ಆಹಾರಜೀವನ ಶೈಲಿ

ಫ್ರೂಟ್ ಸಲಾಡ್ ತಿನ್ನುವಾಗ ಎಚ್ಚರ ಈ ನಿಯಮಗಳನ್ನು ಪಾಲಿಸಿ…!

ಫ್ರೂಟ್ ಸಲಾಡ್ ಎಂದರೆ ಸಾಕು ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬ ಅಭಿಪ್ರಾಯ ಬಹುತೇಕ ಮಂದಿಯಲ್ಲಿದೆ. ಹೌದು ಫ್ರೂಟ್ ಸಲಾಡ್ ಒಳ್ಳೆಯದೇ. ಆದರೆ ನಾವು ತಿನ್ನುವು ವಿಧಾನ, ಯಾವ ಹಣ್ಣುಗಳನ್ನು ಬೆರೆಸಬೇಕು, ಯಾವುದನ್ನೂ ಬೆರೆಸಬಾರದು ಎಂಬುದು ಗೊತ್ತಿರಬೇಕು. ಇಲ್ಲದಿದ್ದರೆ ಆರೋಗ್ಯಕ್ಕಿಂತ ಅನಾರೋಗ್ಯಕ್ಕೆ ಹೆಚ್ಚು.

ಫ್ರೂಟ್ ಸಲಾಡ್ ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ಎಲ್ಲಾ ಬಗೆಯ ಹಣ್ಣುಗಳನ್ನು ಮಿಕ್ಸ್ ಮಾಡಿ ತಿನ್ನುವಂತಿಲ್ಲ. ಹೌದು ನಮ್ಮೆಲ್ಲಿ ಹೆಚ್ಚಿನವರು ಎಲ್ಲಾ ಹಣ್ಣುಗಳನ್ನು ಮಿಕ್ಸ್ ಮಾಡಿ ತಿನ್ನಬಹುದೆಂದೇ ಭಾವಿಸುತ್ತೇವೆ, ಆದರೆ ಕೆಲವೊಂದು ಹಣ್ಣುಗಳನ್ನು ಮಿಕ್ಸ್ ಮಾಡಿದರೆ ನಮ್ಮ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಬನ್ನಿ, ಯಾವ ಹಣ್ಣನ್ನು ಮಿಕ್ಸ್ ಮಾಡಿ ತಿನ್ನಬಾರದೆಂದು ನೋಡೋಣ:

ಕಲ್ಲಂಗಡಿ, ಕರ್ಬೂಜ ಈ ರೀತಿಯ ಹಣ್ಣುಗಳನ್ನು ಬೇರೆ ಹಣ್ಣುಗಳ ಜತೆ ಮಿಕ್ಸ್ ಮಾಡಬೇಡಿ:

ಈ ಹಣ್ಣುಗಳನ್ನು ಬೇರೆ ಹಣ್ಣುಗಳ ಜತೆ ಮಿಕ್ಸ್ ಮಾಡಿದರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಈ ಹಣ್ಣುಗಳಲ್ಲಿ ನೀರಿನಂಶ ಅಧಿಕವಿರುವುದರಿಂದ ಬೇಗ ಜೀರ್ಣವಾಗುವುದು, ಉಳಿದ ಹಣ್ಣುಗಳು ಸ್ವಲ್ಪ ಅಧಿಕ ಸಮಯ ತೆಗೆದುಕೊಳ್ಳುವುದು. ಆದ್ದರಿಂದ ಈ ಹಣ್ಣುಗಳನ್ನು ಬೇರೆ ಹಣ್ಣುಗಳ ಜತೆ ಮಿಕ್ಸ್ ಮಾಡಬೇಡಿ.

ಸಿಹಿ ಹಣ್ಣುಗಳ ಜತೆ ಅಸಿಡಿಕ್ ಇರುವ ಹಣ್ಣುಗಳನ್ನು ಮಿಕ್ಸ್ ಮಾಡಬೇಡಿ.

