ಜೀವನ ಶೈಲಿಸೌಂದರ್ಯ

‘ಶುಂಠಿ’ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯೋಗಕಾರಿ…. !

ಮುಖದ ಸೌಂದರ್ಯ ಕಾಪಾಡಿಕೊಳ್ಳುವುದರ ಜೊತೆಗೆ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ ಮತ್ತು ಇತ್ತೀಚಿನ ದಿನಗಳಲ್ಲಿ ಕೂದಲಿನ ಸಮಸ್ಯೆ ಪ್ರತಿಯೊಬ್ಬರಿಗೂ ಒಂದು ಸವಾಲಾಗಿದೆ. ಈಗಂತು ಮಾರುಕಟ್ಟೆಗೆ ಬರುವ ತರಾವರಿ ಶಾಂಪೂಗಳನ್ನು ನೋಡಿದರೆ ಯಾವುದನ್ನು ಉಪಯೋಗಿಸಬೇಕು ಯಾವುದನ್ನು ಉಪಯೋಗಿಸಬಾರದು ಎಂಬುದು ಎಲ್ಲರ ತಲೆನೋವಾಗಿದೆ.

‘ಶುಂಠಿ ನೈಸರ್ಗಿಕ ಮನೆಮದ್ದು

ಇನ್ನು ಈ ರಾಸಾಯನಿಕ ಶಾಂಪೂಗಳನ್ನು ಉಪಯೋಗಿಸಿ ಕೂದಲಿನ ಸೌಂದರ್ಯವನ್ನು ಹಾಳು ಮಾಡಿಕೊಂಡಿರುವವರೆ ಹೆಚ್ಚು ಎಲ್ಲೋ ಒಂದಷ್ಟು ಜನರಿಗೆ ಮಾತ್ರ ರಾಸಾಯನಿಕ ಶಾಂಪೂ ಉಪಯೋಗಿಸಿದರು ಯಾವುದೆ ಹಾನಿಯಾಗದೆ ಕೂದಲನ್ನು ಕಾಪಾಡಿಕೊಂಡಿರುತ್ತಾರೆ.ಸೋ ನೈಸರ್ಗಿಕ ಮನೆಮದ್ದುಗಳನ್ನು ಉಪಯೋಗ ಮಾಡಿಕೊಂಡು ಕೂದಲಿನ ಸಮಸ್ಯೆ ದೂರವಾಗಿಸಬಹುದು. ಆ ನೈಸರ್ಗಿಕ ವಸ್ತುಗಳ ಸಾಲಿಗೆ ಶುಂಠಿ ಈಗ ಸೇರಿದೆ. ನಿಮಗೆ ಗೊತ್ತ ಅಡುಗೆ ಮತ್ತು ಔಷಧಿಗೆ ಮಾತ್ರ ಶುಂಠಿ ಉಪಯೋಗವಾಗುತ್ತೆ ಅಂತ ನಾವೆಲ್ಲ ಅಂದುಕೊಂಡಿದ್ದೇವೆ ಆದ್ರೆ ಈ ಶುಂಠಿ ಬರಿ ಅಡುಗೆಗೆ ಮತ್ತು ಔಷಧಿಗೆ ಮಾತ್ರ ಉಪಯೋಗಕಾರಿ ಅಲ್ಲ .ಈ ಶುಂಠಿ ಕೂದಲಿನ ಸಮಸ್ಯೆಗೆ ಕೂಡ ರಾಮಬಾಣ ಕಣ್ರೀ. ಶುಂಠಿ ಕೂದಲಿನ ಸಮಸ್ಯೆಗೆ ತುಂಬ ಉಪಯೋಗಕಾರಿ.ಶುಂಠಿ ತಲೆಬುರುಡೆಯ ರಕ್ತಚಲನೆಯ ಉತ್ತಮಪಡಿಸುವಲ್ಲಿ ಸಹಾಯಕಾರಿ, ಆರೋಗ್ಯಕರ ಕೂದಲು ಬೆಳೆಯಲು, ತಲೆಹೊಟ್ಟು ನಿವಾರಿಸಲು, ತಲೆ ತುರಿಕೆ ಮತ್ತು ತಲೆಬುರುಡೆಯಲ್ಲಿ ಚರ್ಮ ಕಿತ್ತು ಬರುವುದು ನಿಲ್ಲುತ್ತದೆ.

ಶುಂಠಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶವಿದೆ. ಈ ಆ್ಯಂಟಿಆಕ್ಸಿಡೆಂಟ್ ಅಂಶ ಒಣ ಮತ್ತು ಕಾಂತಿ ಕಳೆದುಕೊಂಡ ಕೂದಲಿಗೆ ಕಾಂತಿ ನೀಡಿ ನೈಸರ್ಗಿಕ ಕಾಂತಿಯನ್ನು ನೀಡಲು ಸಹಾಯವಾಗಿದೆ.

ಶುಂಠಿಯನ್ನು ಕೂದಲಿಗೆ ಹೇಗೆ ಉಪಯೋಗಿಸಬೇಕು ಅಂತೀರಾ ಈ ಟಿಪ್ಸ್ ಅನುಸರಿಸಿ

  1. ಎರಡು ಚಮಚ ಶುಂಠಿ ಪೇಸ್ಟ್, ಒಂದು ಚಮಚ ಆಲಿವ್ ಎಣ್ಣೆ , ಅರ್ಧ ಚಮಚ ಬಾದಾಮಿ ಎಣ್ಣೆ , ಒಂದು ಚಮಚ ತೆಂಗಿನ ಎಣ್ಣೆ ಎಲ್ಲವನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ 20 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನಲ್ಲಿ ಶಾಂಪೂ ಬಳಸಿ ತೊಳೆದುಕೊಳ್ಳಿ .
  2. ಎರಡು ಚಮಚ ಶುಂಠಿ ಪೇಸ್ಟ್ 4 ರಿಂದ 5 ಹನಿ ಎಳ್ಳೆಣ್ಣೆ , ಒಂದು ಚಮಚ ನಿಂಬೆರಸ ಸೇರಿಸಿ ಮಿಶ್ರಣ ಮಾಡಿ ಕೂದಲಿಗೆ ಮಸಾಜ್ ಮಾಡಿ 20 ನಿಮಿಷ ಬಿಟ್ಟು ಕೂದಲನ್ನು ತೊಳೆದುಕೊಳ್ಳಿ ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
  3. ಶುಂಠಿಯನ್ನು ಕಟ್ ಮಾಡಿಕೊಂಡು ರುಬ್ಬಿಕೊಳ್ಳಿ ರುಬ್ಬಿಕೊಂಡ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಳ್ಳಿ ಇದರಿಂದ ಆರೋಗ್ಯಕರ ಕೂದಲು ಬೆಳೆಯುತ್ತದೆ.
Tags

Related Articles