ಆರೋಗ್ಯಆಹಾರಜೀವನ ಶೈಲಿ

ಬಹುಪಯೋಗಿ ನೆಲ್ಲಿಕಾಯಿ ಜ್ಯೂಸ್!

ಬೆಂಗಳೂರು, ಮೇ.23:

ನೆಲ್ಲಿಕಾಯಿಯಲ್ಲಿ ಅಗಾಧ ಪ್ರಮಾಣದ ಪೋಷಕಾಂಶಗಳು ಕದೆ ಎಂದರೆ ತಪ್ಪಾಗಲಾರದು‌. ನೆಲ್ಲಿಕಾಯಿಯಲ್ಲಿ ವಿಟಮಿನ್‌ ಸಿ ಹೇರಳವಾಗಿದೆ. ಇದರ ಜೊತೆಗೆ ಆ್ಯಂಟಿಆಕ್ಸಿಡೆಂಟ್‌ ಇದರಲ್ಲಿದ್ದು  ಇದು ಉತ್ತಮ ಆರೋಗ್ಯಕ್ಕೆ ಸಹಕಾರಿ. ಅಂತೆಯೇ ನೆಲ್ಲಿಕಾಯಿ ಜ್ಯೂಸ್ ಅನ್ನು ಪ್ರತಿದಿನ ಸೇವಿಸಬಹುದು. ಅದರಿಂದಲೂ ನಮ್ಮ ದೇಹಕ್ಕೆ ಬಹಳಷ್ಟು ಪ್ರಯೋಜನಗಳಿವೆ‌.

ರುಚಿರುಚಿಯಾದ ಆಮ್ಲ ಜ್ಯೂಸ್ ತೂಕ ಇಳಿಕೆಗೆ ಸಹಕಾರಿ. ಡಯಟ್ ಮಾಡಬಯಸುವವರು ತಮ್ಮ ಲಿಸ್ಟ್ ನಲ್ಲಿ ನೆಲ್ಲಿಕಾಯಿ ಜ್ಯೂಸ್ ಅನ್ನು ತಪ್ಪದೇ ಸೇರಿಸಲೇಬೇಕು. ಅದು ಏಕಂತೀರಾ? ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್‌ ಕುಡಿಯುವುದು ಒಳ್ಳೆಯದು. ಇದರಿಂದ ತೂಕ ಇಳಿಕೆಯೂ ಆಗುತ್ತದೆ. ಅಷ್ಟೇ ಏಕೆ? ಇದು ಮಧುಮೇಹಿಗಳ ಆರೋಗ್ಯಕ್ಕೂ ಒಳ್ಳೆಯದು. ಯಾಕೆಂದರೆ ನೆಲ್ಲಿಕಾಯಿ ಜ್ಯೂಸ್ ನಲ್ಲಿ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುವ ಶಕ್ತಿಯಿದೆ.

ವಾತಾವರಣದಲ್ಲಿ ಸ್ವಲ್ಪ ಏರುಪೇರಾದರೂ ಶೀತ, ಕೆಮ್ಮು ಕೆಲವರಿಗೆ ಕಾಡುತ್ತದೆ. ಆಗಾಗ ಕಾಡುವ ಶೀತಕ್ಕೆ ಇದು ಉತ್ತಮ ಮದ್ದು. ದಿನ ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಈ ಸಮಸ್ಯೆ ದೂರಾವಾಗುತ್ತದೆ.

ನೀವು ಕುಡಿಯುವ ನೆಲ್ಲಿಕಾಯಿ ಜ್ಯೂಸ್ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅದರಿಂದ ಮಲಬದ್ಧತೆ ಸಮಸ್ಯೆ ಇರುವವರು ಈ ಜ್ಯೂಸ್‌ ಕುಡಿದರೆ ತುಂಬಾ ಒಳ್ಳೆಯದು.

ಜ್ಯೂಸ್ ನ ಬದಲು ನೆಲ್ಲಿಕಾಯಿಯನ್ನು ಕೂಡಾ ತಿನ್ನಬಹುದು. ಆದರೆ ದಿನಕ್ಕೆ ಅದೆಷ್ಟು ನೆಲ್ಲಿಕಾಯಿ ತಿನ್ನಬೇಕು ಎಂದು ಆಲೋಚನೆ ಮಾಡುತ್ತಿದ್ದೀರಾ? ಒಂದು ನೆಲ್ಲಿಕಾಯಿ ತಿಂದರೆ ಧಾರಾಳ ಸಾಕು. ನೀವು ಜ್ಯೂಸ್ ಮಾಡುತ್ತಿದ್ದರೆ ಬರೋಬ್ಬರಿ ನಾಲ್ಕು ಗ್ರಾಂ ನಷ್ಟು ಹುಡಿ ಹಾಕಿದರೆ ಸಾಕು.  ಇನ್ನೇಕ ತಡ? ನೆಲ್ಲಿಕಾಯಿ ಜ್ಯೂಸ್ ಕುಡಿಯಿರಿ. ಬಹು ಉಪಯೋಗವನ್ನು ಪಡೆಯಿರಿ.

Image result for ನೆಲ್ಲಿಕಾಯಿ ಜ್ಯೂಸ್

Image result for ನೆಲ್ಲಿಕಾಯಿ ಜ್ಯೂಸ್

Image result for ನೆಲ್ಲಿಕಾಯಿ ಜ್ಯೂಸ್

ರುಚಿ ರುಚಿಯಾದ ರಂಬುಟನ್ ಹಣ್ಣು!!

#gooseberry #indiangooseberry #nellikaijuice

 

Tags