪುರುಷರಲ್ಲಿ ಬಯಕೆಗಳನ್ನು ಹೆಚ್ಚಿಸುವ ಆಹಾರ ಪದಾರ್ಥಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

ತರಕಾರಿ

ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಲಭ್ಯವಿರುವ ಇನ್ನೊಂದು ಮಾರ್ಗ – ನಾವು ತಿನ್ನುವ ಆಹಾರದಲ್ಲಿ ತರಕಾರಿಗಳನ್ನು ಬೆಸಿಕೊಳ್ಳುವುದು. ತರಕಾರಿಯಲ್ಲಿ ಇರುವ “ಇನ್ ಡೋಲ್ಸ್” ಅಂಶದ ಕಾರಣ ದೇಹದಲ್ಲಿ ಟೆಸ್ಟೋಸ್ಟೆರಾನ್ ಪ್ರಮಾಣ ಹೆಚ್ಚಿ, ಲೈಂಗಿಕ ಸಾಮರ್ಥ್ಯ ಸಹ ಹೆಚ್ಚುತ್ತದೆ. ಬ್ರೊಕಲಿ, ಕ್ಯಾಬೇಜ್, ಮೊಳಕೆ ಕಾಳುಗಳು ಮತ್ತು ಖಾಲಿಫ್ಲವರ್ ನಂತಹವುಗಳಲ್ಲಿ ಇಂಡೋಲ್ಸ್ ಹೆಚ್ಚಾಗಿರುತ್ತದೆ.

ವಿಟಮಿನ್ D

ವೀರ್ಯಕಣಗಳ ಉತ್ಪತ್ತಿ ಹೆಚ್ಚಾಗಲು ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗಲು ವಿಟಮಿನ್ ಡಿ ಅಗತ್ಯ. ಈ ಪೋಷಕಾಂಶ ಟೆಸ್ಟೋಸ್ಟೆರಾನ್ ಪ್ರಮಾಣವನ್ನು ಹೆಚ್ಚಿಸಿ, ಸಹಜ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸೂರ್ಯಕಾಂತಿಯಿಂದ ಅಷ್ಟೇ ಅಲ್ಲದೆ, ಮೀನು, ಅಣಬೆ, ಧಾನ್ಯಗಳು, ಮೊಟ್ಟೆಯಲ್ಲಿ ವಿಟಮಿನ್ ಡಿ ಹೆಚ್ಚಾಗಿರುತ್ತದೆ.

ಡಾರ್ಕ್ ಚಾಕೋಲೇಟ್

ಫ್ಲೆವನಾಯ್ಡ್ ಮತ್ತು ಫಿನೈಲ್ ಇಥೈಲ್ ಅಮೈನ್ನಂತಹ ಸಂಯೋಜನೆಗಳು ಕೋಕೋವಾ ಹೊಂದಿರುತ್ತವೆ. ಇವು ಮಿದುಳಿನಲ್ಲಿ ಡೋಪಮೈನ್ ಮತ್ತು ಸೆರೋಟೋನಿನ್ನಂತಹವನ್ನು ಬಿಡುಗಡೆಗೆ ಪ್ರೇರೇಪಿಸುತ್ತವೆ. ಆದಕಾರಣ ಇವನ್ನೂ ಸಹ ಆಹಾರದಲ್ಲಿ ಸೇರಿಸಿಕೊಂಡರೆ ಉತ್ತಮ ಲೈಂಗಿಕ ಸಾಮರ್ಥ್ಯ ನಿಮ್ಮದಾಗುತ್ತದೆ.

ಕೊಬ್ಬಿನ ಪದಾರ್ಥಗಳು

ಕೊಬ್ಬಿನ ಪದಾರ್ಥಗಳು ನಮ್ಮ ಆರೋಗ್ಯಕ್ಕೆ ಅಷ್ಟು ಒಳಿತಲ್ಲ ಎಂದು ಗೊತ್ತೇ ಇದೆ. ಇವು ಟೆಸ್ಟೋಸ್ಟೆರಾನ್ ಪ್ರಮಾಣವನ್ನು ಸಹ ಹೆಚ್ಚಿಸುತ್ತವೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಇವು ಲೈಂಗಿಕ ಸಾಮರ್ಥ್ಯವನ್ನು ಸಹಜವಾಗಿ ಹೆಚ್ಚಿಸುತ್ತವೆ. ಆದಕಾರಣ ಆಯಿಲ್, ಸೀಡ್ಸ್, ನಟ್ಸ್, ಹಾಲಿನ ಉತ್ಪನ್ನಗಳು, ಅವಕೋಡಾದಂತಹ ಟೆಸ್ಟೊಸ್ಟೆರಾನ್ ಪ್ರಮಾಣವನ್ನು ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಪಾಲಿಸಿದರೆ ಉತ್ತಮ.

ಬೆಳ್ಳುಳ್ಳಿ ಮತ್ತು ಈರುಳ್ಳಿ

ಬೆಳ್ಳುಳ್ಳಿ ಮತ್ತು ಈರುಳ್ಳೀ ಇವೆರಡೂ ಸಹ ಅಲ್ಲಿಸಿನ್ ಎಂಬ ಸಂಯೋಜನೆಯನ್ನು ಹೊಂದಿರುತ್ತವೆ. ಟೆಸ್ಟೋಸ್ಟೆರಾನ್ ಪ್ರಮಾಣವನ್ನು ಹೆಚ್ಚಿಸಿ, ಲೈಂಗಿಕ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತವೆ. ಆದಕಾರಣ ಇವನ್ನು ನಿಮ್ಮ ಆಹಾರದಲ್ಲಿ ಹೆಚ್ಚು ಬೆರೆಸಿಕೊಂಡರೆ ಲೈಂಗಿಕ ಜೀವನವನ್ನು ಆಸ್ವಾದಿಸಬಹುದು.

Tags

Related Articles