ಜೀವನ ಶೈಲಿಫ್ಯಾಷನ್

ಈ ತಳಕ್ಕು ಬಳಕ್ಕು ಯ್ಯಾಕಮ್ಮಾ, ಚಡ್ಡಿ ಹೋಗಿ ಪ್ಯಾಂಟು ಬಂತು, ಪ್ಯಾಂಟಿನಲ್ಲಿ ತೂತು ಬಿತ್ತು..!!!

ಇಂದು ಪ್ರಪಂಚದಲ್ಲಿ ಬದಲಾವಣೆಯ ವೇಗ ತುಂಬ ಹೆಚ್ಚಾದ್ದರಿಂದ ಏನನ್ನೋ ಸಂಪೂರ್ಣವಾಗಿ ಕಳೆದುಕೊಂಡಂತೆ ಮತ್ತು ಎಲ್ಲವೂ ಬದಲಾದಂತೆ ಭಾಸವಾಗುತ್ತದೆ. ಜೊತೆಗೆ ಕಾಲಕ್ಕೆ ತಕ್ಕಂತೆ ಎಲ್ಲರೂ ಹೆಜ್ಜೆ ಹಾಕಬೇಕು ಎನ್ನುವ ಹಾಗೇ ಕಾಲಕ್ಕೆ ತಕ್ಕಂತೆ ವೇಷ, ವೇಷಕ್ಕೆ ತಕ್ಕಂತೆ ಭಾಷೆ ಬದಲಾಗುತ್ತಾ ಹೋಗುತ್ತದೆ.

ಇನ್ನು ಈಗಿನ ಪೀಳಿಗೆಯ ಜನಾಂಗದವರು ವೇಷಭೂಷಣದ ಬಗ್ಗೆ ಅತಿಯಾದ ಆಸಕ್ತಿ ವಹಿಸಿಕೊಳ್ಳುತ್ತಾರೆ. ಜೊತೆಗೆ ಈ ಬಟ್ಟೆಯು ಅವರವರ ವ್ಯಕ್ತಿತ್ವವನ್ನು ಹೇಳುತ್ತದೆ. ವ್ಯಕ್ತಿಯ ನಡವಳಿಕೆ,ಸ್ವಭಾವ, ಆತ್ಮವಿಶ್ವಾಸ ಎಲ್ಲವನ್ನೂ ನಾವು ಧರಿಸುವ ಬಟ್ಟೆಯಿಂದ ಸುಲಭವಾಗಿ ಹೇಳಬಹುದಾಗಿದೆ.

ಇದೀಗ ಕಾಲಕ್ಕೆ ತಕ್ಕಂತೆ ಮಾರುಕಟ್ಟೆಗೆ ಬರುವ ಬಟ್ಟೆ ಕೂಡ ಬದಲಾಗಿದೆ.ಕೆಲವರನ್ನು ನೋಡಿರಬಹುದು, ಸೊಂಟದ ಕೆಳಗೆ ಇಳಿ ಬಿಟ್ಟುಕೊಂಡಿರುವ ಪ್ಯಾಂಟು, ಅಲ್ಲಲ್ಲಿ ತಾಪೆ ಬಿದ್ದಿರುವ ಪ್ಯಾಂಟುಗಳು, ಅದರಲ್ಲಿರುವ ತೂತುಗಳು.. ಹೀಗೆ ನೀವೆಲ್ಲಾ ಗಮನಿಸಿರಬಹುದು. ಇಂತಹದ್ದೇ ಈ ಪೋಟೋವನ್ನು ನೋಡಿದಾಗ ನಮಗೆ ಪಟ್ಟನೇ ನೆನಪಾಗುವುದು ಡಾ. ರಾಜ್ ಅಭಿನಯಿಸಿದ್ದ ‘ಭಲೇ ಹುಚ್ಚ’ ಚಿತ್ರದ ಈ ಹಾಡು..

ಲಂಗ ಬಿಟ್ಟು ಲುಂಗಿ ಉಟ್ಟೆ, ಲುಂಗಿ ಮೇಲೆ ಅಂಗಿ ತೊಟ್ಟೆ, ಅಂಗಿ ಹಿಂದೆ ಕಿಂಡಿ ಬಿಟ್ಟೆ ಡುಮ್ ಡುಮ್ ಡುಮ್..

ಸೀರೆ ಹೋಗಿ ಪ್ಯಾಂಟು ಬಂತು, ಪ್ಯಾಂಟು ಹೋಗಿ ಚಡ್ಡಿ ಬಂತು, ಚಡ್ಡಿ ಹೋಗಿ ಏನ್ ಬರುತ್ತೋ..? ಡುಮ್ ಡುಮ್ ಡುಮ್…

ಈ ಪೋಟೋವನ್ನು ತಕ್ಷಣಕ್ಕೆ ನೋಡಿದರೆ ಇದು ಬಟ್ಟೆಗೆ ಸಂಭಂದಿಸಿದ್ದಾ ಅಥವಾ ಬೂಟ್ ಗೆ ಸಂಭಂದಿಸಿದ್ದಾ ಎನ್ನುವ ಗೊಂದಲ ಮೂಡುತ್ತದೆ. ಸದ್ಯದ ಮಟ್ಟಿಗೆ ಇದು ನಮ್ಮ ದೇಶದಲ್ಲಿ ಚಾಲ್ತಯಲ್ಲಿಲ್ಲ. ಆದರೆ ಇದನ್ನು ಇಲ್ಲಿಗೆ ಕಡೆಗಣಿಸಿದರೆ ಇದು ನಮ್ಮ ದೇಶಕ್ಕೂ ಕಾಲಿಡುವ ಅಪಾಯವೂ ಕಾದಿದೆ ಎಂಬುದನ್ನು ಮರೆಯಬಾರದು.

ಕೊನೆಯದಾಗಿ ಹೆಣ್ಣಿನ ಸಂಸ್ಕೃತಿ ಹೇಗಿರಬೇಕೆಂದರೆ , ಬೆಲೆ ಕೊಡುವಂತಿರಬೇಕು ಹೊರತು ಬೆಲೆ ಕೇಳುವಂತಿರಬಾರದು. ಮಾನ ಕಾಪಾಡುವ ಬಟ್ಟೆ ಬೆಲೆ ಕೊಡುವಂತಿರಬೇಕು.

Tags