ಆರೋಗ್ಯಜೀವನ ಶೈಲಿ

ಸೀಬೆ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತೇ?

ಸೀಬೆ ಚಿರಪರಿಚಿತ ಹಣ್ಣು..

ಸೀಬೆ ಚಿರಪರಿಚಿತ ಹಣ್ಣು. ನೈಸರ್ಗಿಕವಾಗಿ ದೊರೆಯುವಂತಹ ಈ ಹಣ‍್ಣನ್ನು ಇಷ್ಟ ಪಡದವರೇ ಇಲ್ಲ. ಇದರಲ್ಲಿ ಕೆಂಪು ಮತ್ತು ಬಿಳಿ ಎಂಬಎರಡು ವಿಧವಿದೆ. ಸಹಜವಾಗಿ ಕೆಂಪು ಸೀಬೆಗಿಂತ ಬಿಳಿ ಸೀಬೆ ಹಣ‍್ಣಿನಲ್ಲಿ ರುಚಿ ಹೆಚ್ಚು.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಸೀಬೆ ಹಣ್ಣಿಗಿದೆ. ಕಿತ್ತಳೆಗಿಂತ ಹೆಚ್ಚು ವಿಟಾಮಿನ್ ಸಿ ಅಂಶವನ್ನು ಸೀಬೆ ಹೊಂದಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಕಾರಿ. ಸಾಮಾನ್ಯ ಸೋಂಕು ಮುಂತಾದ ಸಮಸ್ಯೆಗಳಿಂದ ರಕ್ಷಿಸುತ್ತದೆ.ಇದು ದೇಹದಲ್ಲಿನ ಕ್ಯಾನ್ಸರ್ ಕಣಗಳು ಮಾಯವಾಗುವಂತೆ ಮಾಡುತ್ತದೆ.

Related image

ಸೀಬೆ ಸೇವನೆ ಚರ್ಮವನ್ನೂ ಹದವಾಗಿಡುತ್ತದೆ

ರಕ್ತದಲ್ಲಿ ಹೆಚ್ಚಿದ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ಮಧುಮೇಹ ನಿಯಂತ್ರಣಕ್ಕೆ ಬರುವಂತೆ ಮಾಡುತ್ತದೆ. ದೇಹದಲ್ಲಿನ ಸೋಡಿಯಂ ಮತ್ತು ಪೊಟ್ಯಾಶಿಯಂ ಅಂಶವನ್ನು ಸಮತೋಲನದಲ್ಲಿಡುವ ಮೂಲಕ ರಕ್ತದೊತ್ತಡವನ್ನೂ ಸಮಸ್ಥಿತಿಯಲ್ಲಿಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್‌ಅನ್ನು ದೇಹದಿಂದ ಹೊರದಬ್ಬಿ ಉತ್ತಮ ಕೊಲೆಸ್ಟ್ರಾಲ್ ಶೇಖರಣೆಯಾಗುವಂತೆ ಮಾಡುತ್ತದೆ.  ಸೀಬೆ ಎಲೆಗಳನ್ನು ಜಜ್ಜಿ ಮಾಡಿದ ಪೇಸ್ಟ್ ಸೌಂದರ್ಯಕಾರಕವಾಗಿಯೂ ಉಪಯೋಗಿಸಲ್ಪಡುತ್ತದೆ. ಚರ್ಮದ ಹಲವು ತೊಂದರೆಗಳಿಗೆ ಇದರಿಂದ ಉಪಶಮನ ದೊರಕುತ್ತದೆ.
ಸೀಬೆ ಸೇವನೆ ಚರ್ಮವನ್ನೂ ಹದವಾಗಿಡುತ್ತದೆ. ಅನೇಕ ತ್ವಚೆ ಸಂಬಂಧಿ ಸಮಸ್ಯೆಗಳನ್ನು ದೂರವಿರಿಸುತ್ತದೆ. ದಿನಕ್ಕೊಂದು ಸೀಬೆ ತಿಂದರೆ ಸಾಕು, ಅಗತ್ಯವಾದ ಕಬ್ಬಿಣಾಂಶ, ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ಫೈಬರ್, ಪ್ರೊಟೀನ್, ಕಾರ್ಬೊಹೈಡ್ರೇಡ್, ವಿಟಮಿನ್ ಎ, ಬಿ, ಮತ್ತು ಸಿ ಎಲ್ಲವನ್ನೂ ನೀಡುತ್ತದೆ.

Image result for guava
ಸೀಬೆ ಸೇವಿಸಿದರೆ ತುಂಬಾ ಉಪಯೋಗ

ಸೀಬೆ ಹಣ್ಣಿನಲ್ಲಿ ಅಧಿಕವಾಗಿರುವ ನಾರಿನಂಶವಿರುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದವರು ಸೀಬೆ ಸೇವಿಸಿದರೆ ತುಂಬಾ ಉಪಯೋಗ ಪಡೆಯಬಹುದು. ತೂಕ ಕಡಿಮೆಮಾಡಿಕೊಳ್ಳಬೇಕೆಂದಿದ್ದರೆ ಸೀಬೆ ಒಳ್ಳೆ ಆಯ್ಕೆ. ಸೀಬೆಯಲ್ಲಿ ಅವಶ್ಯಕ ಕಾರ್ಬೊ ಹೈಡ್ರೇಡ್ ಮತ್ತು ಫೈಬರ್ ಇರುವುದರಿಂದ ಬೊಜ್ಜನ್ನೂ ನಿಯಂತ್ರಿಸುತ್ತದೆ. ಸೀಬೆ ಹಣ್ಣನ್ನು ಡಯಟ್ ನಲ್ಲಿರಿಸಿಕೊಂಡರೆ ಕೊಲೆಸ್ಟ್ರಾಲ್ ನಿಯಂತ್ರಣ ಸಾಧ್ಯವಿದೆ. ತೂಕ ಕಡಿಮೆಮಾಡಿಕೊಳ್ಳಬೇಕೆಂದಿದ್ದರೆ ಸೀಬೆ ಒಳ್ಳೆ ಆಯ್ಕೆ. ಸೀಬೆಯಲ್ಲಿ ಅವಶ್ಯಕ ಕಾರ್ಬೊ ಹೈಡ್ರೇಡ್ ಮತ್ತು ಫೈಬರ್ ಇರುವುದರಿಂದ ಬೊಜ್ಜನ್ನೂ ನಿಯಂತ್ರಿಸುತ್ತದೆ. ಸೀಬೆ ಹಣ್ಣಿನ ಸೋಜಿಗವೆ೦ದೆನಿಸುವಷ್ಟು ವಿಟಮಿನ್ ಎ ಯು ಸಮೃದ್ಧವಾಗಿದ್ದು, ಇದರಲ್ಲಿ ವಿಟಮಿನ್ ಎ ಶೇ. 21 ಇದ್ದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ಇರುಳು ಕುರುಡು ಉಂಟಾಗದಂತೆ ಕಣ್ಣನ್ನು ರಕ್ಷಣೆ ಮಾಡುತ್ತದೆ. ಸೀಬೆ ಹಣ‍್ಣನ್ನು ಪ್ರತೀದಿನ ತಿನ್ನಿ, ಉತ್ತಮ ಫಲಿತಾಂಶ ಕಾಣುವಿರಿ.

 

 

Tags