ಜೀವನ ಶೈಲಿಸೌಂದರ್ಯ

ಸೌಂಧರ್ಯವರ್ಧಕ, ಬಹು ಉಪಯೋಗಿ ಘೃತ ಯಾ ಮನೆ ತುಪ್ಪ!!

ಸೌಂದರ್ಯಕ್ಕೂ ಬಹಳ ಉತ್ತಮ

ನಮ್ಮ ಭಾರತೀಯ ವೈದ್ಯಕೀಯ ಪದ್ಧತಿಗಳಲ್ಲಿ ತುಪ್ಪಕ್ಕೆ ಅಗ್ರ ಸ್ಥಾನ. ಅನೇಕ ವರ್ಷಗಳಿಂದ ತುಪ್ಪವನ್ನು ಔಷಧವಾಗಿ, ಔಷಧಗಳ ತಯಾರಿಕೆಯಲ್ಲಿ ಬಳಸುತ್ತ ಬರಲಾಗಿದೆ. ತುಪ್ಪದ ಕರಗುವ ಬಿಂದು ಹೆಚ್ಚಿಗೆ ಇದೆ. ಹಾಗಾಗಿ ಆಹಾರಪದಾರ್ಥಗಳ ತಯಾರಿಕೆಯಲ್ಲಿ, ಇನ್ನಿತರ ಪದಾರ್ಥಗಳನ್ನು ಬೇಯಿಸಲು ತುಪ್ಪ ಉತ್ತಮ ಆಯ್ಕೆ. ನಾವು ಸೇವಿಸಿದ ಆಹಾರಪದಾರ್ಥಗಳಿಂದ ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ ‘ಕೆ ಯನ್ನು ಹೀರಿಕೊಳ್ಳಲು ತುಪ್ಪ ಸಹಕಾರಿ. ಈ ವಿಟಮಿನ್ ​ಗಳು ಕಣ್ಣಿನ ಆರೋಗ್ಯಕ್ಕೆ, ಚರ್ಮದ ಆರೋಗ್ಯಕ್ಕೆ ಹಾಗೂ ಇನ್ನಿತರ ದೈಹಿಕ ಕಾರ್ಯಗಳಿಗೆ ಬೇಕಾದಂತಹವುಗಳು. ಆಹಾರದಲ್ಲಿ ತುಪ್ಪವನ್ನು ತಿನ್ನುವದನ್ನು ಪ್ರೀತಿಸುತ್ತಿದ್ದರೆ, ಚರ್ಮಕ್ಕೆ ಪ್ರಯೋಜನಕಾರಿ  ಅಷ್ಟೇ ಅಲ್ಲದೆ ಸೌಂದರ್ಯಕ್ಕೂ ಬಹಳ ಉತ್ತಮ..

ಒಣ ಚರ್ಮಕ್ಕೆ ಒಳ್ಳೆಯದು

ಕೆಲವರದ್ದು  ಶುಷ್ಕ ಚರ್ಮವಾಗಿರುತ್ತದೆ..  ಶುಷ್ಕ ಚರ್ಮದವರಿಗೆ ತುಪ್ಪ ಬಹಳ ಒಳ್ಳೆಯದು.. ತುಪ್ಪದ ಕೆಲವು ಹನಿಗಳನ್ನು ತೆಗೆದುಕೊಂಡು ನಿಮ್ಮ ಚರ್ಮದ ಮೇಲೆ ಹಚ್ಚಿರಿ. ಕೆಲವು ನಿಮಿಷಗಳ ಕಾಲ ತುಪ್ಪವನ್ನು ಮಸಾಜ್ ಮಾಡಿ ಮತ್ತು ಕೆಲವೇ ನಿಮಿಷಗಳಲ್ಲಿ ಘೃತ ಅಥವಾ ತುಪ್ಪದ ಔಷಧೀಯ ಗುಣ ತ್ವಚೆಯ ಬಿರುಕುಗಳಿಗೆ ಮುಲಾಮಿನಂತೆ ಸೇರಿಕೊಂಡು ತ್ರೀವ್ರ ಚಳಿಯ ವಾತಾವರಣದಲ್ಲೂ ಮುಖ ಸೌಂದರ್ಯ ರಕ್ಷಣಾ ಕೆಲಸವನ್ನು ಕ್ಷಮತೆಯೊಂದ ಮಾಡುತ್ತದೆ…

