ಜೀವನ ಶೈಲಿಸೌಂದರ್ಯ

‘ಹೇರ್ ಸ್ಪಾ’ ಬಗ್ಗೆ ನಿಮಗೆಷ್ಟು ಗೊತ್ತು?

ಕೇಶ ಆರೈಕೆ

ಕೇಶ ಆರೈಕೆ ಸ್ವಲ್ಪ ಕ್ಲಿಷ್ಟ ಸಮಸ್ಯೆಯೇ. ಕೊಳೆ, ಧೂಳು, ಬಿಸಿಲು, ಕೆಮಿಕಲ್, ಮಾಲಿನ್ಯ ಹೀಗೆ ನಾನಾ ಕಾರಣಗಳಿಂದ ಕೂದಲು ಹಾನಿಗೊಳಗಾಗುವುದು ನಿರಂತರ, ನಿತ್ಯ. ಆದರೇನು ಮಾಡುವುದು, ಈ ಸಮಸ್ಯೆಯನ್ನೆಲ್ಲ ನಾವು ತಡೆ ಹಿಡಿಯಲು ಸಾಧ್ಯವೇ? ಖಂಡಿತ ಇದೆ. ಹೇರ್ ಟ್ರೀಟ್ ಮೆಂಟ್‍ಗೆಂದೇ ಹುಟ್ಟಿಕೊಂಡಿರುವ ಸಲೂನ್ ಗಳಿಂದ. ಈ ಟ್ರೀಟ್ ಮೆಂಟನ್ನು ಮನೆಯಲ್ಲೇ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ ಸಾಧ್ಯ. ಆದ್ದರಿಂದ ಸಲೂನ್ ಗಳಲ್ಲಿ ಸುಲಭವಾಗಿ ಹೇಗೆ ಟ್ರೀಟ್ ಮೆಂಟ್ ಪಡೆಯಬಹುದು ಎಂಬುದನ್ನು ಇಲ್ಲಿ ಸರಳವಾಗಿ ತಿಳಿಸಲಾಗಿದೆ.

ಎಂಥಹ ಸಮಸ್ಯೆಗಳಿಗೆ?

ಹೇರ್ ಕಂಡೀಷನಿಂಗ್ ಗೆ ಹುಟ್ಟಿಕೊಂಡಿರುವ ಲೇಟೆಸ್ಟ್ ಟ್ರೆಂಡ್ ಅಂದ್ರೆ ‘ಹೇರ್ ಸ್ಪಾ’. ಕೂದಲು ಬೆಳವಣಿಗೆಗೊಳ್ಳಲು ಇದು ಗುಡ್ ಥೆರಪಿ. ತಲೆಯಲ್ಲಿ ಹೊಟ್ಟಾಗಿದ್ದರೆ, ಕೂದಲು ಉದುರುತ್ತಿದ್ದರೆ, ರಫ್ ಆಗಿದ್ದರೆ, ಡಲ್ ಕಾಣುತ್ತಿದ್ದರೆ ಹೇರ್ ಸ್ಪಾ ಟ್ರೀಟ್ ಮೆಂಟ್ ಇದಕ್ಕೆಲ್ಲಾ ಉತ್ತರ ನೀಡುತ್ತದೆ. ಸಮಸ್ಯೆ ಸ್ವಲ್ಪವಿದ್ದರೆ ತಿಂಗಳಿಗೆ ಒಂದು ಸಾರಿ, ಹೆಚ್ಚಿದ್ದರೆ ವಾರಕ್ಕೆ ಒಂದು ಸಾರಿ ಮಾಡಿಸಿದರೆ ಸಾಕು. ಇದರಿಂದ ನೆತ್ತಿಯಲ್ಲಿ ರಕ್ತ ಸಂಚಾರ ಸರಾಗವಾಗಿ ರಿಲ್ಯಾಕ್ಸೇಷನ್ ದೊರೆಯುತ್ತದೆ.

