ಆರೋಗ್ಯಆಹಾರಜೀವನ ಶೈಲಿ

ಮನೆಯಲ್ಲಿಯೇ ಮಾಡಿರಿ ನಿಮ್ಮ ನೆಚ್ಚಿನ ಗರಿ ಗರಿ ಗೋಬಿ ಕುರ್ಮಾ

ಬೆಂಗಳೂರು, ಫೆ.03:

ಸಾಮಾನ್ಯವಾಗಿ ಹೋಟೆಲ್ ಗೆ ಹೋಗಿ ನಮಗೆ ಇಷ್ಟವಾದ ತಿಂಡಿ ತಿಂದು ಮನೆಯಲ್ಲಿ ಇಂತಹ ರುಚಿ ಸಿಗಲ್ಲ ಬಿಡಿ. ಅಂತ ಬಹುತೇಕ ಸಂದರ್ಭಗಳಲ್ಲಿ ಗೊಣಗಿಕೊಳ್ಳುತ್ತೇವೆ. ನೀವು ಹೀಗೆ ಗೊಣಗಿಕೊಂಡಿದ್ದರೆ ಇಲ್ಲಿದೆ ನೋಡಿ ಮನೆಯಲ್ಲೇ ಸುಲಭವಾಗಿ ಹೋಟೆಲ್‍ ರುಚಿಯನ್ನು ತರಿಸುವ ಗೋಬಿ ಗ್ರೇವಿ ರೆಸಿಪಿ. ಇದು ನಿಮ್ಮ ಮನೆಯ ಎಲ್ಲರ ಮನಸೂರೆಗೊಳಿಸುವುದು ಖಂಡಿತ.

ಗೋಬಿ ಗ್ರೇವಿಗೆ ಬೇಕಾದ ಅಗತ್ಯ ಪದಾರ್ಥಗಳು:

ಗೋಬಿ- ¼ ಕೆ.ಜಿ.

ಬಟಾಣಿ- 50 ಗ್ರಾಂ

ಖಾರದಪುಡಿ- 1 ಚಮಚ

ಗರಂಮಸಾಲ- 1 ಚಮಚ

ಏಲಕ್ಕಿ- 4

ಪಲಾವ್ ಎಲೆ- 1

ಕಸೊರಿ ಮೋಧಿ- 1 ಚಮಚ

ಟೊಮ್ಯಾಟೊ ಕ್ಯುರಿ- 2 ರುಬ್ಬಿದ್ದ ಟೊಮ್ಯಾಟೊ

ಈರುಳ್ಳಿ- 2

ಶುಂಠಿ-ಬೆಳ್ಳುಳ್ಳಿ ಪೇಸ್ಟ್‍ – 2 ಚಮಚ

ಗೋಡಂಬಿ- 4-5

ಕೊತ್ತಂಬರಿ ಸೊಪ್ಪು- ಸ್ವಲ್ಪ

ಬೆಣ್ಣೆ- 1-2 ಚಮಚ

ದನಿಯಾಪುಡಿ – ½ ಚಮಚ

ಗಸಗಸೆ- 1 ಚಮಚ

ಮೊಸರು- 1 ಕಪ್

ಚಕ್ಕೆ- 1-2

ಉಪ್ಪು- ರುಚಿಗೆ ತಕ್ಕಷ್ಟು

ಅರಿಶಿನ- ¼ ಚಮಚ

ಮಾಡುವ ವಿಧಾನ:

ಮೊದಲು ಗೋಬಿಯನ್ನು ಶುದ್ಧಗೊಳಿಸಿ. ನಂತರ ಬಾಣಲೆಗೆ ಬೆಣ್ಣೆ ಹಾಕಿ, ಈರುಳ್ಳಿಯನ್ನು ಕೆಂಪಾಗಿ ಹುರಿದು, ಪಕ್ಕಕ್ಕೆ ಇಟ್ಟುಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಚಕ್ಕೆ, ಏಲಕ್ಕಿ, ಪಲಾವ್ ಎಲೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್‍, ಬಟಾಣಿ, ಖಾರದಪುಡಿ, ದನಿಯಾಪುಡಿ ಹಾಕಿ ಹುರಿದು, ಟೊಮ್ಯಾಟೊ ಪೇಸ್ಟನ್ನು ಹಾಕಿ. ಗೋಬಿ ಕೊತ್ತಂಬರಿ ಸೊಪ್ಪುನ್ನು ಹಾಕಿ ಬೇಯಲು ಬಿಡಿ.

ರುಬ್ಬಲು: ಹುರಿದ ಈರುಳ್ಳಿ, ಗೋಡಂಬಿ, ಗಸಗಸೆ, ಮೊಸರು ಹಾಕಿ ಮಿಕ್ಸಿ ಮಾಡಿ.

ಅದನ್ನು ಬಾಣಲೆಗೆ ಹಾಕಿ ಜೊತೆಗೆ ಗರಂ ಮಸಾಲ, ಉಪ್ಪು, ಕಸ್ತೂರಿ ಮೇಥಿ ಹಾಕಿ. ಎಣ್ಣೆ ಮೇಲೆ ಬಂದ ನಂತರ ಆಫ್ ಮಾಡಿ. ಇದನ್ನು ಪೂರಿ, ಚಪಾತಿ, ಅನ್ನದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.

ಫ್ಯಾಷನ್ ಲೋಕದಲ್ಲಿ ಇದೀಗ ಬಾಟಮ್ ವೇರ್ ಗಳದ್ದೇ ದರ್ಬಾರ್..!

#gobikurma #gobikurmarecipe #gobikurmaandrice #gobikurmainhotel #balkaninews

Tags