ಆರೋಗ್ಯಆಹಾರಜೀವನ ಶೈಲಿ

ಆರೋಗ್ಯವರ್ಧಕ ಮಿಲ್ಲೆಟ್ ಗಂಜಿ

ಬೆಂಗಳೂರು, ಜ.13: ರುಚಿಯಲ್ಲಿ ವಿಭಿನ್ನವಾದ ತಯಾರಿಸಲು ಅತೀ ಸುಲಭವಾದ ಅಪಾರ ಪೋಷಕಾಂಶಗಳಿಂದ ಕೂಡಿದ ಸರಳವಾದ ಜೀರ್ಣವಾಗುವ ರೆಸಿಪಿಯೇ ಮಿಲ್ಲೆಟ್‍ ಗಂಜಿ ಅಥವಾ ಸಿರಿಧಾನ್ಯದ ಗಂಜಿ.

ಗಂಜಿ ಮಾಡಲು ಅಗತ್ಯವಾದ ಪದಾರ್ಥಗಳು:

ನಿಮಗಿಷ್ಟವಾದ ಸಿರಿಧಾನ್ಯ (ಆರ್ಕಾ, ನವಣೆ, ಸಾಮೆ) ಯಾವುದಾದರೂ ಒಂದು – ಒಂದು ಕಪ್‍

ಹುರಳಿಕಾಯಿ- ½ ಕಪ್‍

ಕ್ಯಾರೆಟ್‍- ½ ಕಪ್‍

ಹಸಿಮೆಣಸಿನಕಾಯಿ – 3-4

ಶುಂಠಿ- ¼ ಇಂಚು

ಜೀರಿಗೆ- ½ ಚಮಚ

ಕರಿಬೇವಿನ ಸೊಪ್ಪು- ಸ್ವಲ್ಪ

ತೆಂಗಿನಕಾಯಿ ತುರಿ ಅಥವಾ ರಸ – 1 ಕಪ್‍

ನೀರು – 5-6 ಕಪ್‍

ಉಪ್ಪು ರುಚಿಗೆ ತಕ್ಕಷ್ಟು

ಈ ಮೇಲೆ ತಿಳಿಸಿದ ಎಲ್ಲಾ ಅಗತ್ಯ ಪದಾರ್ಥಗಳನ್ನು ರೈಸ್‍ ಕುಕ್ಕರ್‍ ನಲ್ಲಿ ಹಾಕಿ ಬೇಯಿಸಿ. ಬೆಂದ ನಂತರ ಬಿಸಿಯಾದ ರುಚಿಕರ ಗಂಜಿಗೆ ಸ್ವಲ್ಪ ತುಪ್ಪ ಹಾಕಿಕೊಂಡು ಮೊಸರು ಅಥವಾ ಚಾಟ್ಸ್‍ ಚಟ್ನಿ ಜೊತೆಗೆ ಬೆಳಗಿನ ತಿಂಡಿಗೆ ಮಾಡಿಕೊಳ್ಳಬಹುದು. ಇಡೀ ದಿನ ಆರಾಮದಾಯಕವಾಗಿರುತ್ತದೆ.

ರೈಸ್ ಕುಕ್ಕರ್ ಬೇಡವಾದಲ್ಲಿ ಮೇಲೆ ಹೇಳಿದ ಎಲ್ಲಾ ಪದಾರ್ಥವನ್ನು ದಪ್ಪ ತಳವಿರುವ ಪಾತ್ರೆಗೆ 20-25 ನಿಮಿಷ ನೇರವಾಗಿ ಬೇಯಿಸಬಹುದು.

#ragiambali #ragiganji #healthyfoods #balkaninews

Tags