ಜೀವನ ಶೈಲಿಫ್ಯಾಷನ್

ಕೂದಲು ಉದುರುವ ಸಮಸ್ಯೆಗೆ ಮನೆಮದ್ದು

ಬದಲಾದ ಜೀವನಶೈಲಿ, ಹಾರ್ಮೋನ್ ಗಳಲ್ಲಿ ಏರುಪೇರು, ಧೂಳು ಹೊಗೆಯಿಂದಾಗಿ ಇಂದು ಬಹಳಷ್ಟು ಮಂದಿ ಹರೆಯದಲ್ಲೇ ಕೂದಲನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ನಾನಾ ಮಾರ್ಗಗಳನ್ನು, ಶಾಂಪು, ಎಣ್ಣೆ, ಬಣ್ಣಗಳನ್ನು ಬಳಸುತ್ತಿದ್ದಾರೆ. ಆದರೆ ಅವುಗಳಿಂದ ಸಿಗುವ ಉಪಶಮಕ್ಕಿಂತ ಆಗುವ ನಷ್ಟವೇ ಅಧಿಕ. ಇಲ್ಲಿದೆ ನೋಡಿ ಕೂದಲು ಉದುರದಂತೆ ಕಾಪಾಡುವ ಮನೆಮದ್ದುಗಳು.

* ದಂಟಿನ ಸೊಪ್ಪಿನ ರಸ ತೆಗೆದು, ತಲೆ ಕೂದಲಿಗೆ ಹಚ್ಚುತ್ತಿದ್ದರೆ ಕೂದಲು ದಟ್ಟಬಾಗಿ ಬೆಳೆಯುವುದು. ಜತೆಗೆ ಬಿಳಿ ಕೂದಲಿಗೆ ಮುಕ್ತಿ ಸಿಗುವುದು. ಕೂದಲು ಕಪ್ಪು ಬಣ್ಣಕ್ಕೆ ತಿರುಗುವುದು.

* ವೀಳ್ಯದೆಲೆಯನ್ನು ನುಣ್ಣಗೆ ಅರೆದು, ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ, ತಲೆಗೆ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದರೆ ಕೂದಲು ಉದುರುವುದು, ಹೊಟ್ಟು ಕಡಿಮೆಯಾಗುವುದು.

* ಬೆಣ್ಣೆಗೆ ಮೆಂತ್ಯ ಪುಡಿಯನ್ನು ಬೆರೆಸಿ, ತಲೆಗೆ ಹಚ್ಚುತ್ತಿದ್ದರೆ ಬಾಲ ನೆರೆ ಕೂದಲನ್ನು ತಡೆಗಟ್ಟಬಹುದು. ನಿಯಮಿತವಾಗಿ ಈ ಪೇಸ್ಟ್ ಹಚ್ಚಿಕೊಂಡು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು.

* ಹರಳೆಣ್ಣೆಗೆ ಮೆಂತ್ಯೆ ಪುಡಿಯನ್ನು ಸೇರಿಸಿ ತಲೆಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಕೂದಲು ಉದುರುವುದಿಲ್ಲ. ಕೂದಲು ಕೂಡ ಕಪ್ಪಾಗಿ ದಟ್ಟವಾಗಿ ಬೆಳೆಯುತ್ತದೆ.

* ಪ್ರತಿನಿತ್ಯ ನೆಲ್ಲಿಕಾಯಿಯನ್ನು ತಿನ್ನುತ್ತಿದ್ದರೆ ಕೂದಲು ಉದುರುವುದು ನಿಲ್ಲುತ್ತದೆ.

* ನೆಲ್ಲಿಕಾಯಿಯ ರಸವನ್ನು ಕೊಬ್ಬರಿ ಎಣ್ಣೆಗೆ ಬೆರೆಸಿ, ತಲೆ ಹಚ್ಚಿಕೊಳ್ಳಬೇಕು. ನಿಯಮಿತವಾಗಿ ಈ ಎಣ್ಣೆಯನ್ನೇ ಬಳಸಿದರೆ ಕೂದಲು ಉದುರುವುದು ನಿಲ್ಲುತ್ತದೆ. ಜತೆಗೆ ಕೂದಲು ಕಪ್ಪಾಗುತ್ತದೆ. ಹೊಟ್ಟು ಕೂಡ ಕಡಿಮೆಯಾಗುತ್ತದೆ.

* ಅರಿಶಿನ ಪುಡಿಯನ್ನು ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಕೂಡ ಕೂದಲು ಉದುರುವುದು ನಿಲ್ಲುತ್ತದೆ.

Tags

Related Articles