ಆರೋಗ್ಯ

ವೀರ್ಯ ಕುರಿತಾದ ಕೆಲ ಮುಖ್ಯ ವಿಷಯಗಳು!

ದಿನನಿತ್ಯದ ಸಾಮಾಜಿಕ ಜೀವನದಲ್ಲಿ ನಮಗೆ ಎಷ್ಟೋ ಸಂಗತಿಗಳಿವೆ(ವಿಷಯಗಳಿವೆ). ಅದರಲ್ಲೂ ಪ್ರಮುಖವಾಗಿ ದಿನನಿತ್ಯದ ಜೀವನದಲ್ಲಿ ಲೈಂಗಿಕತೆಯ ಕುರಿತಾಗಿ ಸಾಕಷ್ಟು ವಿಷಯಗಳನ್ನು ಅದಕ್ಕೆ ಬೇಕಾದ ಜಾಗೃತಿಗಳನ್ನು ತೆಗೆದುಕೊಳ್ಳುವುದು ಅವಶ್ಯಕ!

ಸಾಕಷ್ಟು ಜನರಿಗೆ ಲೈಂಗಿಕತೆಯ ಕುರಿತಾಗಿ ಕೆಲವು ವಿಷಯಗಳು ನಮಗೆ ತಿಳಿದಿರುವುದೇ ಇಲ್ಲ. ಲೈಂಗಿಕ ಜೀವನದಲ್ಲೂ ಅಷ್ಟೆ. ತಿಳಿಯದೇ ಇರುವ ಹಲವು ಸಂಗತಿಗಳು ಇರುತ್ತವೆ. ಅವುಗಳಲ್ಲಿ ವೀರ್ಯದ ಕುರಿತ ಕೆಲವು ಸತ್ಯಗಳನ್ನು ಇಲ್ಲಿ ನೋಡೋಣ ಬನ್ನಿ!

* ನೀವು ಆಹಾರದಲ್ಲಿ ಎಷ್ಟು ಕ್ಯಾಲೊರಿ ಇರುತ್ತದೆ ಎಂದು ಯೋಚಿಸುವವರಾದರೆ, ಒಂದು ಚಮಚ ವೀರ್ಯದಲ್ಲಿ ಇಪ್ಪತ್ತು ಕ್ಯಾಲೊರಿ ಇರುತ್ತದೆ ಎಂಬ ಅಂಶವೂ ನಿಮಗೆ ತಿಳಿದಿರಬೇಕಾಗುತ್ತದೆ.

* ಅತಿ ಹೆಚ್ಚಿನ ಮಟ್ಟದ ಪ್ರೊಟೀನು ಹಾಗೂ ಕೊಲೆಸ್ಟ್ರಾಲ್‍ನಿಂದ ವೀರ್ಯವು ರೂಪಿತಗೊಂಡಿರುತ್ತದೆ. ಕೊಲೆಸ್ಟ್ರಾಲ್ ಅಷ್ಟೇ ಅಲ್ಲ, ಝಿಂಕ್ ಹಾಗೂ ಹಲ್ಲು ಹುಳುಕಿನ ವಿರುದ್ಧ ಹೋರಾಡಲು ಅನುವಾಗುವ ಕ್ಯಾಲ್ಸಿಯಂ ಅನ್ನೂ ವೀರ್ಯ ಹೊಂದಿರುತ್ತದೆ.

* ಪ್ರೊಟೀನುಭರಿತ ಆಹಾರ ಸೇವನೆಯನ್ನು ಹೆಚ್ಚಿಸಿದರೆ, ವೀರ್ಯದ ಪ್ರಮಾಣ ಹಾಗೂ ಗುಣಮಟ್ಟವನ್ನೂ ವೃದ್ಧಿಸಿಕೊಳ್ಳಬಹುದು.

