ಆರೋಗ್ಯಜೀವನ ಶೈಲಿಫ್ಯಾಷನ್

ಈ ಗಿಡಗಳು ನಿಮ್ಮ ಮನೆಯ ಮುಂದೆ ಇರಲಿ

ಹಿಂದೂ ಧರ್ಮದ ಪ್ರಕಾರ ಮರಗಿಡಗಳನ್ನು ದೇವರಂತೆ ಪೂಜಿಸಲಾಗುತ್ತದೆ. ಹಾಗೆಯೇ ದೇವರಿಗೆ ನೀಡಿದಷ್ಟೇ ಮಹತ್ವವನ್ನು ಕೆಲವು ಗಿಡಮರಗಳಿಗೆ ಕೊಡಲಾಗುತ್ತದೆ. ಕೆಲವೊಂದು ಮರಗಿಡಗಳನ್ನು ಮನೆಯ ಸುತ್ತಮುತ್ತ ನೆಡುವುದರಿಂದ ಯಾವ ಕಷ್ಟಗಳು ಬರುವುದಿಲ್ಲ ಎಂಬ ನಂಬಿಕೆಗಳಿವೆ. ಇನ್ನು ಬಿಡುವಿನ ವೇಳೆಯಲ್ಲಿಯೂ ಸಹ ಕೆಲವೊಂದು ಗಿಡಗಳನ್ನು ನೆಟ್ಟು ಪೋಷಿಸಿದರೆ ಆರೋಗ್ಯಕ್ಕೂ ಒಳ್ಳೆಯದಾಗುತ್ತದೆ.

1 ತುಳಸಿಗಿಡ : ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಸಿ ನಿತ್ಯ ಪೂಜೆ ಸಲ್ಲಿಸುವುದರಿಂದ ಮನೆಯೊಳಗೆ ನಕರಾತ್ಮಕ ಶಕ್ತಿಗಳು ಬರದಂತೆ ತಡೆಯುವುದಲ್ಲದೇ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿದೆ.

2 ಅಲೋವೆರಾ: ಇದು ಗಾಳಿಯನ್ನು ಶುದ್ದ ಮಾಡುವ ಗುಣಗಳನ್ನು ಹೊಂದಿದ್ದು, ಆರೋಗ್ಯ ಮತ್ತು ಸೌಂದರ್ಯದ ಸಮಸ್ಯೆಗೂ ಅನುಕೂಲಕರವಾಗಿದೆ.

3 ಪುದೀನಾ: ಈ ಗಿಡವು ನಂಜು ನಿರೋಧಕವಾಗಿದ್ದು, ಔಷಧಿಯಾಗಿ ಮಾತ್ರವಲ್ಲದೇ ಅಡುಗೆಗೂ ಬಳಸಲಾಗುತ್ತದೆ.

4 ದಾಳಿಂಬೆ ಗಿಡ : ಈ ಗಿಡವನ್ನು ಮನೆಯ ಮುಂದೆ ಬೆಳೆಸುವುದರಿಂದ ರಾಹುಕೇತುವಿನ ಪ್ರಭಾವ ನಮ್ಮ ಮೇಲೆ ಬೀಳುವುದಿಲ್ಲ.

5 ಲವಂಗ ಗಿಡ: ಈ ಗಿಡದ ಎಲೆಗಳಿಂದ ಬರುವ ವಾಸನೆ ಮಾತ್ರವಲ್ಲ ಹೂವುಗಳು ಸಹ ಸೊಳ್ಳೆಗಳನ್ನು ಓಡಿಸುತ್ತವೆ.

ದೇಹದ ದುರ್ವಾಸನೆ ತೊಲಗಿಸಲು ಇಲ್ಲಿದೆ ಸರಳ ಮಾರ್ಗಗಳು

#Plants  #GrowPlants #LifeStyle #HealthTips

Tags