ಆಹಾರಜೀವನ ಶೈಲಿ

ಈ ಆಹಾರಗಳು ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸುತ್ತವೆ.

ಸಾಮಾನ್ಯವಾಗಿ ಲೈಂಗಿಕ ಆಸಕ್ತಿ ಹೆಚ್ಚಿಸುವ ಔಷಧಿಗಳು, ಮನೆಮದ್ದುಗಳು ಹೆಚ್ಚಾಗಿ ಪುರುಷರಿಗೆ ಇವೆ. ಮಹಿಳೆಯರಿಗೆ ತುಂಬಾ ಕಡಿಮೆ ಎಂದು ಹೇಳಬಹುದು. ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಂಠಿತವಾಗಲು ಹಲವು ಕಾರಣಗಳಿರಬಹುದು. ಒತ್ತಡ, ಹಾರ್ಮೋನ್‌ ಸಮಸ್ಯೆ, ಸಂಬಂಧಗಳಲ್ಲಿ ವೈಮನಸ್ಸು ಮತ್ತಿತರ ಕಾರಣಗಳಿರಬಹುದು.

ಆದರೆ ಕೆಲವೊಂದು ಆಹಾರಗಳು ಮಹಿಳೆಯರಲ್ಲಿ ವಯಾಗ್ರದಂತೆ ಕಾರ್ಯನಿರ್ವಹಿಸುತ್ತದೆ. ಅದರಲ್ಲೂ ಈ ಆಹಾರಗಳು ಆಕೆಯಲ್ಲಿ ಸೆಕ್ಸ್‌ ಬಯಕೆ ಹೆಚ್ಚಿಸುತ್ತವೆ:

ರೆಡ್ ವೈನ್‌ ಮಹಿಳೆಯರ ವಯಾಗ್ರ ಎಂದೇ ಹೇಳಲಾಗುವುದು. ರೆಡ್‌ ವೈನ್‌ ಕುಡಿಯುವ ಮಹಿಳೆಯರಲ್ಲಿ ಸೆಕ್ಸ್‌ ಡ್ರೈವ್‌ ಹೆಚ್ಚುತ್ತದೆ . ಎರಡು ಗ್ಲಾಸ್‌ ವೈನ್‌ ಕುಡಿದ ಮಹಿಳೆಯು ವೈನ್‌ ಕುಡಿಯದ ಮಹಿಳೆಗಿಂತ ಹೆಚ್ಚು ಲೈಂಗಿಕ ಸಾಮರ್ಥ್ಯ ಹೊಂದಿರುತ್ತಾಳೆ ಎಂದು 2009ರಲ್ಲಿ ಇಟಲಿಯಲ್ಲಿ ನಡೆಸಿದ ಅಧ್ಯಯನ ಹೇಳಿದೆ.

ಈ ಅಧ್ಯಯನದಲ್ಲಿ 800 ಮಹಿಳೆಯರು ಭಾಗವಹಿಸಿದ್ದರು. ವೈನ್‌ ಕುಡಿಯುವ ಮಹಿಳೆಯ ಲೈಂಗಿಕಾಸಕ್ತಿ ಇತರ ಮದ್ಯ ಕುಡಿಯುವ ಅಥವಾ ಕುಡಿಯದೇ ಇರುವ ಮಹಿಳೆಗಿಂತ ಹೆಚ್ಚಾಗಿರುವುದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಸಹಜವಾಗಿಯೇ ಅವರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸಲು ರೆಡ್‌ವೈನ್‌ ಸೇರಿದಂತೆ ಶತಾವರಿ ಬೇರು, ಅಶ್ವಗಂಧ ಮತ್ತಿತರ ಗಿಡಮೂಲಿಕೆಗಳು ಕೂಡ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸುವ ಕೆಲಸ ಮಾಡುತ್ತಾರೆ ಎನ್ನುತ್ತಾರೆ ತಜ್ಞರು.

ಇನ್ನು ಪಾಲಾಕ್‌ ಸೊಪ್ಪು, ಮೀನು, ಡಾರ್ಕ್ ಚಾಕಲೇಟ್‌ ಇವೆಲ್ಲಾ ದೇಹದಲ್ಲಿ ರಕ್ತ ಸಂಚಲನ ಕೆಳಮುಖವಾಗಿ ಹರಿಯುವಂತೆ ಮಾಡಿ ಆಕೆಯ ಮೂಡ್‌ ಹೆಚ್ಚಿಸುವುದು.

Tags

Related Articles

Leave a Reply

Your email address will not be published. Required fields are marked *