ಆರೋಗ್ಯಸಂಬಂಧಗಳು

ಚುಂಬನಂ ಪರಮೌಷಧಂ..!

ಪ್ರೀತಿಗೆ ಬೆಟ್ಟಗಳನ್ನೇ ಅಲ್ಲಾಡಿಸುವ ಶಕ್ತಿ ಇರುವಾಗ ಪ್ರೀತಿಯ ಸಂಕೇತವಾದ ಚುಂಬನಕ್ಕೆ..ಅಡ್ಡಿ ಏಕೆ..?

 

ಪ್ರಥಮ ಚುಂಬನಂ ದಂತ  ಭಗ್ನಂ..ಓ ಮರೆತು ಬಿಡಿ..ಇದೋ ಬಹಳ ಹಳೆಯ ಗಾದೆ..! ಇಂದು ನಮ್ಮ ವೈದ್ಯರೂ ಕೂಡಾ ಚುಂಬನದ ಕುರಿತಾಗಿ ಹೊಸ ಹೊಸ ಪರಿಭಾಷೆ ನೀಡುತ್ತಲಿದ್ದು ಚುಂಬನಂ ಪರಮೌಷಧಂ..ಎಂದು ಸಾರುತ್ತಲಿದ್ದಾರೆ..!

ಚುಂಬನದ ಮೂಲಕ ತುಟಿಗಳನ್ನು ಸಂಕುಚಿಸುವುದು ಎಷ್ಟು ಆರೋಗ್ಯಕರ ಎಂಬುದನ್ನು ತಿಳಿದುಕೊಳ್ಳಬಹುದು.

ಕೆಲವೊಂದು ದಿನ ನಾವು ಬೆಳಿಗ್ಗೆ ಎದ್ದಾಗ ಉಲ್ಲಸಿತರಾಗಿರುತ್ತೇವೆ ಹಾಗೂ ಕೆಲವು ದಿನ ರೇಗಾಡುವ ಮನೋಭಾವ ಹೊಂದಿರುತ್ತೇವೆ. ಒಂದು ವೇಳೆ ರೇಗಾಟ ಬೆಳಗ್ಗಿನಿಂದ ಪ್ರಾರಂಭವಾದರೆ ಇದು ದಿನವಿಡೀ ಮುಂದುವರೆದು ಮನಸ್ಸನ್ನೇ ಕದಡಬಹುದು. ಈ ಭಾವನೆ ಸತತವಾಗಿರುವವರಿಗೊಂದು ಒಳ್ಳೆಯ ಸುದ್ದಿ ಇದೆ.

ಏನೆಂದರೆ ಬೆಳಿಗ್ಗೆದ್ದಾಗ ರೇಗಾಟದ ಮನೋಭಾವವಿದ್ದರೂ ಒಂದು ಚುಂಬನವನ್ನು ನೀಡುವ ಮೂಲಕ ಮನಸ್ಸಿನಿಂದ ಈ ಭಾವನೆ ಹೊರಟುಹೋಗುತ್ತದೆ ಎಂದು ವಿಜ್ಞಾನವೇ ತಿಳಿಸುತ್ತಿದೆ.

ಇದರಿಂದ ಉದ್ವೇಗ ಕಡಿಮೆಯಾಗುತ್ತದೆ ನಿಮಗೆ ಉದ್ವೇಗಕ್ಕೊಳಗಾಗುವ ತೊಂದರೆ ಇದೆಯೇ? ಅಥವಾ ನಿಮ್ಮ ಮನದಲ್ಲಿರುವ ಒತ್ತಡ ಮತ್ತು ಉದ್ವೇಗಗಳನ್ನು ನಿಭಾಯಿಸಲು ನಿಮ್ಮಿಂದ ಆಗುತ್ತಿಲ್ಲವೇ? ಹಾಗಾದರೆ ನೀವು ಚುಂಬನದ ನೆರವನ್ನೇಕೆ ಪಡೆಯಬಾರದು? ಚುಂಬನದ ಸಮಯದಲ್ಲಿ ದೇಹದಲ್ಲಿ ಸ್ರವಿಸುವ ಆಕ್ಸಿಟೋಸಿನ್ ಮಾನಸಿಕ ಉದ್ವೇಗವನ್ನು ಕಡಿಮೆ ಮಾಡಿ ಹೆಚ್ಚು ನಿರಾಳತೆ ಅನುಭವಿಸಲು ನೆರವಾಗುತ್ತದೆ ಹಾಗೂ ಒಟ್ಟಾರೆ ನಿರಾಳತೆಯನ್ನು ಪಡೆಯಲು ಸಾಧ್ಯವಾಗುತ್ತದೆ.  ಅಷ್ಟಕ್ಕೂ ಈ ಚಿಕ್ಕ ತೊಂದರೆ ಸರಿಸಾಟಿಯೇ?

Tags