ಆರೋಗ್ಯಜೀವನ ಶೈಲಿ

ಗಣಪತಿಗೆ ವಿಶೇಷ ಗರಿಕೆ ಹುಲ್ಲು, ಇದರಲ್ಲಿಗೆ ಹಲವಾರು ಉಪಯೋಗಗಳು

ಹುಲ್ಲು ಹುಲ್ಲೆಂದು ಕಡೆಗಣಿಸದಿರಿ ಗರಿಕೆ ಹುಲ್ಲನ್ನು..

ಸಸ್ಯಗಳ ಜಾತಿಯಲ್ಲಿ “ಗರಿಕೆ ಹುಲ್ಲು” ತುಂಬಾ ಶ್ರೇಷ್ಠವಾದುದು. ಇದು ಗಿಡಮೂಲಿಕೆ ಪಟ್ಟಿಯಲ್ಲಿ ಉನ್ನತ ಸ್ಥಾನವನ್ನು ಪಡೆದಿದೆ. ಇದಕ್ಕೆ ಸಂಜೀವಿನಿ ಎಂದೇ ಕರೆಯುವ ವಾಡಿಕೆ ಇದೆ. ಇದನ್ನು ಗರಿಕೆ,ಅಮರೀ, ಗರಿಕ, ಕರಿಕೆ, ಹರಲೀ, ಅಮೃತ ಹುಲ್ಲು ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ.ಗರಿಕೆ ಹುಲ್ಲು ನಮ್ಮ ದೇಶಾದ್ಯಂತ ಎಲ್ಲೆಡೆ ಕಂಡು ಬರುವ ಅಮೂಲ್ಯ ಗಿಡಮೂಲಿಕೆಗಳಲ್ಲಿ ಒಂದಾಗಿದೆ. ಇದು ಎಲ್ಲೆಂದರಲ್ಲಿ ಬೆಳೆದು, ಚಿಗುರಿ, ಬೇರು ಬಿಟ್ಟು ಹರಡಿಕೊಳ‍್ಳುವುದು. ಇದು ಬೇರೂರಿ ಬೆಳೆಯಲು ಅಲ್ಪವಾದರೂ ತೇವಾಂಶ ಬೇಕು. ಇದು ನೆಲದುದ್ದಕ್ಕೂ ಬೇರುಬಿಡುತ್ತಾ ಬಂದು ಸಮೃದ್ಧವಾಗಿ ಎಲ್ಲಡೆ ಹರಡುತ್ತದೆ.

ಗರಿಕೆ ಹುಲ್ಲು ಇಂದು ನಿನ್ನೆಯದಲ್ಲ. ಪುರಾಣ ಕಥನಗಳಲ್ಲೇ ಕಂಡು ಬಂದಿದೆ ಡೊಳ‍್ಳು ಹೊಟ್ಟೆ ಗಣಪತಿಗೆ ಎಷ್ಟು ಆಹಾರ ತಿಂದರೂ ಸಾಕಾಗುತ್ತಿರಲಿಲ್ಲವಂತೆ. ಆಗ ತಾಯಿ ಪಾರ್ವತಿಯು ಗರಿಕೆ ರಸದೊಂದಿಗೆ ಹಾಲು ಬೆರೆಸಿದ ಪಾನಿಯನ್ನು ಕುಡಿಯಲು ಕೊಟ್ಟಾಗ ತೃಪ್ತಿಯಿಂದ ಕುಡಿದು ತೇಗುತ್ತಿದ್ದನಂತೆ. ಹಾಗೆಯೇ ಇರಬೇಕು ಗಣಪತಿಯ ಆರಾಧನೆಯಲ್ಲಿ ಗರಿಕೆಗೆ ಪ್ರಥಮ ಸ್ಥಾನ .ಪ್ರಾಚೀನ ಕಾಲದಿಂದಲೂ ಸಹ ಭಾರತ ಬಹಳಷ್ಟು ಪ್ರಾಂತ್ಯಗಳಲ್ಲಿ ಗರಿಕೆ ಹುಲ್ಲನ್ನು ದೇವರಿಗೆ ಅರ್ಪಿಸುತ್ತಿರುವುದು ಮಾತ್ರವಲ್ಲ, ಈಗಲೂ ಸಹ ಸಾಮಾನ್ಯವಾಗಿ ಹಿಂದುಗಳು ತಮ್ಮೆಲ್ಲಾ ಶುಭ ಕಾರ್ಯಗಳ ಪ್ರಾಂಭದಲ್ಲಿ “ಬೆನಕ” ಎಂದು ಗರಿಕೆ ಹುಲ್ಲನ್ನು ವಿಘ್ನೇಶ್ವರನ ಪ್ರತೀಕವಾಗಿ ಪೂಜೆಗೈಯುವುದು ಸರ್ವವಿದಿತ. ಅಲ್ಲದೇ ನೈಸರ್ಗಿಕವಾಗಿ ಔಷಧೀಯ ಗುಣಗಳ ಅಗರವಾಗಿರುವ ಇದನ್ನು ಇಂದು ಸಹ ಪ್ರಾಕೃತಿಕ ಆರೋಗ್ಯ, ಆರ್ಯುವೇದ ಪದ್ದತಿಗಳಲ್ಲಿ ಚಿಕಿತ್ಸೆಗಾಗಿ ಬಳಸಲಾಗುತ್ತದೆ.

