ಆರೋಗ್ಯಆಹಾರಜೀವನ ಶೈಲಿಫ್ಯಾಷನ್ಸೌಂದರ್ಯ

ಹಾಗಲಕಾಯಿ ಫೇಸ್ ಪ್ಯಾಕ್ ಬಗ್ಗೆ ಕೇಳಿದ್ದೀರಾ?

ತಿನ್ನಲು ಕಹಿಯಾಗಿರುವ ಹಾಗಲಕಾಯಿಯಲ್ಲಿ ಹಲವಾರು ಪೋಷಕಾಂಶಗಳಿಂದ ಕೂಡಿದೆ. ಮಾತ್ರವಲ್ಲ ದೇಹಕ್ಕೆ ಅಗತ್ಯವಿರುವಂತಹ ವಿಟಮಿನ್ಸ್ ಮತ್ತು ಖನಿಜಗಳು ಇದರಿಂದ ದೊರೆಯುತ್ತವೆ. ಎಲ್ಕದಕ್ಕಿಂತಲೂ ಮುಖ್ಯವಾಗಿ ಇದು ತ್ವಚೆ ಮತ್ತು ಕೂದಲಿಗೂ ನ ಆರೋಗ್ಯಕ್ಕೂ ಒಳ್ಳೆಯದು.

ಇದರ ಕಹಿ ಗುಣದಿಂದಾಗಿ ಅದನ್ನು ತಿನ್ನಲು ಎಲ್ಲರೂ ಇಷ್ಟಪಡದಿರಬಹುದು. ಆದರೆ ಹಾಗಲಕಾಯಿಯನ್ನು ಫೇಸ್ಪ್ಯಾಕ್ ಆಗಿ ಬಳಕೆ ಮಾಡಬಹುದು. ಇದೀಗ ಹಾಗಲಕಾಯಿಯ ಫೇಸ್ ಪ್ಯಾಕ್ ತಯಾರಿಸೋದು ಹೇಗೆ ನೋಡೋಣ…

ಹಾಗಲಕಾಯಿ ಮತ್ತು ಕಿತ್ತಳೆಯ ಸ್ಕ್ರಬ್ : ಕಿತ್ತಳೆಯ ಸಿಪ್ಪೆಗೆ ಮೊಡವೆ, ಆಯಿಲ್, ಕೊಳೆ ಮತ್ತು ಬ್ಯಾಕ್ಟೀರಿಯಾ ನಿವಾರಣೆ ಮಾಡುವ ಶಕ್ತಿ ಇದೆ. ಕಹಾಗಲಕಾಯಿ ಬೀಜ ತೆಗೆದು, ಅದನ್ನು ಕಿತ್ತಳೆ ಸಿಪ್ಪೆ ಜೊತೆ ಸೇರಿಸಿ ಮಿಕ್ಸಿ ಮಾಡಿ ಪೇಸ್ಟ್ ಮಾಡಬೇಕು. ನಂತರ ತಯಾರಿಸಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಹತ್ತು ನಿಮಿಷದ ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ.

ಹಾಗಲಕಾಯಿ ಮತ್ತು ಸೌತೆಕಾಯಿ ಮಾಸ್ಕ್ : ಮೊದಲಿಗೆ ಸೌತೆಕಾಯಿ ಮತ್ತು ಹಾಗಲಕಾಯಿ ಪೇಸ್ಟ್ ಮಾಡಿಟ್ಟುಕೊಳ್ಳಬೇಕು. ನಂತರ ಇದನ್ನು ಮುಖ ಮತ್ತು ಕುತ್ತಿಗೆಗೆ ಹಾಕಿ 15 ನಿಮಿಷ ಹಾಗೆ ಬಿಡಬೇಕು. ನಂತರ ನೀರಿನಿಂದ ಚೆನ್ನಾಗಿ ತೊಳೆಯಿರಿ. ಈ ಪೇಸ್ ಮಾಸ್ಕನ್ನು ಪ್ರತಿದಿನ ಮಾಡಿದರೆ ಹೊಳೆಯುವ ತ್ವಚೆಯನ್ನು ಪಡೆಯಬಹುದು.

ಇನ್ನು ಹಾಗಲಕಾಯಿ ಎಲೆಗಳಿಂದ ಪಿಂಪಲ್ ಸಮಸ್ಯೆಗೆ ಮುಕ್ತಿ ನೀಡಬಹುದು. ಮೊದಲಿಗೆ ಹಾಗಲಕಾಯಿ ಎಲೆಗಳನ್ನು ಮಿಕ್ಸಿ ಮಾಡಿ ನಯವಾದ ಪೇಸ್ಟ್ ತಯಾರಿಸಿ. ತಯಾರಿಸಿದ ಪೇಸ್ಟ್ ಅನ್ನು ಪಿಂಪಲ್ ಇರುವ ಜಾಗಕ್ಕೆ ಹಚ್ಚಿ. 3-4 ಬಾರಿ ಹೀಗೆ ಮಾಡಿದರೆ ಪಿಂಪಲ್ ಮಾಯವಾಗುತ್ತದೆ.

ರುಚಿರುಚಿಯಾದ ಅನಾನಸ್ ನ ಆರೋಗ್ಯ ಪುರಾಣ !

#hagalakaayi, #facepack ,#balkaninews

Tags