ಆರೋಗ್ಯಜೀವನ ಶೈಲಿ

ತುಳಸಿ ಹೆಸರಲ್ಲೇ ಇದೆ ಹತ್ತು ಹಲವು ಔಷಧೀಯ ಗುಣಗಳು!!

ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ..

ನಮ್ಮ ಮನೆಯಂಗಳದಲ್ಲಿ ಬೆಳೆದಿರುವ ಸಣ್ಣಪುಟ್ಟ ಔಷಧೀಯ ಸಸ್ಯಗಳ ಪ್ರಭಾವಗಳ ಬಗ್ಗೆ ಕೆಲವೊಮ್ಮೆ ನಮಗೆ ತಿಳಿದೇ ಇರುವುದಿಲ್ಲ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತಿರುವ ಈ ಸಸ್ಯಗಳು ನಮ್ಮೆಲ್ಲಾ ರೋಗಗಳಿಗೆ ಸಿದ್ಧೌಷಧವಾಗಿರುತ್ತದೆ ಅಂತಹುದೇ ಒಂದು ಪುಟ್ಟ ಸಸ್ಯವೇ ‘ತುಳಸಿ’.  ಪವಿತ್ರ ತುಳಸಿ ಸಂಸ್ಕೃತ ಪದ. ಅಂಗಳದಲ್ಲಿ ತುಳಸಿ ಗಿಡದ ಇದ್ದಲ್ಲಿ ಹಿಂದೂ ಮನೆಯ ಅಪೂರ್ಣ ಎಂದು ಭಾವಿಸಲಾಗುತ್ತದೆ.  ಲ್ಯಾಮಿಯಾಸಿಸ್” ಎಂಬ ಕುಟುಂಬಕ್ಕೆ ಸೇರಿರುವ ತುಳಸಿಯ ವೈದ್ಯಕೀಯ ಹೆಸರು ‘ಒಸಿಮಮ್ ಸೇಂಕ್ಟಮ್’ ಹಸಿರು ಹಾಗೂ ತಿಳಿ ನೇರಳೆ ಬಣ್ಣದಲ್ಲಿ ದೊರೆಯುವ ತುಳಸಿಯ ತವರು ಮನೆ ಭಾರತ. ಆದ್ದರಿಂದ ಇದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವೇ ಆಗಿ ಹೋಗಿದೆ.

ಆರೋಗ್ಯವಂತರನ್ನಾಗಿ ಮಾಡುತ್ತದೆ

ವೇದಗಳ ಕಾಲದಲ್ಲಿಯೇ ತುಳಸಿಗೆ ಪೂಜನೀಯ ಸ್ಥಾನಮಾನವನ್ನು ನೀಡಲಾಗಿತ್ತು. ನಮ್ಮ ಸಂಪ್ರದಾಯದಂತೆ ಮನೆಯ ಯಜಮಾನಿ ಅಥವಾ ಹೆಂಗಸರು ಮುಂಜಾನೆ ಬೇಗನೇ ಎದ್ದು ಸ್ನಾನ ಮಾಡಿ ಒಂದು ತಂಬಿಗೆ ನೀರನ್ನು ತುಳಸಿ ಗಿಡಕ್ಕೆ ಹೊಯ್ದು ಪ್ರದಕ್ಷಿಣೆ ಬಂದು ತುಳಸಿ ದೇವರಿಗೆ ಪ್ರಾರ್ಥಿಸಿ ದಿನದ ಆರಂಭವನ್ನು ಮಾಡುತ್ತಾರೆ. ಇದು ಮನಸ್ಸಿಗೆ ತಾಜಾತನವನ್ನು ಆಹ್ಲಾದವನ್ನು ನೀಡಿ ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ ಎಂಬುದು ಇದರ ಹಿಂದಿರುವ ಪ್ರತಿಯೊಂದು ಪೂಜೆ ಪುನಸ್ಕಾರಗಳಲ್ಲಿ ಶುದ್ಧತೆಯ ಸಂಕೇತವಾಗಿ ತುಳಸಿಯನ್ನು ಹೆಚ್ಚಾಗಿಯೇ ಬಳಸುತ್ತಾರೆ. ಒಮ್ಮೆ ತುಳಸಿಯನ್ನು ನೀರಿನಿಂದ ತೋಯಿಸಿದರೆ ಯಮರಾಜನ ಭಯವು ಮರೆಯಾಗುತ್ತದೆ ಎಂದು ಸ್ಕಂದ ಪುರಾಣವು ಹೇಳುತ್ತದೆ.

