ಆರೋಗ್ಯಆಹಾರಜೀವನ ಶೈಲಿ

ನಿಮ್ಮ  ಹೃದಯ ಆರೋಗ್ಯದಿಂದ ಇರಬೇಕಾ…?

ನಡಿಗೆ, ಡ್ಯಾನ್ಸ್‌, ಜಿಮ್‌, ಓಟ, ಆಟ, ಧಾನ್ಯ, ಕಾಳುಗಳು, ತರಕಾರಿ, ಹಣ್ಣುಗಳು ಅತ್ಯವಶ್ಯ

ನಿಮ್ಮ  ಹೃದಯ ಆರೋಗ್ಯವಾಗಿ ಇರಬೇಕಾದರೆ ಹೀಗೆ ಮಾಡಿ

ಇಂದು ಹೃದ್ರೋಗಗಳು ಎಲ್ಲರನ್ನೂ ಕಾಡುತ್ತಿವೆ. ಬದಲಾದ ಜೀವನಶೈಲಿ, ಆಹಾರಾಭ್ಯಾಸಗಳು, ಒತ್ತಡದ ಜೀವನ, ದೈಹಿಕ ಶ್ರಮ ಇಲ್ಲದಿರುವಂತಹ ಹಲವಾರು ಕೆಲಸಗಳು ಇಂದು ಹೃದಯಕ್ಕೆ ಅಪಾಯ ತಂದೊಡ್ಡುತ್ತಿವೆ. ಇದಕ್ಕೆಲ್ಲಾ ಪರಿಹಾರ ನಮ್ಮ ಕೈಯಲ್ಲೇ ಇದೆ. ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿರಬೇಕಾದರೆ ಏನು ಮಾಡಬೇಕು ಎಂಬುದಕ್ಕೆ ಇಲ್ಲಿವೆ ನೋಡಿ ಪರಿಹಾರಗಳು.

ಹೆಚ್ಚು ಹೆಚ್ಚು ತರಕಾರಿ ಸೇವಿಸಿ

                

 

ಧಾನ್ಯ ಕಾಳುಗಳು, ತರಕಾರಿ ಸೇವನೆಯನ್ನು ಆದಷ್ಟು ಹೆಚ್ಚು ಮಾಡಿ. ಊಟಕ್ಕೆ ಬಿಳಿ ಅನ್ನದ ಬದಲು ಕಂದು ಅಕ್ಕಿಗೆ ಆದ್ಯತೆ ನೀಡಿ. ಮೊಟ್ಟೆ, ಮೀನು, ಬೀನ್ಸ್‌ ಮೊದಲಾದ ಪ್ರೊಟೀನ್‌ ಹೇರಳವಿರುವ ಆಹಾರವನ್ನು ಸೇವಿಸಬೇಕು. ಸಂಸ್ಕರಿತ ಆಹಾರ ಪದಾರ್ಥ, ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪದಾರ್ಥ ಸೇವನೆ ಕಡಿಮೆ ಮಾಡಿ.

ದೇಹಕ್ಕೆ ವ್ಯಾಯಾಮ ಅಗತ್ಯ

ದೇಹದ ಆರೋಗ್ಯಕ್ಕೆ ವ್ಯಾಯಾಮ ಕೂಡ ಅತಿ ಅವಶ್ಯಕ. ಆದ್ದರಿಂದ ದಿನ ನಿತ್ಯ ನಿಯಮಿತ ಹೊತ್ತು ವ್ಯಾಯಾಮ ಮಾಡುವುದನ್ನು ತಪ್ಪಿಸಬಾರದು. ನಡಿಗೆ, ಡ್ಯಾನ್ಸ್‌, ಜಿಮ್‌, ಓಟ, ಆಟ ಹೀಗೆ ಯಾವುದಾರೂ ವಿಧದಲ್ಲಿ ವ್ಯಾಯಾಮ ಮಾಡಬೇಕು. ವಾರಕ್ಕೆ ಕನಿಷ್ಠವೆಂದರೂ ಎರಡೂವರೆ ಗಂಟೆಗಳ ಕಾಲ ವ್ಯಾಯಾಮ ಮಾಡಿದರೆ ದೇಹ ಆರೋಗ್ಯವಾಗಿರುತ್ತದೆ. ತುಂಬಾ ಬ್ಯುಸಿಯಾಗಿದ್ದರೆ ದಿನಕ್ಕೆ 10,000 ಹೆಜ್ಜೆಗಳಷ್ಟಾದರೂ ನಡೆಯುವ ಗುರಿ ಇಟ್ಟುಕೊಳ್ಳಿ.

ನಿಯಮಿತವಾಗಿ ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳಿ

ಈಗಂತೂ ಅನಾರೋಗ್ಯಕ್ಕೆ ವಯಸ್ಸಿನ ನಂಟು ಇಲ್ಲವೆಂಬಂತಾಗಿದೆ. ಹೀಗಾಗಿ ನಿಯಮಿತವಾಗಿ ವೈದ್ಯರನ್ನು ಭೇಟಿಯಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಯಾಕೆಂದರೆ ನಮಗೆ ಅರಿವಿಲ್ಲದಂತೆ ಕ್ಯಾಲ್ಸಿಯಂ ಮತ್ತು ವಿಟಾಮಿನ್‌ ಡಿ ಕೊರತೆ ಉಂಟಾಗುತ್ತದೆ. ಇದು ವಿಕೋಪಕ್ಕೆ ಹೋಗುವುದನ್ನು ತಪ್ಪಿಸಲು ಸಕಾಲದಲ್ಲಿ ವೈದ್ಯಕೀಯ ಪರೀಕ್ಷೆ ನೆರವಾಗುತ್ತದೆ.

ನಗುನಗುತ್ತಾ ಮಾತನಾಡುವುದನ್ನು ಕಲಿಯಿರಿ

ಬಹುತೇಕ ರೋಗಗಳ ಮೂಲ ಕಾರಣ ಒತ್ತಡ ಎಂದು ಇತ್ತೀಚಿನ ಅಧ್ಯಯನಗಳಿಂದ ತಿಳಿದು ಬಂದಿದೆ. ಹೀಗಾಗಿ ಎಷ್ಟೇ ಕಷ್ಟವಾದರೂ ಒತ್ತಡ ನಿವಾರಣಾ ಕ್ರಮಗಳನ್ನು ಕೈಗೊಳ್ಳಲೇಬೇಕು. ಇದಕ್ಕಾಗಿ ಧ್ಯಾನ, ಆಳವಾದ ಉಸಿರಾಟ, ಯೋಗ, ಮಸಾಜ್‌, ವ್ಯಾಯಾಮ, ದಿನದಲ್ಲಿ ಒಂದಿಷ್ಟು ಹೊತ್ತು ಬಿಡುವು ಮಾಡಿಕೊಕಂಡು ಮನೆ ಮಂದಿ, ಸ್ನೇಹಿತರ ಜೊತೆ ನಗು ನಗುತ್ತಾ ಮಾತನಾಡುವುದು ಮೊದಲಾದ ಕೆಲಸ ಮಾಡಬೇಕು. ಇನ್ನೂ ಒತ್ತಡ ನಿವಾರಣೆಯಾಗಿದ್ದರೆ ವೃತ್ತಿಪರ ತಜ್ಞರ ನೆರವು ಪಡೆಯಬೇಕು. ಇನ್ನು ಮದ್ಯಪಾನ, ದೂಮಪಾನ ಬಿಡುವುದು ಅತ್ಯುತ್ತಮ.

 

Tags

Related Articles