Image result for hair spa

ಹೀಗಿರುತ್ತದೆ ಟ್ರೀಟ್ ಮೆಂಟ್…

ಮೊದಲು ನಿಮ್ಮದು ಎಂತಹ ಕೂದಲು ಎಂಬುದನ್ನು ವಿವರವಾಗಿ ಪರಿಶೀಲಿಸಲಾಗುತ್ತದೆ.  ನಂತರ ನಿಮ್ಮ ಕೂದಲಿಗೆ ಸೆಟ್ ಆಗುವಂತಹ ಕಂಡೀಷನರ್ ತೆಗೆದುಕೊಂಡು ನೆತ್ತಿಯ ತುದಿಯಿಂದ ಕಂಡೀಷನ್ ಮಾಡಲಾಗುತ್ತದೆ.  ಕಂಡೀಷನ್ ಆದ ಮೇಲೆ ರಿಚ್ ಹೇರ್ ಮಾಸ್ಕ್ ಉಪಯೋಗಿಸಲಾಗುತ್ತದೆ.  ಹೇರ್ ಮಾಸ್ಕ್ ಹಾಕುವಾಗ ತೆಳುವಾಗಿ ಹೇರ್ ಬೈ ಹೇರ್ ಅಪ್ಲೈ ಮಾಡುತ್ತಾ, ಫುಲ್ ಹೆಡ್‍ಗೆ ಸ್ಪ್ರೆಡ್ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ತಲೆಗೆ ಮಸಾಜ್ ಮಾಡುವಾಗ ಕೂದಲು ಮೃದುವಾಗುವುದಲ್ಲದೆ, ಒತ್ತಡ ಕಡಿಮೆಯಾಗುತ್ತದೆ.  ಮಸಾಜ್ ಆದ ಮೇಲೆ ಸ್ಟೀಮ್ ಕೊಡಲಾಗುತ್ತದೆ. ಸಾಮಾನ್ಯವಾಗಿ ಸ್ಟೀಮ್ ಕೊಡುವಾಗ 2-5 ನಿಮಿಷವಾಗುತ್ತದೆ. ಹೊಟ್ಟಿದ್ದರೆ 7-10 ನಿಮಿಷ ಸಮಯ ಬೇಕಾಗುತ್ತದೆ. ಸ್ಟೀಮ್ ನಾರ್ಮಲ್ ಕಂಡೀಷನ್‍ಗೆ ಬರಲು ‘ರೂಮ್ ಟೆಂಪ್ರೇಚರ್’ಗೆ ಬಿಡಲಾಗುತ್ತದೆ.  ಕೊನೆಯಲ್ಲಿ ಮಾಸ್ಕ್ ಅನ್ನು ಪೂರ್ತಿಯಾಗಿ ತೊಳೆದು ನೀರಿನಲ್ಲಿ ಹಿಂಡಲಾಗುತ್ತದೆ.  ಹಿಂಡಿದ ನಂತರ ಕೂದಲನ್ನು ಪೂರ್ತಿಯಾಗಿ ಡ್ರೈ ಮಾಡದೆ sedum ಅನ್ನು ನೆತ್ತಿಯ ಮೇಲೆ ಹಾಕಿ ಬಿಡಬಹುದು. (ಆಯಾ ಕೂದಲಿನ ಸಮಸ್ಯೆಗಳಿಗೆ ತಕ್ಕ ಹಾಗೆ sedum ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ) ಆದರೆ ಮಸಾಜ್ ಮಾಡಬಾರದು. ಈಗ ನಿಮ್ಮ ಕೂದಲನ್ನು ನಿಮಗೆ ಇಷ್ಟ ಬಂದ ಹಾಗೆ ವಿನ್ಯಾಸ ಮಾಡಿಕೊಳ್ಳಬಹುದು. (ಹೇರ್ ಸ್ಪಾ ಟ್ರೀಟ್ ಮೆಂಟ್ ಮಾಡಿಸಿದ ನಂತರ ಒಂದು ವಾರಗಳ ಕಾಲ ಕೂದಲಿಗೆ ಎಣ್ಣೆ, ಶಾಂಪೂ ಹಾಕುವ ಅವಶ್ಯಕತೆ ಇರುವುದಿಲ್ಲ)

 

#balkaninews  #hairspa #treatment #benefits #hair #beauty

Tags