Image result for tulsi

ತುಳಸಿಯ ಎಲೆಗಳು ನಮ್ಮ ಬುದ್ಧಿ ಶಕ್ತಿಯನ್ನು ಚುರುಕುಗೊಳಿಸುತ್ತದೆ
ವಾಸ್ತು ಕೂಡ ತುಳಸಿಗೆ ಪೂಜನೀಯ ಸ್ಥಾನವನ್ನು ನೀಡಿದೆ. ಈ ಗಿಡವನ್ನು ಮನೆಯ ಮುಂದುಗಡೆ ಬೆಳೆಸುವುದರಿಂದ ಮನೆಯವರೆಲ್ಲರಿಗೂ ಒಳಿತಾಗುತ್ತದೆ ಎಂಬ ವಿಶ್ವಾಸ ಕೂಡ ನಮ್ಮಲ್ಲಿದೆ. ವೈದ್ಯಕೀಯ ಕ್ಷೇತ್ರದಲ್ಲೂ ತುಳಸಿಯು ಹಲವಾರು ಅದ್ಭುತಗಳನ್ನು ಮಾಡಿದೆ. ನಮ್ಮ ಭಾರತೀಯ ಪರಂಪರೆಯು ಸಾವಿರಾರು ವರ್ಷಗಳಿಂದ ತುಳಸಿಯನ್ನು ಬಳಸಿಕೊಂಡು ಬರುತ್ತಿದೆ. ಇದು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂಬ ನಂಬಿಕೆಯೂ ಇದೆ.ತುಳಸಿಯ ಎಲೆಗಳು ನಮ್ಮ ಬುದ್ಧಿ ಶಕ್ತಿಯನ್ನು ಚುರುಕುಗೊಳಿಸುತ್ತದೆ ಹಾಗೂ ಉದರ ಬಾಧೆಗಳನ್ನು ನಿವಾರಿಸಿ ಶಕ್ತಿ ಕೊಡುತ್ತದೆ.

ಜ್ವರ ಹಾಗೂ ಶೀತಕ್ಕೆ  ರಾಮಬಾಣ:                                                                                             

 ಜ್ವರ ಹಾಗೂ ಶೀತಕ್ಕೆ ಇದರ ಎಲೆಗಳನ್ನು ಚಹಾದೊಂದಿಗೆ ಕುದಿಸಿ ಕುಡಿಯುವುದರಿಂದ ಮಲೇರಿಯಾ ಹಾಗೂ ಡೆಂಗ್ಯೂ ಜ್ವರ ಉಪಶಮನವಾಗುತ್ತದೆ. ಮತ್ತು ತುಳಸಿ ರಸ ಜ್ವರವನ್ನು ತಗ್ಗಿಸುವಲ್ಲಿ ಸಹಕಾರಿ. ಇದರ ಎಲೆಯನ್ನು ಜಗಿಯುವುದರಿಂದ ಶೀತ ಹಾಗೂ ಕೆಮ್ಮು ನಿವಾರಣೆಯಾಗುತ್ತದೆ.
ತಲೆನೋವು:                                                                                                                     

 ತುಳಸಿ ರಸವನ್ನು ಗಂಧದೊಂದಿಗೆ ತೇಯ್ದು ನೆತ್ತಿಗೆ ಹಚ್ಚುವುದರಿಂದ ತಲೆನೋವು ಉಪಶಮನವಾಗುತ್ತದೆ.

ಮೂತ್ರಪಿಂಡದ ಕಲ್ಲು:

ತುಳಸಿ ಮೂತ್ರಪಿಂಡವನ್ನು ಬಲಪಡಿಸುವ ಶಕ್ತಿಯನ್ನು ಹೊಂದಿದೆ. ರೋಗಿಯ ಮೂತ್ರಪಿಂಡದದಲ್ಲಿ ಒಂದುವೇಳೆ ಕಲ್ಲು ಇದ್ದ ಸಂದರ್ಭದಲ್ಲಿ, ತುಳಸಿ ರಸವನ್ನು ಆರು ತಿಂಗಳು ನಿರಂತರವಾಗಿ ಜೇನಿನ ಜೊತೆಗೆ ಸೇವನೆ ಮಾಡಬೇಕು. ಈ ಮೂಲಕ ಕಲ್ಲು ಉಚ್ಚಾಟಿಸಲು ಸಹಾಯ ಮಾಡುತ್ತದೆ.
ಮೌತ್ ​​ಸೋಂಕುಗಳು:                                                                                                  

ಬಾಯಿ ಸೋಂಕುಗಳು ಅಥವಾ ಬಾಯಿ ಗುಣಪಡಿಸಲು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ತುಳಸಿ ಎಲೆಗಳು ಜಗಿಯುವ ಮೂಲಕ ಇಂತಹ ಸಮಸ್ಯೆಗಳಿಗೆ ಪರಿಹಾರವಾಗುವುದು.                         

ಆರೋಗ್ಯಕರ ಮತ್ತು  ಹೊಳೆಯುವ ಚರ್ಮವನ್ನು ನೀಡುತ್ತದೆ:

ತುಳಸಿ ಶುದ್ಧ ರಕ್ತನಾಳಗಳ ಸಹಾಯ ಮತ್ತು ಪ್ರತಿಯಾಗಿ ನಿಮ್ಮ ಚರ್ಮ ಹೊಳಪು ಮಾಡುವ ಅತ್ಯುತ್ತಮ ಶುದ್ಧೀಕರಿಸುವ ಗುಣಲಕ್ಷಣಗಳ ಹೊಂದಿದೆ. ಇದಲ್ಲದೆ, ಇದು ತಲೆಬುರುಡೆಯ ತುರಿಕೆ ಮತ್ತು ಕೂದಲು ಪತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳ ಮುಖದ ಮೇಲೆ ಲೇಪಿಸಿದರೆ ಚರ್ಮ ಆರೋಗ್ಯಕರವಾಗಿರುತ್ತದೆ ಮತ್ತು ಹೊಳೆಯುತ್ತದೆ.

 

 

Tags