ಆರೋಗ್ಯ

ನಿಮ್ಮ ಕೂದಲು ಬಿಳಿಯಾಗುತ್ತಿದೆಯೇ..? ಇಲ್ಲಿದೆ ನೋಡಿ ಪರಿಹಾರ..

ಅದ್ಭುತ ಪರಿಹಾರಗಳಿವೆ

ಪ್ರತಿಯೊಬ್ಬರು ತಲೆ ಕೂದಲು ಕಪ್ಪಾಗಿ ದಪ್ಪವಾಗಿ ಇರಲು ಬಯಸುತ್ತಾರೆ.  ಆದರೆ ಎಳೆಯ ವಯಸ್ಸಿನಲ್ಲೇ ಕೆಲವರ ತಲೆ ಕೂದಲು ಬಿಳಿಯಾಗಿರುತ್ತೆ. ಇದಕ್ಕೆ ಮೂಲ ಕಾರಣ ಪೋಷಕಾಂಶಗಳ ಕೊರತೆ, ಮಾನಸಿಕ ಒತ್ತಡ, ಕ್ಲೋರಿನ್ ನೀರು, ಬದಲಾಗುತ್ತಿರುವ ಜೀವನ ಶೈಲಿ. ಇದಕ್ಕೆ ಪರಿಹಾರ ಇಲ್ಲಿದೆ.

 

ಬೇಕಾದ ಸಾಮಾಗ್ರಿಗಳು

ಟೀ ಪೌಡರ್

ಬೆಟ್ಟದ ನೆಲ್ಲಿಕಾಯಿ

ಮೆಹಂದಿ ಪೌಂಡರ್

ಸ್ವಲ್ಪ ಪ್ರಮಾಣದಲ್ಲಿ ಟೀ ಪೌಡರ್ ಅನ್ನು ಬಿಸಿ ನೀರಿನಲ್ಲಿ ಹಾಕಿ ಚೆನ್ನಾಗಿ ಕಲಸಿ ಫಿಲ್ಟರ್ ಮಾಡಿ ಇಟ್ಟು ಕೊಳ್ಳಿ, ನಂತ್ರ ಒಂದು ಬೌಲ್ ತೆಗೆದುಕೊಂಡು ಅದರಲ್ಲಿ  ಎರಡು ಚಮಚ ಬೆಟ್ಟದ ನೆಲ್ಲಿಕಾಯಿ ಪೌಡರ್ , ಎರಡು ಚಮಚ ಮೆಹಂದಿ ಪೌಡರ್ ಮಿಶ್ರಣ ಮಾಡಿ. ಅದಕ್ಕೆ ಫಿಲ್ಟರ್ ಮಾಡಿ ಇಟ್ಟಿರುವಂತಹ ಟೀ ಬೆರಸಿ ಚೆನ್ನಾಗಿ ಕಲಸಿ ತಲೆ ಕೂದಲಿಗೆ ಹಚ್ಚಿಕೊಳ್ಳಬೇಕು.

ಬಳಿಕ ತಲೆಗೆ ಸ್ನಾನ ಮಾಡುವಾಗ ಕಡಿಮೆ ಕೆಮಿಲ್ ಬಳಸಿರುವ ಶ್ಯಾಂಪು ಬಳಸಿ. ಹೀಗೆ ವಾರದಲ್ಲಿ ಎರಡು ಬಾರಿ ಮಾಡಿಕೊಂಡರೆ ಬಿಳಿಯಾಗಿರುವ ನಿಮ್ಮ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಕೂದಲಿನ ಕಾಂತಿ ಹೆಚ್ಚಿಸುವ ತೆಂಗಿನಹಾಲಿನ ಕಂಡೀಶನರ್..!

#whitehairproblem #health #blackhairs #hairfall #solution

Tags