ಆಹಾರಜೀವನ ಶೈಲಿ

ನಿಮ್ಮ ಬೆಳಗಿನ ತಿಂಡಿ ಈ ರೀತಿ ಇದ್ದರೆ ವಯಸ್ಸೇ ಆಗಲ್ಲ!

ಈಗೀಗ ಆರೋಗ್ಯದ ಬಗ್ಗೀ, ವಯಸ್ಸಿನ ಬಗ್ಗೆ ಕಾಳಜಿ ಜಾಸ್ತಿಯಾಗುತ್ತಿದೆ. ಕೆಲವರೇನೋ ವಯಸ್ಸಾಗಿದ್ದರೂ ನೋಡಲು ಯುವಕರಂತೆ ಕಾಣುತ್ತಾರೆ. ಆದರೆ ಇನ್ನೂ ಕೆಲವರು ಇದಕ್ಕೆ ತದ್ವಿರುದ್ಧ. ಇದಕ್ಕೆಲ್ಲಾ ಲೈಫ್‍ಸ್ಟೈಲ್ ಕಾರಣ ಅನ್ನಬಹುದು.

ನಾವು ತಿನ್ನುವ ಆಹಾರ ಹಾಗೂ ನಮ್ಮ ಮನಸ್ಥಿತಿ ದೇಹದ ಆರೋಗ್ಯ ಹಾಗೂ ಸೌಂದರ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಆಹಾರಕ್ರಮದಲ್ಲಿ ಬೆಳಗಿನ ಬ್ರೇಕ್‌ಫಾಸ್ಟ್ ಪ್ರಮುಖ ಪಾತ್ರವಹಿಸುತ್ತದೆ. ಇಲ್ಲಿ ನಾವು ಯಂಗ್‌ ಲುಕ್‌ಗಾಗಿ ಯಾವ ರೀತಿಯ ಆಹಾರಕ್ರಮ ಒಳ್ಳೆಯದೆಂದು ಹೇಳಿದ್ದೇವೆ ನೋಡಿ:

ಬೆಳಗ್ಗೆ 6 ಗಂಟೆಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಹದ ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿಯಿರಿ.

  1. ಬೆಳಗ್ಗೆ 7 ಗಂಟೆಗೆ ಒಂದು ಕಪ್‌ ಗ್ರೀನ್‌ ಟೀ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಆರೋಗ್ಯಕ್ಕೆ ಒಳ್ಳೆಯದು. ಮಿದುಳನ್ನು ಚುರುಕುಗೊಳಿಸುತ್ತದೆ.
  2. ಬೆಳಗ್ಗೆ 8 ಗಂಟೆಗೆ ಒಂದು ಕಪ್ ವೆಜಿಟೇಬಲ್‌ ಸೂಪ್‌.

ಬ್ರೇಕ್‌ ಫಾಸ್ಟ್‌ಗೆ

ಬ್ರೌನ್‌ ಬ್ರೆಡ್‌ ಸ್ಯಾಂಡ್‌ವಿಚ್‌ ಮತ್ತು ಆಮ್ಲೇಟ್ ಅಥವಾ, ಉಪ್ಪಿಟ್ಟು, ಇಡ್ಲಿ ಹೀಗೆ ಪ್ರೊಟೀನ್‌ ಅಂಶ ಅಧಿಕವಿರುವ ಆಹಾರವನ್ನು ಸೇವಿಸಿ.

ಬೆಳಗ್ಗೆ ಹಣ್ಣು ತಿನ್ನುವುದಾದರೆ ಬ್ರೇಕ್‌ಫಾಸ್ಟ್‌ಗೆ ಮುಂಚಿತವಾಗಿ ಸೇವಿಸಿ. ನಂತರ 1 ಗ್ಲಾಸ್ ಹಾಲು ಕುಡಿಯಿರಿ.

ಇತರ ಟಿಪ್ಸ್‌

* ಬೆಳಗ್ಗೆ ಬೇಗನೆ ಏಳಿ. ಇದರಿಂದ ರಿಲ್ಯಾಕ್ಸ್‌ ಆಗಿ ಕೆಲಸ ಮಾಡಲು ಸಾಕಷ್ಟು ಸಮಯ ದೊರೆಯುತ್ತದೆ.

* ಅವಸರ-ಅವಸರವಾಗಿ ಬ್ರೇಕ್‌ ಫಾಸ್ಟ್ ಮಾಡಬೇಡಿ.

* 9 ಗಂಟೆ ಮುಂಚಿತವಾಗಿ ಬ್ರೇಕ್‌ಫಾಸ್ಟ್‌ ಮುಗಿಸಿ.

* ತಿನ್ನುವಾಗ ಬೇಡದ ಆಲೋಚನೆ ಬೇಡ

* ಟಿವಿ ನೋಡುತ್ತಾ ತಿನ್ನಬೇಡಿ.

 

Tags