ಆರೋಗ್ಯ

ಹೃದಯ ಸಂಬಂಧಿತ ಖಾಯಿಲೆಗೆ ಸಲಹೆ ಸೂಚನೆಗಳು….!

ಇತ್ತೀಚಿಗೆ, ಹೃದಯ ಸಂಬಂಧಿತ ಖಾಯಿಲೆಗಳು ಜಾಗತಿಕ ಆರೋಗ್ಯ ಸಮಸ್ಯೆಯಾಗಿವೆ. ಸಮೀಕರಣದ ವರದಿಯಂತೆ, ವಿಶ್ವಾದ್ಯಂತ ಸುಮಾರು 26 ದಶಲಕ್ಷ ಜನರನ್ನು ಹೃದಯ ಸಮಸ್ಯೆ ಕಾಡುತ್ತಿದೆ ಎನ್ನಲಾಗಿದೆ. ಹೃದಯ ವೈಫಲ್ಯ ಕಾಯಿಲೆಯ ಹೊರೆ ಭಾರತದಲ್ಲಿ ಸುಮಾರು 10 ದಶಲಕ್ಷ ಹೆಚ್ಚು ಬಳಲುತ್ತಿದ್ದಾರೆ. ಎಂದು ವರದಿಗಳು ಹೇಳುತ್ತವೆ.

ತುರ್ತು ಅವಶ್ಯಕತೆ

ಭಾರತದಲ್ಲಿ ಹೃದಯ ವೈಫಲ್ಯವನ್ನು ಸಾರ್ವಜನಿಕ ಆರೋಗ್ಯ ಆದ್ಯತೆಯಾಗಿ ಗುರುತಿಸುವ ತುರ್ತು ಅವಶ್ಯಕತೆ ಇದೆ. ಎಂದು ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ .ರೋಗ ಪತ್ತೆಯಾದ ಒಂದು ವರ್ಷದೊಳಗೆ ಹೃದಯ ವೈಫಲ್ಯವು ಭಾರತೀಯ ರೋಗಿಗಳ ಪೈಕಿ 23% ಜನರನ್ನು ಬಲಿ ತೆಗೆದುಕೊಳ್ಳುತ್ತದೆ. ಎಂದು ತಿಳಿಸಲಾಗಿದೆ.

ಹೃದಯ ವೈಫಲ್ಯ ಕಾಯಿಲೆಯು ದೀರ್ಘಕಾಲಿಕ/ಪ್ರಗತಿಯಾಗುತ್ತ ಹೋಗುವ ಸ್ಥಿತಿಯಾಗಿದ್ದು, ಹೃದಯವನ್ನು ಪಂಪ್ ಮಾಡುವುದಕ್ಕೆ ಕಾರಣವಾದ ಸ್ನಾಯುಗಳು ಕೃಶವಾಗುತ್ತವೆ ಅಥವಾ ಕಾಲಾಂತರದಲ್ಲಿ ಗಡುಸಾಗುತ್ತ ಹೋಗುತ್ತವೆ ಎಂದು ಹೃದ್ರೋಗ ಶಾಸ್ತ್ರ ಪ್ರಾಧ್ಯಾಪಕರಾದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.

ತೀವ್ರ ಹೃದಯರೋಗ ಘಟಕ

ದಕ್ಷಿಣ ಪೂರ್ವ ಏಷಿಯಾದಲ್ಲಿ ಶ್ರೀ ಜಯದೇವ ಹೃದಯನಾಳೀಯ ಮತ್ತು ಸಂಶೋಧನಾ ಸಂಸ್ಥೆ, ಹೃದಯ ಆರೈಕೆಗೆ ಅತಿದೊಡ್ಡ ಆಸ್ಪತ್ರೆ. 2017 ರಲ್ಲಿ, ತೀವ್ರ ಹೃದಯರೋಗ ಘಟಕಕ್ಕೆ ದಾಖಲಾದ ರೋಗಿಗಳ ಪೈಕಿ 2000 ರೋಗಿಗಳು ಹೃದಯ ವೈಫಲ್ಯದಿಂದ ಬಳಲುತ್ತಿದ್ದಾರೆ. ಇವರ ಪೈಕಿ ಪುರುಷರ ಪ್ರಮಾಣ 65% ಮತ್ತು ಮಹಿಳೆಯರ ಪ್ರಮಾಣ 35%” ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಈ ಗಂಭೀರವಾದ ಆರೋಗ್ಯ ಸಮಸ್ಯೆ ಕುಟುಂಬದಲ್ಲಿ ಹಣಕಾಸು ಹೊರೆಯನ್ನು ತರುವಂಥದ್ದು. ಪ್ರತಿವರ್ಷ ಈ ಕಾಯಿಲೆಯ ವಿಶ್ವ ಆರ್ಥಿಕ ಹೊರೆ 108 ಬಿಲಿಯನ್ ಡಾಲರ್ ವ್ಯಯಿಸುತ್ತದೆ. ಇದರಲ್ಲಿ ನೇರ ಹಾಗೂ ಪರೋಕ್ಷ ವೆಚ್ಚಗಳು ಒಳಗೊಂಡಿವೆ. ಮುಂದುವರೆಸುತ್ತಾ ಡಾ. ಸಿ.ಎನ್. ಮಂಜುನಾಥ್ ಹೇಳುತ್ತಾರೆ.

ಸಲಹೆಗಳು

ದೈನಂದಿನ ಚಟುವಟಿಕೆಗಳಲ್ಲಿ ಚಿಕಿತ್ಸೆಯ ಧನಾತ್ಮಕ ಫಲಿತಾಂಶದ ಜೊತೆಗೆ ಈ ಕೆಳಗಿನ ಅಂಶಗಳನ್ನು ಪಾಲಿನೆ ಮಾಡುವುದರ ಮೂಲಕ ಹೃದಯ ವೈಫಲ್ಯವಿರುವ ರೋಗಿಗಳು ಜೀವನ ಗುಣಮಟ್ಟವನ್ನು ಸುದಾರಿಸಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ.

• ತೆಳ್ಳನೆಯ ಉಡುಪು ಧರಿಸುವುದು
• ಸ್ನಾನ
• ಮೆಟ್ಟಿಲು ಹತ್ತುವುದು
• 100 ಮೀಟರ್ ನಡೆಯುವುದು
• ಸಂಬಂಧಿಗಳನ್ನು ಹಾಗೂ ಸ್ನೇಹಿತರನ್ನು ಭೇಟಿಯಾಗುವುದು
• ಜಾಗಿಂಗ್
• ಕೈತೋಟದ ಕೆಲಸ
• ಹವ್ಯಾಸಗಳು
• ಮನೆಗೆಲಸ ಮಾಡುವುದು
• ನಿಕಟ/ಲೈಂಗಿಕ ಸಂಬಂಧ

Tags

Related Articles