ಆರೋಗ್ಯಜೀವನ ಶೈಲಿಫ್ಯಾಷನ್ಸೌಂದರ್ಯ

ಬರೀ 24 ಗಂಟೆಯಲ್ಲಿ ಮೊಡವೆ ಮಾಯವಾಗಿಸಲು ಹೀಗೆ ಮಾಡಿ

ಹದಿಹರೆಯದವರು ಹಾಗೂ ವಯಸ್ಕರನ್ನು ಕಾಡುವ ಸಹಜ ಹಾಗೂ ಸರ್ವೇಸಾಮಾನ್ಯವಾದ ಚರ್ಮದ ತೊಂದರೆಯೆಂದರೆ ಅದು ಮೊಡವೆ (ಪಿಂಪಲ್ಸ್). ಚರ್ಮದಲ್ಲಿರುವ ಕೂದಲಿನ, ಜಿಡ್ಡಿನ ಹಾಗೂ ಬೆವರಿನ ಗ್ರಂಥಿಗಳಲ್ಲಿ ಆಗುವ ಬದಲಾವಣೆಯೇ ಇದಕ್ಕೆ ಕಾರಣ. ಈ ಮೊಡವೆಗಳಿಗೆ ಮನೆಯಲ್ಲಿಯೇ ಸುಲಭ ಔಷಧಿ ಮಾಡಿಕೊಂಡು ಗುಣಪಡಿಸಿಕೊಳ್ಳಬಹುದು.

1 ಸಣ್ಣ ಬಟ್ಟಲಿಗೆ ನಿಂಬೆಹಣ್ಣಿನ ರಸವನ್ನು ಹಾಗೂ ಒಂದು ಸ್ಪೂನ್ ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ನಂತರ ಈ ಮಿಕ್ಸ್ ಮಾಡಿರುವಂತಹ ಮಿಶ್ರಣವನ್ನು ನಿಮ್ಮ ಮೊಡವೆಗಳ ಮೇಲೆ ಹಚ್ಚಿಕೊಂಡು, ನಿಮಿಷ ಬಿಟ್ಟು ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

2 ಒಂದು ಸಣ್ಣ ಬಟ್ಟಲಿಗೆ ಪೇಸ್ಟ್ ಹಾಕಿ ಅದನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿಕೊಂಡು,20 ನಿಮಿಷ ಬಿಟ್ಟು ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

3 ಕರಿಬೇವಿನ ಎಲೆಯನ್ನು ಅರಿಶಿನದೊಂದಿಗೆ ಅರೆದು ದಿನವೂ ಹಚ್ಚಿ ಕೆಲವು ನಿಮಿಷದ ನಂತರ ತೊಳೆದರೆ ಮೊಡವೆ ಸಮಸ್ಯೆಗೆ ಉತ್ತಮ ಪರಿಹಾರ ಕಾಣುತ್ತದೆ.

4 ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಸಿಟ್ರಿಕ್ ಆಸಿಡ್ ಆಗಿದೆ. ನಿಂಬೆ ಹಣ್ಣಿನ ಉಪಯೋಗ ಮೊಡವೆಗಳನ್ನು ಮಾಯವಾಗಿಸಲು ರಾಮಬಾಣವಾಗಿದೆ.

5 ಜೇನಿಗೆ ಹಲವು ಔಷಧೀಯ ಗುಣಗಳಿವೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಹೆಚ್ಚು ಕಾಂತಿಯುಕ್ತವಾಗಿಸಿ ನಿಮ್ಮ ಮುಖದ ಅಂದ ಹೆಚ್ಚಿಸುತ್ತದೆ.

6 ಐಸ್ ಕ್ಯೂಬ್ ನ್ನು ಮೊಡವೆ ಗಾಯದ ಮೇಲೆ ನಯವಾಗಿ ತಿಕ್ಕಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.

ಚುಕ್ಕಿ ಬಾಳೆಹಣ್ಣು ತಿನ್ನುವುದರಿಂದ ಆಗುವ ಲಾಭಗಳಿವು

#Pimples #HealthTips #LifeStyle

Tags