ಆರೋಗ್ಯಜೀವನ ಶೈಲಿ

ಕೊರೊನಾದಿಂದ ಮುಕ್ತಿ ಪಡೆಯಲು ಇಲ್ಲಿದೆ ಸರಳ ಮದ್ದು

ಪ್ಯಾರಾಸೆಟಮಲ್, ಚಿಕನ್ ಸೂಪ್ ಹಾಗೂ ನಿಂಬೆ ಪಾನಕ

ಕೊರೊನಾದಿಂದ ಮುಕ್ತಿ ಪಡೆಯಲು ಸಾಮಾನ್ಯ ಜನರು ಪರದಾಡುತ್ತಿದ್ದಾರೆ‌. ಆದರೆ ಬ್ರಿಟನ್‌ನ ವೈದ್ಯೆಯೊಬ್ಬಳು ಕೇವಲ ಪ್ಯಾರಾಸೆಟಮಲ್, ಚಿಕನ್ ಸೂಪ್ ಹಾಗೂ ನಿಂಬೆ ಪಾನಕ ಸೇವಿಸುವ ಮೂಲಕ ಮಾರಣಾಂತಿಕ ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖಳಾದೆ ಎಂದು ಹೇಳಿದ್ದಾರೆ.

ಕೊರೊನಾ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಜಾಗೃತರಾಗಿ ಮತ್ತು ಆತ್ಮವಿಶ್ವಾಸದಿಂದ ಇದ್ದರೆ ಕೊರೊನಾದಿಂದ ಗುಣಮುಖರಾಗಬಹುದು ಎಂದು ಕ್ಲೇರಾ ಗೆರಡಾ ತಿಳಿಸಿದ್ದಾರೆ.

ಲಂಡನ್ ಮೂಲದ ರಾಯಲ್ ಕಾಲೇಜ್ ಆಫ್ ಜನರಲ್ ಪ್ರಾಕ್ಟೀಷನರ್ಸ್ ಮುಖ್ಯಸ್ಥೆಯಾಗಿರುವ 60 ವರ್ಷದ ಕ್ಲೇರಾ ಗೆರಡಾ, ಇತ್ತೀಚಿಗೆ ನ್ಯೂಯಾರ್ಕ್ ಸಮ್ಮೇಳನಕ್ಕೆ ತೆರಳಿದ್ದಾಗ ಕೊರೊನಾ ವೈರಸ್ ತಗುಲಿತ್ತು. ಕೊರೊನಾದಿಂದ ಬಳಲುತ್ತಿದ್ದ ವೈದ್ಯೆ ಸ್ವತಃ ಪ್ಯಾರಾಸೆಟಮೊಲ್, ಚಿಕನ್ ಸೂಪ್ ಮತ್ತು ನಿಂಬೆ ಪಾನಕ ಸೇವಿಸಿ ಗುಣಮುಖರಾಗಿದ್ದಾರೆ ಎಂದು ಅಲ್ಲಿನ ಪತ್ರಿಕೆ ವರದಿ ಮಾಡಿದೆ.

ಕೊರೊನಾ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವ ಕ್ಲೇರಾ ಗೆರಡಾ, ವೈರಸ್‌ ತಗುಲಿದಾಗ ನಾನು ಸಂಪೂರ್ಣ ನಿಶಕ್ತಳಾಗಿದ್ದೆ. ನನಗೆ 50 ಪೌಂಡ್ ಭಾರ ಎತ್ತಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಆರೋಗ್ಯ ತುಂಬಾ ಕ್ಷೀಣಿಸಿತ್ತು. ಆದರೆ, ಜೀವಕ್ಕೆ ಅಪಾಯವಿದೆ ಎಂದು ಭಾವಿಸಲಿಲ್ಲ. ದೇಹವನ್ನು ಕೊರೊನಾ ವಿರುದ್ಧ ಹೋರಾಡಲು ಹೇಗೆ ಅಣಿಗೊಳಿಸಬಹುದೆಂದು ನಾನು ಯೋಚಿಸುತ್ತಿದ್ದೆ ಎಂದಿದ್ದಾರೆ.

ಆ ಬಳಿಕ ಪ್ಯಾರಾಸೆಟಮಲ್, ಚಿಕನ್ ಸೂಪ್ ಮತ್ತು ನಿಂಬೆ ಪಾನಕ ಸೇವಿಸಿದೆ. ನಂತರ ಕೊರೊನಾ ಸಂಪೂರ್ಣವಾಗಿ ವಾಸಿಯಾಯಿತು ಎಂದು ಕ್ಲೇರಾ ಹೇಳಿದ್ದಾರೆ. ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಜಾಗೃತರಾಗಿರಿ ಎಂದು ಕ್ಲೇರಾ ಸಂದೇಶ ನೀಡಿದ್ದಾರೆ.

#IndiaFightsCorona   #StayhomeStaysafe 

​21 Days Lock Down, Good Time To Kick Old Habits

Tags