ಆರೋಗ್ಯ

ಪಪ್ಪಾಯ ಬೀಜ ಗರ್ಭನಿರೋಧಕ ಗುಣ ಹೊಂದಿದೆಯಂತೆ!

ವಿದೇಶಿಯರಿಂದ ಭಾರತಕ್ಕೆ ಬಂದಿದ್ದಕ್ಕೆ ಪಪ್ಪಾಯಕ್ಕೆ ‘ಪರಂಗಿ ಹಣ್ಣು’ ಎಂಬ ಹೆಸರು ಬಂದಿದೆ. ದಕ್ಷಿಣ ಅಮೆರಿಕಾ ಮೂಲದ ಪಪ್ಪಾಯವನ್ನು ಮೊದಲು ಕಂಡು ಹಿಡಿದಿದ್ದು ಅಮೆರಿಕಾ ಖಂಡ ಪತ್ತೆ ಮಾಡಿದ ಕೊಲಂಬಸ್.

ಪಪ್ಪಾಯ ಪೋಷಕಾಂಶಗಳ ಆಗರವಾಗಿದ್ದು, ಔಷಧೀಯ ಗುಣಗಳನ್ನು ಹೊಂದಿದೆ.

ಅಂದಹಾಗೆ ಮಲೇಶಿಯಾದಲ್ಲಿ ನಡೆದ ಸಂಶೋಧನೆ ಪ್ರಕಾರ ಉಷ್ಣವಲಯದಲ್ಲಿ ಬೆಳೆಯಲಾಗುವ ಪಪ್ಪಾಯ ಹಣ್ಣುಗಳನ್ನು ನಾಲ್ಕು ವಾರಗಳ ಕಾಲ ಪ್ರತಿದಿನ ಸೇವಿಸುವವರಿಗೆ ಕೊಲೆಸ್ಟ್ರಾಲ್ ಪ್ರಮಾಣ ಶೇ.19.2 ರಷ್ಟು ಕಡಿಮೆಯಾಗಿರುವುದು ಧೃಢಪಟ್ಟಿದೆ.

ಹಾಗೆಯೇ ಬ್ರೆಜಿಲ್ ನಡೆಸಿದ ಸಂಶೋಧನೆಯ ಪ್ರಕಾರ ಪಪ್ಪಾಯ ಬೀಜವು ಗರ್ಭನಿರೋಧಕ ಗುಣ ಹೊಂದಿದೆಯೆಂದು ದೃಢಪಟ್ಟಿದೆ. ಆದ್ದರಿಂದ ಬೀಜದಿಂದ ಗರ್ಭ ನಿರೋಧಕ ಮಾತ್ರೆಗಳನ್ನು ತಯಾರಿಸುವತ್ತ 2011 ರಲ್ಲಿ ಪ್ರಯತ್ನಿಸಲಾಗಿತ್ತು.

ಹೃದಯದ ಆರೋಗ್ಯಕ್ಕೆ ಇಲ್ಲಿವೆ ನೋಡಿ ಸೂಪರ್ ಫುಡ್ ಗಳು

#balkaninews #papayaseed #health #contraceptive

Tags