ಆಹಾರ

ಮಟನ್ ಘೀ ರೋಸ್ಟ್ ತಯಾರಿಸುವ ವಿಧಾನ

ಬೇಕಾಗುವ ಪದಾರ್ಥಗಳು

• ತುಪ್ಪ-3 ಚಮಚ
• ಶುಂಠಿ, ಬೆಳ್ಳುಳ್ಳು ಪೇಸ್ಟ್- 1 ಚಮಚ
• ಅರಿಶಿನ- ಅರ್ಧ ಚಮಚ
• ಕುರಿ ಮಾಂಸ- 1 ಕೆಜಿ
• ಉಪ್ಪು- ರುಚಿಗೆ ತಕ್ಕಷ್ಟು
• ಕಾಶ್ಮೀರಿ ಮೆಣಸಿನ ಕಾಯಿ – 10
• ದನಿಯಾ- 1 ಚಮಚ
• ಕಾಳು ಮೆಣಸು- 1 ಚಮಚ
• ಸೋಂಪು- 1 ಚಮಚ
• ಜೀರಿಗೆ- 2 ಚಮಚ
• ಚಕ್ಕೆ- 1
• ಲವಂಗ- 4
• ಮರಾಠಿ ಮೊಗ್ಗು- 1
• ಒಣಗಿದ ಮೆಣಸಿನ ಕಾಯಿ- 6
• ಶುಂಠಿ – ಸ್ವಲ್ಪ
• ಬೆಳ್ಳುಳ್ಳು – 2 ಎಸಳು
• ನಿಂಬೆಹಣ್ಣಿನ ರಸ- 1 ಚಮಚ
• ಮೊಸರು- 1 ಚಮಚ

ಮಾಡುವ ವಿಧಾನ…

• ಮೊದಲು ಕುಕ್ಕರ್ ಗೆ ತುಪ್ಪ ಕಾಯಿಸಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಹಾಕಿ ಹುರಿದುಕೊಳ್ಳಬೇಕು.
• ನಂತರ ತೊಳೆದ ಮಾಂಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕೈಯಾಡಿಸಿ, ಬೇಯಲು ನೀರು ಹಾಕಿ ಕುಕ್ಕರ್ ಮುಚ್ಚಿ   4-  5 ಕೂಗು ಕೂಗಿಸಿಕೊಳ್ಳಬೇಕು.
• ನಂತರ ಒಲೆಯ ಮೇಲೆ ಬಾಣಲೆಯಿಟ್ಟು ಕಾದ ನಂತರ, ಕಾಶ್ಮೀರಿ ಮೆಣಸಿನ ಕಾಯಿಯನ್ನು ಕೆಂಪಗೆ ಹುರಿದು       ತೆಗೆದಿಟ್ಟುಕೊಳ್ಳಬೇಕು.
• ಇದೇ ಬಾಣಲೆಗೆ, ದನಿಯಾ, ಕಾಳು ಮೆಣಸು, ಸೋಂಪು, ಜೀರಿಗೆ, ಚಕ್ಕೆ, ಲವಂಗ, ಮರಾಠಿ ಮೊಗ್ಗು, ಒಣಗಿದ ಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
• ನಂತರ ಮಿಕ್ಸಿ ಜಾರ್’ಗೆ ಹುರಿದಿಟ್ಟುಕೊಂಡಿದ್ದೆಲ್ಲವನ್ನೂ ಹಾಕಿ, ಶುಂಠಿ, ಬೆಳ್ಳುಳ್ಳು, ನಿಂಬೆರಸ ಹಾಗೂ ಸ್ವಲ್ಪ ನೀರು ಹಾಕಿ   ಚೆನ್ನಾಗಿ ರುಬ್ಬಿಕೊಳ್ಳಬೇಕು.
• ಕುಕ್ಕರ್ ಮುಚ್ಚಳ ತೆಗೆದು ಬೆಂದ ಮಾಂಸದಿಂದ ನೀರನ್ನು ಬಸಿದು ತೆಗೆದಿಟ್ಟುಕೊಳ್ಳಬೇಕು.
• ನಂತರ ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ ಸ್ವಲ್ಪ ತುಪ್ಪ, ರುಬ್ಬಿಕೊಂಡ ಮಿಶ್ರಣ, ಮೊಸರು, ಬೆಂದ ಮಾಂಸದಿಂದ   ತೆಗೆದ ನೀರು, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕುದಿಯಲು ಬಿಡಬೇಕು. ಮಸಾಲೆ ಗಟ್ಟಿಯಾಗುತ್ತಿದ್ದಂತೆಯೇ ಬಂದ   ಮಾಂಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, 2-3 ನಿಮಿಷ ಬೇಯಲು ಬಿಡಬೇಕು. ನಂತರ ಕರಿಬೇವಿನ ಎಲೆಗಳನ್ನು ಹಾಕಿ   ಅಲಂಕರಿಸಿದರೆ, ರುಚಿಕರವಾದ ಮಟನ್ ಘೀ ರೋಸ್ಟ್ ಸವಿಯಲು ಸಿದ್ಧ.

Tags