ಗರಿಕೆಯಲ್ಲಿ ಎರಡು ವಿಧಗಳಿವೆ. ಕಪ್ಪು ಹಾಗೂ ಬಿಳುಪು. ಅದರಲ್ಲೂ ಕಪ್ಪು ಗರಿಕೆ ಬಹಳ ಶ್ರೇಷ್ಠ. ಪೂಜೆ, ಹವನ ಮುಂತಾದ ಧಾರ್ಮಿಕ ವಿಧಿಗಳಲ್ಲೂ ಕಪ್ಪು ಗರಿಕೆಗೆ ಮೊದಲ ಪ್ರಾಧಾನ್ಯತೆ. ಗರಿಕೆ ಹುಲ್ಲು ಬಿ ಮತ್ತು ಸಿ ಜೀವ ಸತ್ವವನ್ನು ಒಳಗೊಂಡಿದೆ. ಆರೋಗ್ಯವಂತರೂ ಕೂಡ ತಮ್ಮ ಆರೂಗ್ಯ ರಕ್ಷಣೆಯ ದೃಷ್ಟಿಯಿಂದ ದಿನಕ್ಕೆ ಒಂದು ಸಲ ಗರಿಕೆ ರಸ ಸೇವಿಸುವುದು ತುಂಬಾ ಒಳ‍್ಳೆಯದು.

ಇಂದಿನ ಯುವ ಜನಾಂಗ ಧೂಮಪಾನ ಮಧ್ಯಪಾನ ಇತ್ಯಾದಿ ನಿಯಂತ್ರಿಸಿ ಆಹಾರ ಕಡಿಮಡಗೊಳಿಸಿ, ಗರಿಕೆಹುಲ್ಲಿನ ತಾಜಾ ರಸ ಸೇವನೆಯಿಂದ ತೂಕ ಕಡಿಮೆ ಮಾಡಿಕೊಳ‍್ಳಬಹುದು. ಬೊಜ್ಜು ನಿವಾರಣೆಗೆ ದಿವ್ಯ ಔಷಧ.ವಾತ, ಪಿತ್ತ, ಕಫ ಇವುಗಳ ಅಸಮತೋಲನೆಯಿಂದ ಉಂಟಾದ ವಿಕಾರಗಳನ್ನು ಸರಿಪಡಿಸುತ್ತದೆ. ಏಡ್ಸ್, ಕ್ಯಾನ್ಸರ್, ಟ್ಯೂಮರ್ ಮುಂತಾದ ಮಾರಕ ವ್ಯಾಧಿಗಳಿಗೂ ಅನುಕೂಲಕಾರ.

