ಆರೋಗ್ಯಆಹಾರ

ಬಾಯಲ್ಲಿ ನೀರೂರಿಸುವ ಫಿಶ್ ಫ್ರೈ ಮಸಾಲ

ಭಾನುವಾರ ಬಂತೆಂದರೆ ಏನಾದರೂ ಸ್ಪೆಷಲ್ ಮಾಡಿಕೊಂಡು ತಿನ್ನಬೇಕೆಂದು ಅನಿಸುವುದು ಸಹಜ. ಅದಕ್ಕಾಗಿ ಈ ಬಾರಿ ಸ್ಪೈಸಿಯಾಗಿರುವ, ಸುಲಭವಾಗಿ ಮಾಡಿಕೊಂಡು ತಿನ್ನಬಹುದಾದ ಫಿಶ್ ಫ್ರೈ ಮಸಾಲ ಅಥವಾ ಮಸಾಲ ಮೀನು ಕೊಡಲಾಗಿದೆ, ನೀವೂ ಒಮ್ಮೆ ಟ್ರೈ ಮಾಡಿ…

ಬೇಕಾಗುವ ಪದಾರ್ಥಗಳು

5-6 ಮೀನು ತುಂಡುಗಳು (ಅಗತ್ಯವಿದ್ದರೆ ನೀರು, ಉಪ್ಪು, ಅರಿಶಿನ ಮತ್ತು ನಿಂಬೆಯೊಂದಿಗೆ ಚೆನ್ನಾಗಿ ತೊಳೆಯಿರಿ)

1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ

1/2 ಟೀಸ್ಪೂನ್ ಅರಿಶಿನ ಪುಡಿ

1 ಟೀಸ್ಪೂನ್ ಜೀರಿಗೆ ಪುಡಿ / ಜೀರಾ ನೀರು

1 ಟೀಸ್ಪೂನ್ ಹುರಿದ ಕೊತ್ತಂಬರಿ ಬೀಜಗಳು / ಧನಿಯಾ ಪುಡಿ

ರುಚಿಗೆ ತಕ್ಕಷ್ಟು ಉಪ್ಪು

1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್

2-3 ಟೀಸ್ಪೂನ್ ನೀರು

3 ಟೀಸ್ಪೂನ್ ಎಣ್ಣೆ

ಅಲಂಕರಿಸಲು

3-4 ನಿಂಬೆ ತುಂಡು

2 ಟೀಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು

ಈರುಳ್ಳಿ ಉಂಗುರಗಳು

ಮೀನು ತೊಳೆಯುವ ವಿಧಾನ

ಮೀನಿನ ತುಂಡುಗಳನ್ನು ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ, ಆ ನಂತರ ಸ್ವಲ್ಪ ಉಪ್ಪು, ಅರಿಶಿನವನ್ನು ಹಚ್ಚಿ ಕೆಲವು ನಿಮಿಷಗಳ ಕಾಲ ಇಡಿ. ಮೀನುಗಳನ್ನು ಮತ್ತೆ ಚೆನ್ನಾಗಿ ತೊಳೆಯಿರಿ. ಇನ್ನೂ ಅನಗತ್ಯ ವಾಸನೆ ಇದ್ದರೆ ನಿಂಬೆ ರಸವನ್ನು ಸಹ ಬಳಸಿ.

ಮಸಾಲ ಪೇಸ್ಟ್ ತಯಾರಿಕೆ

ಒಂದು ಬಟ್ಟಲಿನಲ್ಲಿ ಅಥವಾ ತಟ್ಟೆಯಲ್ಲಿ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ರುಚಿಗೆ ತಕ್ಕಂತೆ ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.ಎಲ್ಲಾ ಮಸಾಲೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.ಸ್ವಲ್ಪ ನೀರನ್ನು ಸೇರಿಸಿ . ಗಟ್ಟಿಯಾದ ಪೇಸ್ಟ್ ಮಾಡಿ. ಈಗ ಮಸಾಲ ಪೇಸ್ಟ್ ಸಿದ್ಧವಾಗಿದೆ.

ಮಾಡುವ ವಿಧಾನ

ಸಿದ್ಧವಾದ ಮಸಾಲ ಪೇಸ್ಟ್ ತೆಗೆದುಕೊಂಡು ಇಡೀ ಮೀನು ತುಂಡಿನ ಮೇಲೆ ಲೇಪಿಸಿ.

ಹೀಗೆ ಎಲ್ಲಾ ಮೀನಿನ ತುಂಡುಗಳ ಮೇಲೆ ಮಸಾಲಾ ಪೇಸ್ಟ್‌ ಹಚ್ಚಿ ಕೋಟ್ ಮಾಡಿ.

ಕೋಟ್ ಮಾಡಿದ ಮೀನುಗಳನ್ನು 10-15 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.

ನಂತರ ಬಾಣಲೆಯಲ್ಲಿ ಫ್ರೈ ಮಾಡಿ. ಮಧ್ಯಮ ಉರಿಯಲ್ಲಿ 10-15 ನಿಮಿಷ ಬೇಯಿಸಿ. ಹೀಗೆ ಎರಡು ಬದಿಯನ್ನು ಬೇಯಿಸಿ

ಪ್ರತಿ ಬದಿ ಫ್ರೈ ಮಾಡಲು ಬೇಕಾದರೆ 10 ನಿಮಿಷ ತೆಗೆದುಕೊಳ್ಳಿ. ಈಗ ಮೀನಿನ ತುಂಡುಗಳನ್ನು ಹೊರತೆಗೆದು ಟಿಶ್ಯೂ ಕಾಗದದ ಮೇಲೆ ಇರಿಸಿ.

ಇದನ್ನು ಸರ್ವ್ ಮಾಡುವಾಗ ನಿಂಬೆ ರಸವನ್ನು ಸಿಂಪಡಿಸಿ. ಈರುಳ್ಳಿ ಉಂಗುರಗಳು ಮತ್ತು ತಾಜಾ ಕೊತ್ತಂಬರಿ ಸೊಪ್ಪಿನೊಂದಿಗೆ ಬಡಿಸಿ.

#balkaninews #fishfrymasala #food #health

Tags