ಆರೋಗ್ಯ

ಪ್ರಪ್ರಥಮ ಬಾರಿಗೆ ಭಾರತದಲ್ಲಿ ಪತ್ತೆಯಾದ ಅಪರೂಪದ ರಕ್ತದ ಗುಂಪು!

…..ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರಿಂದ ಶೋಧ, ಇಂಗ್ಲೆಂಡ್ ವಿಶೇಷ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅಪರೂಪದ ಗುಂಪು ಪತ್ತೆ…..

ಮಣಿಪಾಲ್, ಆ.02: ವಿಶ್ವದಲ್ಲಿಯೇ ಅತ್ಯಂತ ಅಪರೂಪದ ರಕ್ತದ ಗುಂಪೊಂದನ್ನು ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಪತ್ತೆ ಮಾಡಿದ್ದಾರೆ. ಇದನ್ನು ಪಿಪಿ ಅಥವಾ ಪಿ ನಲ್ ಎಂದು ದೃಡಪಡಿಸಲಾಗಿದೆ. ಈ ರಕ್ತದ ಗುಂಪು ಸುಮಾರು ಐದು ಸಾವಿರದಲ್ಲಿ ಒಬ್ಬ ವ್ಯಕ್ತಿಗಿಂತಲೂ ಕಡಿಮೆ ಜನರಲ್ಲಿ  ಕಂಡು ಬರುತ್ತದೆ ಎಂದು ತಜ್ಞವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

80ಕ್ಕೂ ಹೆಚ್ಚು ಮಾದರಿಗಳೊಂದಿಗೆ ಹೋಲಿಕೆ

ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಿದಾಗ, ರಕ್ತ ತಂತ್ರಜ್ಞರಿಗೆ ಇದು ಯಾವ ಗುಂಪಿನ ರಕ್ತ ಎನ್ನುವುದನ್ನು ಪತ್ತೆ ಮಾಡಲು ಸಾದ್ಯವಾಗದ ಕಾರಣ, ಆಸ್ಪತ್ರೆಯ ರಕ್ತನಿಧಿಯ ವೈದ್ಯಾಧಿಕಾರಿ ಡಾ. ಶಮಿ ಶಾಸ್ತ್ರಿ ಮತ್ತು ತಂಡದವರು ಸುಮಾರು 80ಕ್ಕೂ ಹೆಚ್ಚು ಮಾದರಿಗಳೊಂದಿಗೆ ಹೋಲಿಕೆ ಮಾಡಿ ನೋಡಿದರೂ ಅದು ತಾಳೆಯಾಗಲಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಬಳಿಕ ಅದನ್ನು ಇಂಗ್ಲೆಂಡಿನ ‘ಬ್ಲಡ್ ಗ್ರೂಪ್ ರೆಫರೆನ್ಸ್’ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ದು ತೀರಾ ಅಪರೂಪದ ರಕ್ತದ ಗುಂಪು ಎಂದು ಅಲ್ಲಿನ ವೈದ್ಯಾಧಿಕಾರಿಗಳು ದೃಡಪಡಿಸಿದ್ದಾರೆ.

Tags