ಆಹಾರಜೀವನ ಶೈಲಿ

ಆಹಾರ ಪದಾರ್ಥಗಳನ್ನು ಸಂಸ್ಕರಿಸಲು ಮೆನೆಯಲ್ಲಿ ಹೀಗೆ ಮಾಡಿ ನೋಡಿ

ಪದಾರ್ಥದ ಬೆಲೆ ಗಗನಕ್ಕೇರುತ್ತಿದೆ.ಹಾಗಾಗಿ ಆಹಾರ ಪದಾರ್ಥಗಳನ್ನು ಸಂಸ್ಕರಿಸುವ ಅಗತ್ಯ ಹೆಚ್ಚಿದೆ. ಅದಕ್ಕಾಗಿ ಈ ಸಲಹೆ ಸಹಾಯಕವಾಗಬಹುದು.

  • ನಿಂಬೆ ಹಣ್ಣಿನ್ನು ಬಿಸಿ ನೀರಿನಲ್ಲಿ ಒಂದು ಗಂಟೆ ಹಾಕಿಟ್ಟು ನಂತರ ಜ್ಯೂಸ್‌ ಮಾಡಿದರೆ ರಸ ಹೆಚ್ಚು ಬರುತ್ತದೆ.
  • ದಪ್ಪ ಅಥವಾ ಸಣ್ಣ ಉಪ್ಪುನ್ನು ಮಿಕ್ಸಿ ಜಾರ್‌ಗೆ ಹಾಕಿ ಆಗಾಗ ತಿರುಗಿಸಿದರೆ ಬ್ಲೇಡ್‌ ಹರಿತವಾಗುತ್ತದೆ.
  • ಲವಂಗಗಳನ್ನು ಸಕ್ಕರೆ ಡಬ್ಬಕ್ಕೆ ಹಾಕಿಡುವುದರಿಂದ ಇರುವೆ ಬರುವುದಿಲ್ಲ.
  • ಈರುಳ್ಳಿ, ಆಲೂಗೆಡ್ಡೆ, ಟೊಮೇಟೊಗಳನ್ನು ಬೇರೆ ಬೇರೆ ಬುಟ್ಟಿಗಳಲ್ಲಿ ಇಡಿ. ಆಗ ಹೆಚ್ಚು ದಿನ ಕೆಡದಂತೆ ಸಂಗ್ರಹಿಸಬಹುದು.
  • ಬಾಳೆಹಣ್ಣನ್ನು ಒಂದೊಂದಾಗಿ ಬೇರ್ಪಡಿಸಿ ಅದರ ತೊಟ್ಟುಗಳಿಗೆ ಸಿಲ್ವರ್‌ ಫಾಯಿಲ್‌ ಸುತ್ತಿಟ್ಟರೆ ಹಣ್ಣು ತಾಜಾವಾಗಿರುತ್ತದೆ.
    Related image
  • ಬಾಣಲೆ ಅಥವಾ ತವಾ ಗ್ಯಾಸ್‌ ಮೇಲಿಟ್ಟು ಸ್ವಲ್ಪ ಬಿಸಿ ಮಾಡಿದರೆ ನಾನ್‌ಸ್ಟಿಕ್‌ ಪಾತ್ರೆಗೆ ಅಂಟಿರುವ ಹೊಸ ಸ್ಟಿಕರ್‌ ತೆಗೆಯುವುದು ಸುಲಭ.
  • ಮಾರುಕಟ್ಟೆಯಿಂದ ತಂದ ಹಸಿ ಶುಂಠಿಯನ್ನು ಉಪ್ಪು ಹಾಕಿದ ನೀರಲ್ಲಿ ನೆನೆಸಿ ನಲ್ಲಿ ಕೆಳಗಡೆ ಹರಿಯುವ ನೀರಿನರಲ್ಲಿ ತೊಳೆದು ಒಣಗಿಸಿ, ಪ್ಲಾಸ್ಟಿಕ್‌ ಕವರ್‌ನಲ್ಲಿ ಹಾಕಿ ಫ್ರಿಜ್‌ನಲ್ಲಿಡಿ.
  • ಕ್ಯಾಬೇಜ್‌ ಬೇಯಿಸುವಾಗ ವಾಸನೆ ಬರಬಾರದೆಂದರೆ ಬ್ರೆಡ್‌ ತುಂಡು ಹಾಕಿ ಬೇಯಿಸಿ.

 Related image

 

Tags

Related Articles