ಆರೋಗ್ಯಜೀವನ ಶೈಲಿ

ಸೇವಿಸಿ ಪ್ರತಿನಿತ್ಯ ಶುಂಠಿ ಚಹಾ, ಪಡೆಯಿರಿ ಹಲವು ಹತ್ತು ಆರೋಗ್ಯ ಭಾಗ್ಯ!!

ಶುಂಠಿ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ

ಚಳಿಗಾಲ ಬಂತೆಂದರೆ ಸಾಕು ಆರೋಗ್ಯದ ಕಡೆ ಕೊಂಚ ಜಾಸ್ತಿಯೇ ಗಮನ ಹರಿಸಬೇಕು.. ಚಳಿಗೆ ಒಂದು ಲೋಟ ಬಿಸಿ ಕಾಫಿ/ಟೀ ಕುಡಿದು ಬಿಡೋಣ ಅನ್ನಿಸಿ ಬಿಡುತ್ತದೆ.. ಟೀ ಅಥವಾ ಚಹಾ ಬದಲು ಒಂದು ಲೋಟ ಬಿಸಿ ಬಿಸಿ ಶುಂಠಿ ಚಹಾ ನೀಡುವ ಆರಾಮವನ್ನು ಬೇರೆ ಯಾವುದೂ ನೀಡಲು ಸಾಧ್ಯವಿಲ್ಲ. ಇದರಲ್ಲಿ ವಿಟಮಿನ್ ಸಿ, ಮೆಗ್ನೀಶಿಯಂ ಮತ್ತು ಇತರ ಖನಿಜಗಳನ್ನು ಹೊಂದಿರುವ ಶುಂಠಿ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಶುಂಠಿ ಚಹಾ ಔಷಧಿ ಗುಣಗಳನ್ನು ಹೊಂದಿದ್ದು ಚಿಕಿತ್ಸೆ ರೂಪದಲ್ಲಿ ಬಳಸಲಾಗುತ್ತದೆ.

Related image

ಶುಂಠಿ ಚಹಾದಿಂದ ಸಿಗುವ ಆರೋಗ್ಯಕರ ಪ್ರಯೋಜನಗಳು

  • ದೇಹದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
  • ಹೊಟ್ಟೆ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
  • ತೂಕ ನಷ್ಟ ಮಾಡಲು ಸಹಾಯ ಮಾಡುತ್ತದೆ.
  • ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯಕಾರಿ.
  • ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುವಲ್ಲಿ ಹೆಚ್ಚಿನ ಸಹಾಯ ಶುಂಠಿ ಚಹಾದಲ್ಲಿದೆImage result for ginger tea uses
  • ಪರಿಚಲನೆ ಸುಧಾರಿಸುತ್ತದೆ
  • ಆಹಾರ ಜೀರ್ಣಕ್ರಿಯೆಯನ್ನು ಸರಿಪಡಿಸಲು ಸಹಾಯಕಾರಿ..
  • ಸಂಧಿವಾತ ಉರಿಯೂತವನ್ನು ಕಡಿಮೆ ಮಾಡುತ್ತದೆ
  • ಮುಟ್ಟಿನ ಅಸ್ವಸ್ಥತೆಯನ್ನು ನಿವಾರಿಸಲು ಇದು ಬಹಳ ಪರಿಣಾಮಕಾರಿ
  • ಒತ್ತಡವನ್ನು ನಿವಾರಿಸಿ, ಮನೋಲ್ಲಾಸದಿಂದ ಇರುವಂತೆ ಮಾಡುತ್ತದೆ..

ಶುಂಠಿ ಚಹಾದಿಂದ ಸೇವಿಸುವದರಿಂದ ಹತ್ತು ಹಲವಾರು ಲಾಭಗಳಿವೆ.. ಹಾಗಿದ್ದಲ್ಲಿ ಇನ್ನೇಕೆ ತಡ.. ಶುಂಠಿ ಚಹಾ ಸೇವಿಸಿ ಆರೋಗ್ಯ ಪಡೆಯಿರಿ!!

 

Tags