Image result for garike hullu

ಗರಿಕೆ ಹುಲ್ಲಿನ ರಸ ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ.

ಕಣ‍್ಣು:

ಗರಿಕೆ ರಸ ಸೇವಿಸುವುದರಿಂದ ಕಣ‍್ಣಿನ ಒಳಭಾಗದ ಮೇಲೆ ಕೆಂಪು ಕಲೆಗಳು ಮೂಡುದ್ದಲ್ಲಿ ಮಾಯವಾಗುವವು. ದೃಷ್ಟಿ ಚುರುಕಾಗುವದು, ಕಣ‍್ಣು ಹೊಳಪಾಗುವುದು. ಕಣ‍್ಣು ನೋವು, ಕಣ‍್ಣುರಿ ನಿವಾರಣೆಯಾಗುತ್ತದೆ.

ಮೂಗು-ಬಾಯಿ:

ಮೂಗು ಕಟ್ಟುವಿಕೆ ನಿವಾರಿಸಿ ನಿರಂತರವಾಗಿ ಮೂಗಿನಿಂದ ನೀರು ಸೋರುವಿಕೆಯನ್ನು ತಡೆಗಟ್ಟುತ್ತದೆ. ಬಾಯಿಯ ದುರ್ಗಂಧ ನಿವಾರಣೆಗಾಗಿ ಗರಿಕೆ ರಸ ಕುಡಿಯಬಹುದು.

ಕಿವಿ:

ಕಿವಿ ಸೋರುವುಕೆಯನ್ನು ನಿವಾರಿಸುತ್ತದೆ.

ಹಲ್ಲುಗಳು:

ಹಲ್ಲು ನೋವು, ಒಸಡುಗಳಿಂದ ರಕ್ತ ಒಸರುವಿಕೆ ನಿವಾರಣೆಯಾಗಿ ಒಸಡುಗಳು ಗಟ್ಟಿಯಾಗುವವು.

ಮಧುಮೇಹ:

ಮಧುಮೇಹ ತೊಂದರೆಯುಳ‍್ಳವರು, ಗರಿಕೆ ರಸಕ್ಕೆ ಯಾವ ಸಿಹಿಯನ್ನೂ ಬೆರೆಸದೆ ಹಾಗೆಯೇ ಸೇವಿಸಬೇಕು.

ಮೊಡವೆ ನಿವಾರಣೆ:

ಇದು ಮುಖಕ್ಕೆ ಕಾಂತಿ ತರುವುದು. ಮೊಡವೆ ಕೂಡ ಒಣಗಿ ಮುಖ ಕಾಂತಿ ಹೆಚ್ಚುವುದು.

ಕೇಶಸಂರಕ್ಷಣೆ:

ಗರಿಕೆ ಹುಲ್ಲಿನ ರಸ ಸೇವನೆಯಿಂದ ತಲೆಗೂದಲು ಉದುರುವುದು ಗುಣಪಡಿಸುತ್ತದೆ. ಅಕಾಲ ನರ ತಡೆಗಟ್ಟುವುದು, ನರೆಗೂದಲು ಕಡಿಮೆಯಾಗುವುದು. ತಲೆಗೂದಲು ಕಪ್ಪಾಗಿಸಿ ಹೊಳಪು ತರುವುದು. ತಲೆಕೂದಲ ಬುಡದಲ್ಲಿ ಹುಣ‍್ಣು ವಾಸಿಯಾಗುವುದು. ಗರಿಕೆ ಹುಲ್ಲಿನ ರಸವನ್ನು ಕೊಬ್ಬರಿ ಎಣ‍್ಣೆಗೆ ಬೆರೆಸಿ ತಲೆಕೂದಲ ಬುಡಗಳಿಗೆ ಹಚ್ಚುವುದರಿಂದಲೂ ಸಹ ತಲೆಕೂದಲು ಉದುರುವುದು ನಿಲ್ಲುವುದು.

 

Tags