ಆರೋಗ್ಯಜೀವನ ಶೈಲಿ

ಗ್ರೀನ್ ಟೀ ಹೀಗೆಲ್ಲಾ ಆರೋಗ್ಯದಲ್ಲಿ ಚಮತ್ಕಾರ ಮಾಡತ್ತದೆಯೇ !!?!!

ಗ್ರೀನ್ ಟೀ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಬೆಳ್ಳಂ ಬೆಳಗ್ಗೆ ಎದ್ದು ಕಾಫಿ-ಟೀ ಕುಡಿಯುವ ಅಭ್ಯಾಸ ಕೆಲವರಿಗೆ ಇರುತ್ತದೆ.. ಕಾಫಿ-ಟೀ ಸೇವಿಸುವುದುರಿಂದ ಆರೋಗ್ಯಕ್ಕೂ ಕೆಟ್ಟ ಪರಿಣಾಮ ಬೀರಬಹುದು.. ಅದರ ಬದಲಾಗಿ  ಗ್ರೀನ್ ಟೀ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.. ಔಷಧಿಯಂತೆ ಬಳಸಲಾಗುತ್ತಿದ್ದ ಈ ಎಲೆಗಳನ್ನು ಈಗ ಟೀಯಂತೆ ಉಪಯೋಗಿಸಿಕೊಳ್ಳಲಾಗುತ್ತಿದೆ ..

Image result for green tea

ಆಧುನಿಕ ಜೀವನಶೈಲಿ

ತಲೆ ನೋವು, ಮೈ ಕೈ ನೋವು, ಮನುಷ್ಯನ ಜೀವನಾವಧಿ ಹೆಚ್ಚಿಸಲು ಭಾರತದಲ್ಲಿ ಮತ್ತು ಚೀನಾದಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತಿತ್ತು. ಆದರೆ ಆಧುನಿಕ ಜೀವನಶೈಲಿ ಆಧಾರಿತ  ಆರೋಗ್ಯ ಸಮಸ್ಯೆಗಳಿಗೂ ಗ್ರೀನ್ ಟೀ ಪರಿಹಾರವಾಗುತ್ತಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಗ್ರೀನ್ ಟೀ ಚಮತ್ಕಾರ!!

ತ್ವಚೆ ಆರೈಕೆ, ರೋಗನಿರೋಧಕ ಶಕ್ತಿಯ ಹೆಚ್ಚಿಸಲು ಇದು ಸಹಾಯಕ. ಅತಿ ಹೆಚ್ಚು ಆ್ಯಂಟಿಯಾಕ್ಸಿಡೆಂಟ್, ಅಮಿನೊ ಆಸಿಡ್, ಕಾರ್ಬೊಹೈಡ್ರೇಟ್, ಲಿಪಿಡ್ ಅಂಶಗಳನ್ನು ಹೊಂದಿರುವ ಗ್ರೀನ್ ಟೀ ಅನ್ನು ರಕ್ತ ಹೆಪ್ಪುಗಟ್ಟುವಿಕೆ, ಗಾಯ ಗುಣಪಡಿಸಲು, ಜೀರ್ಣಕ್ರಿಯೆಗೆ, ಮಾನಸಿಕ ಆರೋಗ್ಯಕ್ಕೆ ಕಾಪಾಡಿಕೊಳ್ಳಲು, ಡಯಾಬಿಟಿಸ್, ಕೊಲೆಸ್ಟ್ರಾಲ್ ತಡೆಗಟ್ಟಲು, ಮಾನಸಿಕ ಕಾಯಿಲೆಯಿಂದ ಹೊರಬರಲು, ಹೃದಯ ಸ್ವಾಸ್ಥ್ಯಕ್ಕೆ ಹಾಗೂ ದೇಹದ ಉಷ್ಣವನ್ನು ಸಮತೋಲನವಾಗಿಸಲು ಸಹಾಯ ಮಾಡುತ್ತದೆ..

ನಿಯಮಿತ ಗ್ರೀನ್ ಟೀ ಸೇವನೆಯಿಂದ ಆರೋಗ್ಯವನ್ನು ಚೆನ್ನಾಗಿ ಕಾಪಾಡುವುದರೊಂದಿಗೆ ನಿಮ್ಮ ಮನಸ್ಸನ್ನು ಕೂಡ ಹಗುರವಾಗಿರುವಂತೆ ಮಾಡುತ್ತದೆ..

Tags

Related Articles