ಆರೋಗ್ಯಆಹಾರಜೀವನ ಶೈಲಿ

ನಿಮ್ಮ ಮನೆಯ ಕೈದೋಟದಲ್ಲೂ ಬೆಳೆಸಿ ಏಲಕ್ಕಿ

ಇತ್ತೀಚೆಗೆ ಎಲ್ಲರೂ ತಮ್ಮ ಮನೆಯಲ್ಲೇ ಎಷ್ಷು ಜಾಗ ಸಿಗುತ್ತೋ, ಅಷ್ಟರಲ್ಲೇ ಕೈದೋಟ ಮಾಡುವ ಹೆಲ್ದೀ ಟ್ರೆಂಡ್ ಶುರುವಾಗಿದೆ. ಆ ಗಾರ್ಡನ್ನಲ್ಲಿ ಏಲಕ್ಕಿ ಬೆಳಸುವ ವಿಧಾನ ಹೀಗಿದೆ.

  1. ತಾಜಾ 1 ಏಲಕ್ಕಿಯನ್ನು ಬಿಡಿಸಿ. ಅದರಲ್ಲಿರುವ 7-8 ಬೀಜಗಳನ್ನು ತೆಗೆದಿಟ್ಟುಕೊಳ್ಳಿ.
  2. ಏರ್ ಟೈಟನರ್ ಗಾಜಿನ ಡಬ್ಬಿಗೆ, ಮಾಸ್ ಅನ್ನು (ಇದರಲ್ಲಿ ತೇವಾಂಶವನ್ನು ಹಿಡಿದಿಡುವ ಗುಣ ಇದೆ. ಮಾರುಕಟ್ಟೆಯಲ್ಲಿ ಸಿಗುತ್ತದೆ) ಬಾಟಲಿನ ಮೇಲ್ಭಾಗಕ್ಕೆ ಬರುವವರೆಗೆ ನಿಧಾನವಾಗಿ ತುಂಬಿರಿ.
  3. ಮಾಸ್ ಗೆ ಸ್ವಲ್ಪ ನೀರು ಚುಮುಕಿಸಿ. ಬಾಟಲಿಯ ಮೇಲುಗಡೆ ಏಲಕ್ಕಿ ಬೀಜವನ್ನು ಹಾಕಿ ಮತ್ತೆ ನೀರು ಚುಮುಕಿಸಿ 24 ಗಂಟೆ ಕಾಲ ಮುಚ್ಚಿಡಿ.
  4. ಆ ಬೀಜಗಳು ನೀರಿನಲ್ಲಿ ನೆನೆದು ದಪ್ಪವಾಗಿರುತ್ತದೆ. ಅದನ್ನು ತೆಗೆದಿಟ್ಟುಕೊಳ್ಳಿ.
  5. ಅಗಲವಾದ ಪಾಟ್ ಗೆ ಕಲ್ಲು ಮಿಶ್ರಿತ ಮರಳು ಒಂದು ಲೇಯರ್ ಹಾಕಿ.
  6. ಅದಕ್ಕೆ ಸಾವಯವ ಗೊಬ್ಬರ, ಮರದ ಹೊಟ್ಟು ಇದರ ಇನ್ನೊಂದು ಲೇಯರ್ ಮಾಡಿ.
  7. ಇದರ ಮೇಲೆ ನೆಂದ ಏಲಕ್ಕಿ ಬೀಜವನ್ನು ಸಮಾನಾಂತರವಾಗಿ ಇಡಿ.
  8. ಮೇಲಿನ ಭಾಗವನ್ನು ಮತ್ತೆ ಶುದ್ಧ ಮಣ್ಣಿನಿಂದ ಕವರ್ ಮಾಡಿ.
  9. ತೇವಾಂಶ ಸದಾ ಇರುವಂತೆ ಗಮನಿಸಿ. ಆದಷ್ಟು ನೆರಳಿನಲ್ಲಿ ಬೆಳೆಸಿ.
  10. ಈ ಎಲ್ಲಾ ಪ್ರೊಸೀಜರ್ ಆದ ನಂತರದ 45 ದಿನದಲ್ಲಿ ಮೊಳಕೆ ಒಡೆದು, ಗಿಡ ಹೊರಬರುತ್ತದೆ.

ಹೀಗೆ ತಾಳ್ಮೆ ಮತ್ತು ಆಸಕ್ತಿವಹಿಸಿ ಸಂರಕ್ಷಿಸಿದರೆ ಮನೆಯಲ್ಲೇ ಏಲಕ್ಕಿ ಬೆಳೆಯಬಹುದು.

Image result for True cardamom

ಅವಳಿನಗರದಲ್ಲಿ ಅದ್ದೂರಿಯಾಗಿ ನಡೆಯಿತು ಸುಮಲತಾ ಹಾಗೂ ಅಭಿಷೇಕ್ ತುಲಾಭಾರ ಸೇವೆ

#balkaninews #Truecardamom #Truecardamomplant

Tags