ಆರೋಗ್ಯಆಹಾರಜೀವನ ಶೈಲಿಸೌಂದರ್ಯ

ಜಿಮ್ ನಲ್ಲಿ ದೇಹ ದಂಡಿಸಿದ ಮೇಲೆ ಏನನ್ನು ತಿನ್ನಬೇಕು ಗೊತ್ತೆ..? ಇಲ್ಲಿದೆ ನೋಡಿ

ಬೆಂಗಳೂರು, ಜ.10: ಹೊಸ ವರ್ಷದ ರೆಸಲ್ಯೂಶನ್ ಪಟ್ಟಿಯಲ್ಲಿ ತೂಕ ಇಳಿಕೆ ಮತ್ತು ತೀವ್ರ ತಾಲೀಮು ಸೇರಿರಬಹುದು. ತೂಕ ಕಳೆದುಕೊಳ್ಳಲು ತಾಲೀಮು ಸಹಾಯ ಮಾಡುತ್ತದೆ ಎಂಬುದು ತಿಳಿದೇ ಇದೆ.

ಆದರೆ ತೀರಾ ಕಡಿಮೆ ಜನರಿಗೆ ತೀವ್ರವಾದ ವ್ಯಾಯಾಮದ ನಂತರ ಸರಿಯಾದ ಆಹಾರ ಸೇವನೆ ಮಾಡುವುದು ಮುಖ್ಯ ಎಂಬುದು ತಿಳಿಯದೇ ಇರಬಹುದು. ಹಾಗಾಗಿ ಇಂದು ನಾವು ಜಿಮ್‍ ನಲ್ಲಿ ದೇಹ ದಂಡಿಸಿದ ನಂತರ ಆಹಾರವನ್ನು ಹೇಗೆ ಮತ್ತಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬ ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ.

ವ್ಯಾಯಾಮ ನಿಲ್ಲಿಸಿದಾಗ ಅಥವಾ ಕೊನೆಯ ಸುತ್ತಿನ ಕ್ರಂಚನ್ನು ಮುಗಿಸಿದಾಗ ಕಸರತ್ತು ಅಂತ್ಯಗೊಳ್ಳುವುದಿಲ್ಲ. ವ್ಯಾಯಾಮದ ನಂತರ ಸರಿಯಾದ ಆಹಾರ ಆರಿಸಿಕೊಳ್ಳುವುದರಿಂದ ಮಾತ್ರವೇ ಫಿಟ್ನೆಸ್ ಗೋಲು ಸಾಧಿಸಲು ಸಾಧ್ಯ.

ಸಾಮಾನ್ಯವಾಗಿ ದೈಹಿಕ ಚಟುವಟಿಕೆ ಹೆಚ್ಚು ಶಕ್ತಿಯನ್ನು ಬೇಡುತ್ತದೆ. ವ್ಯಾಯಾಮ ಮುಗಿಸಿದ ನಂತರ 15 ರಿಂದ 30 ನಿಮಿಷಗಳಲ್ಲಿ ಪುನಃ ಆ ಶಕ್ತಿಯನ್ನು ದೇಹಕ್ಕೆ ನೀಡುವುದು ಅಗತ್ಯ. ಇಲ್ಲವಾದಲ್ಲಿ ದೇಹ ಚೇತರಿಸಿಕೊಳ್ಳಲು ಕಷ್ಟವಾಗುತ್ತದೆ. ವ್ಯಾಯಾಮದ ನಂತರ ಹೆಚ್ಚಿನ ಆಹಾರವನ್ನು ಸೇವಿಸಿದರೆ ಬಹು ಬೇಗ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ.