ಉದಾಹರಣೆಗೆ ದ್ರಾಕ್ಷಿ,ಸ್ಟ್ರಾಬೆರಿಯನ್ನು, ದಾಳಿಂಬೆ, ಪೀಚ್ ಈ ರೀತಿಯ ಹಣ್ಣುಗಳನ್ನು ಬಾಳೆಹಣ್ಣಿನ ಜತೆ ಮಿಕ್ಸ್ ಮಾಡಿ ತಿನ್ನಬೇಡಿ. ಅದೇ ದ್ರಾಕ್ಷಿ, ಸ್ಟ್ರಾಬೆರಿ ಈ ರೀತಿಯ ಅಸಿಡಿಕ್ ಹಣ್ಣುಗಳನ್ನು ಮಿಕ್ಸ್ ಮಾಡಿ ತಿನ್ನಬಹುದು.

ಅದೇ ರೀತಿ ಸೀಬೆಕಾಯಿ, ಬಾಳೆಹಣ್ಣನ್ನು ಮಿಕ್ಸ್ ಮಾಡಬೇಡಿ.

ಈ ರೀತಿ ತಿನ್ನುವುದರಿಂದ ತಲೆ ಸುತ್ತು, ವಾಂತಿ ಬಂದಂತೆ ಅನಿಸುವುದು ಈ ರೀತಿಯ ಸಮಸ್ಯೆ ಕಾಣಿಸಬಹುದು.

ಹಣ್ಣು ಮತ್ತು ತರಕಾರಿಗಳನ್ನು ಮಿಕ್ಸ್ ಮಾಡಬೇಡಿ:

ಹಣ್ಣು ಮತ್ತು ತರಕಾರಿ ಜತೆಯಾಗಿ ತಿಂದರೆ ಹಣ್ಣುಗಳು ಬೇಗನೆ ಜೀರ್ಣವಾಗಿ, ಅದರಲ್ಲಿರುವ ಸಕ್ಕರೆಯಂಶ ತರಕಾರಿ ಜೀರ್ಣವಾಗುವುದನ್ನು ನಿಧಾನಗೊಳಿಸುತ್ತದೆ. ಇದರಿಂದ ಅಜೀರ್ಣ ಸಮಸ್ಯೆಯೂ ಕಾಡಬಹುದು.

ಕಿತ್ತಳೆ, ಕ್ಯಾರೆಟ್ ಜತೆಗೆ ತಿಂದರೆ ಎದೆಉರಿ ಕೂಡ ಬರಬಹುದು.

ಜೋಳ, ಆಲೂಗಡ್ಡೆ, ಬ್ರೊಕೋಲಿ, ಪಾಲಾಕ್ ಇಂತಹ ತರಕಾರಿಗಳ ಜತೆಗೆ ಬಾಳೆಹಣ್ಣ, ದ್ರಾಕ್ಷಿ ಇವುಗಳನ್ನು ಮಿಕ್ಸ್ ಮಾಡಬೇಡಿ.

ಫ್ರೂಟ್ ಸಲಾಡ್‌ಗೆ 4-6 ಬಗೆಯ ಹಣ್ಣುಗಳನ್ನಷ್ಟೇ ಮಿಕ್ಸ್ ಮಾಡಿ.

ಉಪ್ಪಿನಂಶ ಅಧಿಕವಿರುವ ಆಹಾರ ತಿಂದರೆ ಕಲ್ಲಂಗಡಿಯಂತಹ ಹಣ್ಣುಗಳನ್ನು ತಿನ್ನಿ.

ರಾತ್ರಿ ಅಧಿಕ ಕಾರ್ಬೋಹೈಡ್ರೇಟ್ ಇರುವ ಆಹಾರ ತಿಂದರೆ ಬೆಳಗ್ಗೆ ಒಂದು ಸೇಬು ತಿನ್ನಿ. ಇದರಿಂದ ದೇಹದಲ್ಲಿ ಕಾರ್ಬೋಹೈಡ್ರೇಟ್ ಅನ್ನು ಬ್ಯಾಲೆನ್ಸ್ ಮಾಡಬಹುದು.

 

Tags