ಜೀವನ ಶೈಲಿಸಂಬಂಧಗಳು

ದಾಂಪತ್ಯ ಜೀವನದಲ್ಲಿ ಸುಖಕರವಾಗಿರಬೇಕಾದರೆ… ರೆಡ್ ವೈನ್, ಪಾಲಾಕ್, ಡಾರ್ಕ್ ಚಾಕೋಲೇಟ್ ತಿನ್ನಿ…

ದಾಂಪತ್ಯ ಜೀವನದಲ್ಲಿ ಸುಖಕರವಾಗಿರಬೇಕಾದರೆ… ರೆಡ್ ವೈನ್, ಪಾಲಾಕ್, ಡಾರ್ಕ್ ಚಾಕೋಲೇಟ್ ತಿನ್ನಿ…

ಸುಖಕರ ದಾಂಪತ್ಯ

ದಾಂಪತ್ಯ ಜೀವನ ಸುಖಕರವಾಗಿ ಇರಬೇಕಾದರೆ ನಿತ್ಯ ಡಯಟ್ ನಲ್ಲಿ ಕ್ಯಾರೆಟ್, ಪಾಲಾಕ್, ಈರುಳ್ಳಿ, ಬೆಂಡೆಕಾಯಿ ಇರುವಂತೆ ನೋಡಿಕೊಳ್ಳಬೇಕು. ಪಾಲಾಕ್ ನಲ್ಲಿ ಅಮಿನೋ ಆಸಿಡ್ಸ್, ಪೋಲೇಟ್ ನಂತಹವು ಶೃಂಗಾರ ಸಮಸ್ಯೆಗಳನ್ನು ದೂರ ಮಾಡುತ್ತವೆ. ಪಾಲಾಕನ್ನು ವಾರದಲ್ಲಿ ಎರಡು ಸಲ ತೆಗೆದುಕೊಳ್ಳುವುದರಿಂದ ಹೃದ್ರೋಗ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಶೃಂಗಾರ ವಾಂಛೆಯನ್ನು ಉದ್ರೇಕಿಸುವ ಗುಣ ಟೊಮೊಟೋದಲ್ಲಿ ಹೇರಳವಾಗಿ ಇದೆ.

ಟೊಮೊಟೊ ತಿನ್ನಿ

ನಿತ್ಯ ಟೊಮೊಟೋಗಳನ್ನು ತಿನ್ನುವುದರಿಂದ ಪ್ರೋಸ್ಟೇಟ್ ಕ್ಯಾನ್ಸರ್ ಅಪಾಯದಿಂದ ದೂರ ಇರಬಹುದು ಎನ್ನುತ್ತಿದ್ದಾರೆ ಆರೋಗ್ಯ ತಜ್ಞರು. ಅದೇ ರೀತಿ ಬೆಂಡೆಕಾಯಿಯಲ್ಲಿ ಜಿಂಕ್ ಹೇರಳವಾಗಿದ್ದು ಶೃಂಗಾರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇನ್ನು ಈರುಳ್ಳಿ ಸಹ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇವಿಷ್ಟೇ ಅಲ್ಲದೆ ಬೀಟ್ ರೂಟ್ ನಲ್ಲಿ ನೈಟ್ರೇಟ್ ರಕ್ತ ಸಂಚಲನೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ದಾಂಪತ್ಯ ಸುಖವನ್ನು ಹೆಚ್ಚಿಸಿಕೊಳ್ಳಬಹುದು.

ಹೃದಯದ ಆರೋಗ್ಯ

ಇವಿಷ್ಟೇ ಅಲ್ಲದೆ, ಸ್ಟ್ರಾಬೆರಿ ಹೃದಯದ ಆರೋಗ್ಯವನ್ನು ಮಾತ್ರವಷ್ಟೇ ಅಲ್ಲದೆ, ಶೃಂಗಾರ ಜೀವನಕ್ಕೂ ಉತ್ತಮ. ಓಟ್ ಮೀಲ್ ಸೆಕ್ಸ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇವು ದೇಹದಲ್ಲಿನ ಟೆಸ್ಟೋಸ್ಟೆರಾನ್ ಲೆವೆಲ್ಸನ್ನು ಹೆಚ್ಚಿಸುತ್ತವೆ. ಇದು ಶೃಂಗಾರ ಜೀವನಕ್ಕೆ ತುಂಬಾ ಉಪಯುಕ್ತ. ಸುಖಮಯ ದಾಂಪತ್ಯ ಜೀವನಕ್ಕೆ ರೆಡ್ ವೈನ್ ಸಹ ಸಹಕಾರಿ. ಇನ್ನು ಡಾರ್ಕ್ ಚಾಕೋಲೇಟ್ ಗಳು ಶೃಂಗಾರ ಜೀವನಕ್ಕೆ ಸಾಕಷ್ಟು ಉಪಯುಕ್ತ ಎನ್ನುತ್ತಿದ್ದಾರೆ ತಜ್ಞರು.

Tags