* ಲೈಂಗಿಕಕ್ರಿಯೆಯ ಸಮಯದಲ್ಲಿ ಕೇವಲ ಶೇ 5ರಷ್ಟು ವೀರ್ಯ ಸ್ಖಲನಗೊಳ್ಳುತ್ತದೆ. ಆದ್ದರಿಂದಲೇ ದಂಪತಿಗೆ ಗರ್ಭಧಾರಣೆಯಲ್ಲಿ ತೊಡಕಾಗುತ್ತದೆ. ಆದರೆ ಗರ್ಭಧಾರಣೆ ಸಾಧ್ಯತೆಯು ವೀರ್ಯದ ಗುಣಮಟ್ಟದ ಮೇಲೂ ಅವಲಂಬಿತವಾಗಿರುತ್ತದೆ.

* ಕೆಲವು ಪುರುಷರಿಗೆ ಲೈಂಗಿಕಕ್ರಿಯೆಯ ನಂತರ ಸುಸ್ತು, ಜ್ವರ ಹಾಗೂ ನೆಗಡಿ ಅನುಭವಕ್ಕೆ ಬರುತ್ತದೆ. ಅಂಥವರಿಗೆ ವೀರ್ಯದ ಅಲರ್ಜಿ ಇದೆ ಎಂದರ್ಥ. ಮಹಿಳೆಯರಲ್ಲಿ, ಲೈಂಗಿಕಕ್ರಿಯೆಯ ನಂತರ ಉರಿಯೂತ ಕಂಡುಬಂದರೆ ಅದನ್ನು ವೀರ್ಯದ ಅಲರ್ಜಿ ಎಂದು ಪರಿಗಣಿಸಬೇಕಾಗುತ್ತದೆ. ಈ ಸಮಸ್ಯೆಗೆ ಹಿಪ್ಸೊಸೆನ್ಸಿಟೇಷನ್ ಥೆರಪಿ ಲಭ್ಯವಿದೆ.

* ನಿಮ್ಮ ಋತುಚಕ್ರದ ಸಮಯವನ್ನು ಅವಲಂಬಿಸಿ ವೀರ್ಯವು ದೇಹದಲ್ಲಿ ಎರಡು ದಿನಗಳಿಂದ ಐದು ದಿನಗಳವರೆಗೆ ಇರುತ್ತದೆ.

* ರೇತಸ್ಸಿನೊಂದಿಗೆ ವೀರ್ಯವು ಬಿಡುಗಡೆಗೊಳ್ಳಲಿಲ್ಲ ಎಂದರೆ, ಅದು ಮತ್ತೆ ದೇಹಕ್ಕೆ ಸೇರುತ್ತದೆ. ಆದ್ದರಿಂದ ವೀರ್ಯ ವ್ಯರ್ಥವಾಗುವ ಮಾತೇ ಇಲ್ಲ.

* ವೀರ್ಯವು ಆರೋಗ್ಯಕರವಾಗಿರಬೇಕು ಎಂದರೆ, ಜನನೇಂದ್ರಿಯದ ಭಾಗದಲ್ಲಿ ಶಾಖ ಆಗದಂತೆ ನೋಡಿಕೊಳ್ಳುವುದೂ ಬಹುಮುಖ್ಯ. ಜನನೇಂದ್ರಿಯದ ಉಷ್ಣತೆಯು ದೇಹದ ಉಷ್ಣತೆಗಿಂತ 7 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರಬೇಕಾಗುತ್ತದೆ. ಆದ್ದರಿಂದ ತುಂಬಾ ಬಿಗಿಯಾದ ಒಳಉಡುಪುಗಳನ್ನು ತೊಡದೆ ಇರುವುದು ಒಳ್ಳೆಯದು.

