ಆರೋಗ್ಯ

ಬಿಸಿ ಬಿಸಿಯಾದ ವಡಾ ಪಾವ್ ರೆಸಿಪಿ

ಸಂಜೆಯಾಯಿತೆಂದರೆ ಬೀದಿ ಬದಿ ಅಂಗಡಿಗಳು, ರೆಸ್ಟೋರೆಂಟ್ ಗಳು, ದರ್ಶಿನಿ ಕ್ಯಾಂಟೀನ್ ಗಳಲ್ಲಿ ಬಿಸಿ ಬಿಸಿಯಾದ ವಡಾ ಪಾವ್ ಲಭ್ಯ. ಇದನ್ನು ತಿನ್ನಲು  ಜನ ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತಾರೆ. ಅಲ್ಲಿ ಕಾದು ಕುಳಿತು ತಿನ್ನಬೇಕಲ್ಲ ಎಂದು ಗೊಣಗುವವರು, ನಾವೇ ಮಾಡಿ ತಿನ್ನಬೇಕು ಎಂದು ಇಷ್ಟಪಡುವರಿಗಾಗಿ ಇಲ್ಲಿ ವಡಾ ಪಾವ್ ಮಾಡುವುದು ಹೇಗೆಂದು ಕೊಡಲಾಗಿದೆ. ಮತ್ತೇಕೆ ತಡ, ಮಾಡಲು ಶುರುವಿಟ್ಟುಕೊಳ್ಳಿ…

ವಡಾ ಮಾಡಲು ಬೇಕಾಗುವ ಪದಾರ್ಥಗಳು

1 ಕಪ್ ಬೇಯಿಸಿದ ಮತ್ತು ಹಿಸುಕಿದ ಆಲೂಗಡ್ಡೆ

2 ಟೀಸ್ಪೂನ್ ಶುಂಠಿ-ಹಸಿರು ಮೆಣಸಿನಕಾಯಿ ಪೇಸ್ಟ್

1 ಚಮಚ ಕತ್ತರಿಸಿದ ಕೊತ್ತಂಬರಿ

2 ಟೀ ಚಮಚ ನಿಂಬೆ ರಸ

ರುಚಿಗೆ ಉಪ್ಪು

¼ ಟೀಚಮಚ ಅರಿಶಿನ ಪುಡಿ

7-8 ಕರಿಬೇವಿನ ಎಲೆಗಳು

ಚಿಟಿಕೆ ಇಂಗು

ಲೇಪನಕ್ಕಾಗಿ

1/3 ಕಪ್ ಗ್ರಾಂ ಹಿಟ್ಟು

1/4 ಟೀಚಮಚ ಅರಿಶಿನ ಪುಡಿ

½ ಟೀಚಮಚ ಮೆಣಸಿನ ಪುಡಿ

ಚಿಟಿಕೆ ಇಂಗು

ರುಚಿಗೆ ಉಪ್ಪು

ಮಾಡುವ ವಿಧಾನ

ಮೇಲೆ ಹೇಳಿದಂತೆ ವಡಾಕ್ಕೆ ಬೇಕಾದ ಪದಾರ್ಥಗಳನ್ನು ಸೇರಿಸಿ ಮೃದುವಾದ ಹಿಟ್ಟಿನಂತಹ ಮಿಶ್ರಣವನ್ನು ಮಾಡಿ.

ಲೇಪನಕ್ಕೆ ಹೇಳಿದ ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿನಲ್ಲಿ ಪ್ರತ್ಯೇಕವಾಗಿ ಮಿಶ್ರಣ ಮಾಡಿ.

ಲೇಪನದ ಮಿಶ್ರಣದಲ್ಲಿ ವಡಾ ಮಿಶ್ರಣವನ್ನು ರೋಲ್ ಮಾಡಿ. ಕಾದ ಎಣ್ಣೆಯಲ್ಲಿ ಹಾಕಿ 15 ನಿಮಿಷಗಳ ಕಾಲ ಫ್ರೈ ಮಾಡಿ. ಇದನ್ನು ಪಾವ್ಸ್ (ಬನ್) ಮಧ್ಯೆ ಇಟ್ಟು ಸೇವಿ

ದಸರಾ ಸ್ಪೆಷಲ್: ಕ್ಯಾರೆಟ್ ಬಾದಾಮಿ ಪಾಯಸ

#balkaninews #vadapav #food

Tags