ಆರೋಗ್ಯಸೌಂದರ್ಯ

ಹಲವು ರೋಗಗಳನ್ನು ನಿವಾರಿಸುವ ಅಳಲೆಕಾಯಿ

ಅಡುಗೆ ಮನೆಯ ವೈದ್ಯ ಎಂದೇ ಜನಪ್ರಿಯತೆ ಪಡೆದಿರುವ ಅಳಲೆ ಕಾಯಿಯು ಕಾಂಬ್ರೆಟೇಸಿ ಕುಟುಂಬಕ್ಕೆ ಸೇರಿದೆ. ಇನ್ನು ಔಷಧಿಗಳ ರಾಜ ಎಂದು ಆಯುರ್ವೇದದಲ್ಲಿ ಜನಜನಿತವಾಗಿರುವ ಅಳಲೆಕಾಯಿ ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೂ ಕೊಡಬಹುದಾದ ಮದ್ದು ಹೌದು. ಭಾರತದಾದ್ಯಂತ ಕಂಡುಬರುವ ಅಳಲೆಕಾಯಿ ಅನೇಕ ವ್ಯಾಧಿಗಳನ್ನು ನಿವಾರಿಸುವ ಗುಣ ಹೊಂದಿದೆ.

1 ಚರ್ಮಕ್ಕೆ ಸಂಬಂಧಿಸಿದ ಬ್ಯಾಕ್ಟೀರಿಯಾ ಮತ್ತು ಫಂಗಸ್ ನಿಯಂತ್ರಣಕ್ಕೆ ಅಳಲೆಕಾಯಿ ಬಳಸುತ್ತಾರೆ.

2 ದೇಹದ ಯಾವುದೇ ಭಾಗಗಳಿಗೆ ಗಾಯಗಳಾಗಿದ್ದರೂ ಅಳಲೆಕಾಯಿಯ ರಸ ಲೇಪಿಸುವುದರಿಂದ ಬಹು ಬೇಗನೇ ಗಾಯ ಕಡಿಮೆಯಾಗುತ್ತದೆ.

3 ಬಾಯಿ ಹುಣ್ಣಾದಾಗ ಅಳಲೆಕಾಯಿ ಪುಡಿಯನ್ನು ನೀರಿನಲ್ಲಿ ಸೇರಿಸಿ ಬಾಯಿ ಮುಕ್ಕುಳಿಸಿ ಉಗುಳಬೇಕು. ಬಾಯಿಹುಣ್ಣು ಕಡಿಮೆಯಾಗುತ್ತದೆ.

4 ಪ್ರತಿದಿನ ಅಳಲೆಕಾಯಿ ಕಷಾಯ ಕುಡಿಯುವುದರಿಂದ ದೇಹದ ಉಷ್ಣತೆ ಸಮತೋಲನದಲ್ಲಿ ಇರುತ್ತದೆ.

5 ಪ್ರತಿ ದಿನ ರಾತ್ರಿ ಮಲಗುವ ಮುನ್ನ ಚಿಟಿಕೆ ಪುಡಿಯನ್ನು ಬಿಸಿ ನೀರಲ್ಲಿ ಕಲಸಿ ಕುಡಿದರೆ ಬೆಳಗ್ಗೆ ಸುಲಭವಾಗಿ ಮಲವಿಸರ್ಜನೆಯಾಗುತ್ತದೆ.

6 ಫಂಗಲ್ ಇನ್ ಫೆಕ್ಷನ್ ಇದ್ದ ಜಾಗಕ್ಕೆ ಅಳಲೆಕಾಯಿಯನ್ನು ವಿನಿಗರ್ ನಲ್ಲಿ ತೇದು ಹಚ್ಚಿದರೆ ಇನ್ಫೆಕ್ಷನ್ ಕಡಿಮೆಯಾಗುತ್ತದೆ.

7 ನಿಯಮಿತವಾಗಿ ಸೇವಿಸಿದರೆ ತೂಕವನ್ನು ಕಡಿಮೆಗೊಳಿಸಲು, ವಾಯುಭಾದೆ ನಿವಾರಿಸಲು, ರಕ್ತ ಶುದ್ದೀಕರಣ ಸಹಾಯ ಮಾಡುತ್ತದೆ.

ಹುಳುಕು ಹಲ್ಲಿನ ನಿವಾರಣೆಗೆ ಇಲ್ಲಿವೆ ಮನೆಮದ್ದುಗಳು

#AlaleKayi #AlaleKayiHealth #AlaleKayiMedicine #HealthTips  #LifeStyle

Tags