Image result for ghee beauty tips

ಸುಕ್ಕು ಗಟ್ಟುವುದು ತಡೆಯುತ್ತದೆ

ತುಪ್ಪದಲ್ಲಿ ಇರುವ ವಿಟಮಿನ್ ಇ ವಯಸ್ಸಾದಂತೆ ಕಾಣುವುದನ್ನು ತಡೆಗಟ್ಟುತ್ತದೆ.. ನಿಯಮಿತವಾಗಿ ತುಪ್ಪವನ್ನು ತಿನ್ನುವುದರಿಂದ ಚರ್ಮವು ಚಿಕ್ಕದಾಗಿ ಮತ್ತು ಸುಕ್ಕುಗಟ್ಟದಂತೆ ತಡೆಯಲು ಸಹಾಯ ಮಾಡುತ್ತದೆ.

ಕೇವಲ 5 ಟೇಬಲ್ಸ್ಪೂನ್ ತುಪ್ಪ ತೆಗೆದುಕೊಂಡು ಅದನ್ನು ಯಾವುದಾದರೂ ತೈಲದೊಂದಿಗೆ 10 ಹನಿಗಳನ್ನು ಮಿಶ್ರಮಾಡಿ. ಸ್ನಾನ ಮಾಡಿದ ನಂತರ ನಿಮ್ಮ ದೇಹಕ್ಕೆ ಈ ಎಣ್ಣೆಯ ಕೆಲವು ಹನಿಗಳನ್ನು ಲೇಪಿಸಿ.. ಹೀಗೆ ಮಾಡುವುದರಿಂದ ನಿಮ್ಮ ಚರ್ಮವು ಮೃದುವಾಗಿ ಕಾಂತಿಯುತವಾಗಿ ಹೊಳೆಯಬಹುದು.

Image result for ghee beauty tips

ದಣಿದ ಕಣ್ಣುಗಳಿಗೆ

ನೀವು ಮಂದ ಮತ್ತು ದಣಿದ ಕಣ್ಣುಗಳಿಂದ ಬಳಲುತ್ತಿದ್ದರೆ, ಕೆಲವು ಹನಿ ತುಪ್ಪ ತೆಗೆದುಕೊಂಡು ನಿಮ್ಮ ಕಣ್ಣುಗಳ ಸುತ್ತಲೂ ಲೇಪಿಸಬೇಕು. ಕಣ್ಣಿನೊಳಗೆ ತುಪ್ಪ ಹೋಗದಂತೆ ಖಚಿತಪಡಿಸಿಕೊಳ್ಳಿ. ಕಣ್ಣುಗಳ ಸುತ್ತಲೂ ತುಪ್ಪದ ನಿಯಮಿತ ಮಸಾಜ್ ನಿಂದ ನಿಮ್ಮ ಕಣ್ಣುಗಳು ಮೊದಲಿನಂತೆ ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತದೆ.

ತುಟಿಗೆ ಬಹಳ ಒಳ್ಳೆಯದು

ಒಣ ತುಟಿಗಳಿಗೆ ತುಪ್ಪ ಹಚ್ಚಿ ಮಸಾಜ್ ಮಾಡಿ.. ಇದರಿಂದ ನಿಮ್ಮ ತುಟಿಗಳಲ್ಲಿದ್ದ ಜಿಡ್ಡಿನಾಂಶ ಹೋಗಿ ಕೋಮಲವಾಗುತ್ತದೆ.. ಹಾಗೂ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ..

 

Tags