ಆರೋಗ್ಯಪುರುಷಮಹಿಳೆಸಂಬಂಧಗಳು

‘ಕಿಸ್’ ಮಾಡುತ್ತಲೇ ಕಡಿಮೆಗೊಳಿಸಿ ಅಧಿಕ ರಕ್ತದ ಒತ್ತಡವನ್ನು…!!!

ಇನಿಯನಿಂದ ಪಡೆದ ಒಂದು ಸಿಹಿಚುಂಬನ ಮಾಸಿಕ ದಿನಗಳಲ್ಲಿ ಕೆಳಹೊಟ್ಟೆಯ ಸೆಡೆತ, ನೋವನ್ನು ಕಡಿಮೆಗೊಳಿಸುತ್ತದೆ.

 

ಸಾಮಾನ್ಯವಾಗಿ ಚುಂಬನದ ವೇಳೆಯಲ್ಲಿ ಹೃದಯದ ಬಡಿತ ತೀವ್ರಗೊಳ್ಳುತ್ತದೆ. ಈ ಸಮಯದಲ್ಲಿ ರಕ್ತನಾಳಗಳೂ ಹಿಗ್ಗಿ ಹೆಚ್ಚು ವಿಶಾಲವಾಗುತ್ತವೆ ಹಾಗೂ ರಕ್ತ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಸರಾಗವಾಗಿ ಸಾಗಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಅಧಿಕ ರಕ್ತದೊತ್ತಡ ತಗ್ಗುತ್ತದೆ. ಅಷ್ಟೇ ಅಲ್ಲ, ಇದು ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಮಹಿಳೆಯರಿಗೇ ಏಕೆ? ಮಾಸಿಕ ದಿನಗಳಲ್ಲಿ ಎದುರಾಗುವ ಕೆಳಹೊಟ್ಟೆಯ ಸೆಡೆತ ಹಾಗೂ ನೋವನ್ನು ಕಡಿಮೆಗೊಳಿಸಲು ಚುಂಬನ ನೆರವಾಗುತ್ತದೆ. ಇನಿಯನಿಂದ ಈ ಸಮಯದಲ್ಲಿ ಪಡೆದ ಒಂದು ಸಿಹಿಚುಂಬನ ರಕ್ತಪರಿಚಲನೆಯನ್ನು ತೀವ್ರಗೊಳಿಸಿ ಮನಸ್ಸಿಗೆ ಮುದನೀಡುವ ರಸದೂತಗಳನ್ನು ಬಿಡುಗಡೆಗೊಳಿಸಿ ನೋವನ್ನು ಕಡಿಮೆ ಮಾಡುವ ಜೊತೆಗೇ ಮನೋಭಾವವನ್ನೂ ಉತ್ತಮಗೊಳಿಸುತ್ತದೆ.

   
ಚುಂಬನದಿಂದ ಬಾಂಧವ್ಯ ಉತ್ತಮಗೊಳ್ಳುತ್ತದೆ ಕುಟುಂಬ ಸದಸ್ಯರಲ್ಲಿ ವಿನಿಮಯಗೊಳ್ಳುವ ಚುಂಬನ ಕುಟುಂಬವನ್ನು ಭದ್ರವಾಗಿಸಲು ಭದ್ರಬುನಾದಿಯಾಗಿದೆ. ಮೇಲೆ ವಿವರಿಸಿದಂತೆ ಚುಂಬನದ ಮೂಲಕ ಬಿಡುಗಡೆಗೊಳ್ಳುವ ಆಕ್ಸಿಟೋಸಿನ್ ಮನಸ್ಸಿಗೆ ಮುದನೀಡುವ ರಸದೂತವಾಗಿದೆ ಹಾಗೂ ಇದರ ಸ್ರವಿಕೆಯಿಂದ ಈ ಸಮಯದಲ್ಲಿ ಈ ಮುದನೀಡುವಿಕೆಗೆ ಕಾರಣವಾದ ವ್ಯಕ್ತಿಯ ಪ್ರತಿ ಆರಾಧನಾ ಮತ್ತು ರಕ್ಷಣೆ ಪಡೆಯುವ ಭಾವನೆ ಮೂಡುತ್ತದೆ

Tags

Related Articles