ತೂಕ ಎತ್ತುವ ತಾಲೀಮು ನಡೆಸಿದರೆ ಸ್ನಾಯುಗಳ ಬಲ ಕುಗ್ಗುತ್ತದೆ. ಸ್ನಾಯುಗಳಲ್ಲಿರುವ ಗ್ಲೈಕೋಜೆನ್ನನ್ನು ಪುನಶ್ಚೇತನಗೊಳಿಸಲು ಕಾರ್ಬೋಹೈಡ್ರೇ, ಪ್ರೋಟೀನ್, ವಿಟಮಿನ್‍ ಮತ್ತು ಖನಿಜಾಂಶ ಉಳ್ಳ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ವ್ಯಾಯಾಮದ ನಂತರ 45 ನಿಮಿಷಗಳಲ್ಲಿ ಆಹಾರ ಸೇವಿಸುವುದು ಸೂಕ್ತ. ಇದು 2 ಗಂಟೆಗಳವರೆಗೂ ಪ್ರಯೋಜನಕ್ಕೆ ಬರುತ್ತದೆ.ದೇಹದಲ್ಲಿ ಜಲಸಂಚಯನ ಮುಖ್ಯ:

ದೇಹದಲ್ಲಿ ಸಾಕಷ್ಟು ನೀರಿನಂಶ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ವ್ಯಾಯಾಮಕ್ಕೂ ಮುನ್ನಾ ಮತ್ತು ನಂತರ ಸಾಕಷ್ಟು ನೀರು ಕುಡಿಯಿರಿ. ಇದರಿಂದ ಮುಂದಿನ ದಿನದ ವ್ಯಾಯಾಮಕ್ಕೂ ಸಹಾಯ ಮಾಡುತ್ತದೆ. ನೀರಿನ ಬಳಕೆಯನ್ನು ಸರಿಯಾದ ಪ್ರಮಾಣದಲ್ಲಿ ಕಣ್ಣಿಡಲು ಮೂತ್ರದ ಬಣ್ಣ ಸಹಾಯ ಮಾಡುತ್ತದೆ. ತಿಳಿ ಹಳದಿ ಬಣ್ಣ ಸರಿಯಾದ ಬಣ್ಣವಾಗಿದೆ.

ವ್ಯಾಯಾಮದ ನಂತರದ ಆಹಾರ ಕ್ರಮ:

ಆಹಾರದಲ್ಲಿ ಮೈಕ್ರೋನ್ಯೂಟ್ರಿಯಂಟ್‍ ಗಳಿರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಕಾರ್ಬೋಹೈಡ್ರೇಟ್‍ ಗಳಿರುವ ಕ್ರ್ಯಾಕರ್ಸ್, ಹಣ್ಣು (ಹಣ್ಣುಗಳು, ಆಪಲ್, ಅನಾನಾಸ್ ಇತ್ಯಾದಿ), ಆಲೂಗಡ್ಡೆ, ಏಕದಳ ಧಾನ್ಯಗಳು.

ಪ್ರೋಟೀನ್ ಅಂಶವಿರುವ ಚಾಕೊಲೇಟ್, ಹಾಲು, ಚೀಸ್, ಮೊಟ್ಟೆ, ಮೊಸರು, ಚಿಕನ್, ಕಡಲೆ ಕಾಯಿ, ಬೆಣ್ಣೆ, ಪ್ರೋಟೀನ್ ಶೇಕ್ (ಪ್ಲಾಂಟ್- ಅಥವಾ ಅನಿಮಲ್-ಬೇಸ್ಡ್), ತೆಂಗಿನ ಎಣ್ಣೆ, ಅಗಸೆ ಬೀಜಗಳು ಇತ್ಯಾದಿ.

ಸ್ನಾಯುಗಳಲ್ಲಿ ಪ್ರೋಟೀನ್ ಉತ್ಪಾದನೆಯನ್ನು ಹೆಚ್ಚು ಮಾಡಲು ಮತ್ತು ಕಾರ್ಬೋಹೈಡ್ರೇಟ್‍, ಪ್ರೋಟೀನ್‍ ಹಾಗೂ ಕೆಲ ಕೊಬ್ಬಿನಾಂಶಗಳಿರುವ ಪದಾರ್ಥಗಳನ್ನು ಸೇವಿಸಿ ಸರಿಯಾದ ಫಲಿತಾಂಶ ಪಡೆಯಿರಿ.

#gym #gymworkout #gymafterworkout #balkaninews #healtytips

Tags