ಜೀವನ ಶೈಲಿಫ್ಯಾಷನ್ಸೌಂದರ್ಯ

ಟೆರಾಕೋಟಾ ಆಭರಣಗಳನ್ನು ನೀವು ಎಂದಾದರೂ ಟ್ರೈ ಮಾಡಿದ್ದೀರಾ..? ಹಾಗಾದರೆ ಇಲ್ಲೊಮ್ಮೆ ನೋಡಿ

ಬೆಂಗಳೂರು, ಮಾ.12:

ಹೆಣ್ಣುಮಕ್ಕಳಿಗೆ ಆಭರಣಗಳ ಮೇಲೆ ವಿಶೇಷವಾದ ಒಲವು. ಬದಲಾಗುವ ಫ್ಯಾಷನ್ ಗಳನ್ನು ಸಂತೋಷದಿಂದ ಸ್ವೀಕರಿಸುವ ಅವರು ಕಾಲಕ್ಕೆ ತಕ್ಕಂತೆ ಬದಲಾಗುವ ಫ್ಯಾಷನ್ ಗಳಿಗೆ ಬಲುಬೇಗನೇ ಹೊಂದಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಕೈ ಬೀಸಿ ಕರೆಯುವ ಫ್ಯಾನ್ಸಿ ಆಭರಣಗಳ ಪೈಕಿ ಟೆರಾಕೋಟಾ ಆಲಿಯಾಸ್ ಮಣ್ಣಿನ ಆಭರಣವೂ ಒಂದು.

ದೇಸಿಯ ಸೊಬಗನ್ನು ಹೊಂದಿದ ಟೆರಾಕೋಟಾ ಆಭರಣಗಳನ್ನು ವಯಸ್ಸಿನ ಅಂತರವಿಲ್ಲದೇ ಯಾರೂ ಬೇಕಾದರೂ ಧರಿಸಬಹುದು. ಕುರ್ತಾ, ಸಲ್ವಾರ್, ಸೀರೆ, ಜೀನ್ಸ್ ಹೀಗೆ ಎಲ್ಲಾ ನಮೂನೆಯ ಡ್ರೆಸ್ ಗಳಿಗೆ ಸುಲಭವಾಗಿ ಮ್ಯಾಚ್ ಆಗುವಂತಹ ಮಣ್ಣಿನ ಆಭರಣಗಳು ದುಬಾರಿಯೇನಲ್ಲ. ತಮ್ಮ ಉಡುಪಿಗೆ ಸರಿ ಹೊಂದುವಂತಹ ಆಭರಣ ಧರಿಸಿ ಮೆರೆದಾಡಬೇಕು ಎಂದೆನ್ನುವ ಲಲನಾಮಣಿಯರಿಗೆ ಇದೀಗ ರಮ್ಯಾ ಚೈತ್ರ ಕಾಲ. ಯಾಕೆಂದರೆ ತಾವು ಧರಿಸುವ ಪ್ರತಿಯೊಂದು ಉಡುಪಿಗೂ ಮ್ಯಾಚಿಂಗ್ ಆಭರಣಗಳನ್ನು ಧರಿಸಲು ಚಿನ್ನ ಮತ್ತು ಬೆಳ್ಳಿಯಲ್ಲಿ ಆಯ್ಕೆಗಳಿಲ್ಲ. ಅದೇನಿದ್ದರೂ ಫ್ಯಾನ್ಸಿ ಆಭರಣಗಳಲ್ಲಿ ಮಾತ್ರ ಸಾಧ್ಯ.ದೇಸಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಟೆರಾಕೋಟಾ ಆಭರಣದ ಮುಖ್ಯ ಗುಣವೆಂದರೆ ಇದು ಪರಿಸರ ಸ್ನೇಹಿಯೂ ಹೌದು. ಇದನ್ನು ಉಪಯೋಗಿಸಿದ ನಂತರ ಬೇಡವೆಂದೂ ತಿರಸ್ಕರಿಸಿ ಬಿಸಾಡಿದರೂ ಕೂಡ ಇದರಿಂದ ಪರಿಸರಕ್ಕೆ ಕಿಂಚಿತ್ತೂ ತೊಂದರೆಯಾಗುವುದಿಲ್ಲ. ಬದಲಿಗೆ ಇದು ಮಣ್ಣಿನಲ್ಲಿ ಕರಗಿ ಹೋಗುತ್ತದೆ.

ಚಿನ್ನ, ಬೆಳ್ಳಿ ಆಭರಣಗಳ ವಿನ್ಯಾಸಗಳು ಮನಕ್ಕೆ ಮುದ ನೀಡಿದರೂ ಅದು ತುಂಬಾ ದುವಾರಿಯಾದುದು. ಅಷ್ಟೇ ಅಲ್ಲದೇ ಇಂದು ಒಂದು, ನಾಳೆ ಮತ್ತೊಂದು, ನಾಡಿದ್ದು ಮಗದೊಂದು ಆಭರಣ ಧರಿಸಿ ಮೆರೆದಾಡಬೇಕು ಎಂಬ ಹಂಬಲವಿರುವ ನಾರಿಮಣಿಯರಿಗೆ ಇದು ಗಗನ ಕುಸುಮವೇ ಸರಿ. ಆದರೆ ಟೆರಾಕೋಟಾ ಆಭರಣಗಳಲ್ಲಿ ಆ ಸಮಸ್ಯೆಯಿಲ್ಲ. ಕಾಲೇಜು ಹುಡುಗಿಯರಿಂದ ಹಿಡಿದು ಹೆಂಗಸರು, ಮುದುಕಿಯರೂ ಕೂಡಾ ಈ ಆಭರಣ ಧರಿಸಿ ಮೆರೆದಾಡಬಹುದು.ಜುಮುಕಿ, ಉಂಗುರ, ಬ್ರೆಸ್ ಲೇಟ್, ಕಾಲು ಗೆಜ್ಜೆ, ಗುಂಡಿನ ಸರ, ಅವಲಕ್ಕಿ ಸರ ಹೀಗೆ ತರತರದ ವಿನ್ಯಾಸದ ಆಭರಣಗಳು ಲಭ್ಯ. ಜೊತೆಗೆ ನೆಕ್ಲೆಸ್, ಇಯರ್ ರಿಂಗ್ ಗಳೂ ಕೂಡಾ ದೊರೆಯುತ್ತದೆ. ಕೈಗೆಟಕುವ ದರದಲ್ಲಿ ದೊರೆಯುವ ಈ ಆಭರಣವನ್ನು ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಒಂದು ವೇಳೆ ಕಾಣೆಯಾದರೂ ಚಿಂತೆಯಿಲ್ಲ. ಆರಾಮದಲ್ಲಿ ಇರಬಹುದು.

ಕಡಿಮೆ ಖರ್ಚಿನಲ್ಲಿ ಸುಂದರವಾಗಿ ಕಾಣಲು ಟೆರಾಕೋಟಾ ಆಭರಣಗಳಿಂದ ಮಾತ್ರ ಸಾಧ್ಯ. ಇನ್ನೇಕೆ ತಡ, ಮಣ್ಣಿನ ಆಭರಣ ಧರಿಸಿ, ಸೌಂದರ್ಯವನ್ನು ಇಮ್ಮಡಿಗೊಳಿಸಿ.

 ಅನಿತಾ ಬನಾರಿ

ಸ್ಲೀಪಿಂಗ್ ವಿತ್ ಮೇಕಪ್ ಒಂದು ದುರಭ್ಯಾಸ

#jewellery #terracottajewellery #balkaninews #terracottajewellerydesign #terracottajewellerydesignideas

Tags

Related Articles