* ವೀರ್ಯದ ಕಾರ್ಯನಿರ್ವಹಣೆಯನ್ನು ನಿರ್ದೇಶಿಸಲು ರಾಸಾಯನಿಕ ಅಂಶ ಇರುವುದು ಹೌದಾದರೂ ಅದು ಹಾಗೆ ಅನುಸರಿಸುವುದು ಅಪರೂಪ. ವೀರ್ಯವು ವೃತ್ತಾಕಾರದಲ್ಲಿ ಚಲಿಸುತ್ತದೆ. ಕೆಲವೇ ಕೆಲವು ಮೇಲ್ಮುಖವಾಗಿ ಚಲಿಸುತ್ತವೆ.

* ಮಿಲಿಯನ್‍ಗಟ್ಟಲೆ ಸಂಖ್ಯೆಯಲ್ಲಿ ವೀರ್ಯವು ಹೊರಬಂದರೂ, ವೀರ್ಯವಾಗುವ ಪ್ರಕ್ರಿಯೆಗೆ ಎರಡು ತಿಂಗಳನ್ನು ತೆಗೆದುಕೊಳ್ಳುತ್ತದೆ. ವೀರ್ಯದ ಉತ್ಪತ್ತಿಯು ನಿರಂತರ ಪ್ರಕ್ರಿಯೆಯಾಗಿದ್ದು, ಒಂದು ಅಂತಿಮ ಉತ್ಪನ್ನವಾಗಲು ಎರಡು ತಿಂಗಳು ಸಮಯ ತೆಗೆದುಕೊಳ್ಳುತ್ತದೆ.

* ಮೊದಲ ಸ್ಖಲನದಲ್ಲಿ ಅತಿ ಹೆಚ್ಚಿನ ವೀರ್ಯವು ಇರುತ್ತದೆ.

* ಅತಿಯಾದ ಲೈಂಗಿಕಕ್ರಿಯೆ ಅಥವಾ ಹಸ್ತಮೈಥುನವು ವೀರ್ಯದ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ.

* ವೀರ್ಯದಲ್ಲಿ ಎಕ್ಸ್ ಅಥವಾ ವೈ ಕ್ರೋಮೋಸೋಮ್ ಇದೆ ಎಂದಾದರೂ, ಅವುಗಳ ಉತ್ಪತ್ತಿಯಲ್ಲಿ ಯಾವುದೇ ಭಿನ್ನತೆ ಇರುವುದಿಲ್ಲ. ಎರಡೂ ಒಂದೇ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಎರಡೂ ಒಂದೇ ವೇಗದಲ್ಲಿ ಚಲಿಸುತ್ತವೆ.

* ಒಂದೇ ವೃಷಣದಲ್ಲಿ ವೀರ್ಯದ ಉತ್ಪತ್ತಿ ಸಾಧ್ಯ.

* ವ್ಯಾಯಾಮಕ್ಕೆ ವೀರ್ಯವು ಬೇಗ ಪ್ರತಿಕ್ರಿಯಿಸುತ್ತದೆ. ಯಾರು ಹೆಚ್ಚು ವ್ಯಾಯಾಮ ಮಾಡುತ್ತಾರೋ ಅವರಲ್ಲಿ ವೀರ್ಯದ ಉತ್ಪತ್ತಿಯೂ ಹೆಚ್ಚಿರುತ್ತದೆ.

* 94,000 ಪುರುಷರನ್ನು ಒಳಪಡಿಸಿದ ತೊಂಬತ್ತು ಭಿನ್ನ ಅಧ್ಯಯನಗಳನ್ನು ವಿಮರ್ಶಿಸಿದಾಗ, ಪುರುಷರಲ್ಲಿ ಕೆಲವರಿಗೆ ಸಂತಾನಶಕ್ತಿಯ ಸಾಮರ್ಥ್ಯವು 35 ವರ್ಷದ ಕ್ಷೀಣಿಸುತ್ತಾ ಹೋದರೆ ಮತ್ತೂ ಕೆಲವರಿಗೆ 40ರ ನಂತರ ಕಡಿಮೆಯಾಗುತ್ತದೆ.

Tags