ಜೀವನ ಶೈಲಿಫ್ಯಾಷನ್

‘ಕಡಲೆಹಿಟ್ಟಿ’ ನ ಮಹತ್ವ ನಿಮಗೆ ಗೊತ್ತಾ?

ನಿಮ್ಮ ತ್ವಚ್ಛೆ ಚೆನ್ನಾಗಿ ಕಾಣಬೇಕು ಎಂದು ಏನೇನೋ ಹಚ್ಚಿಕೊಂಡು ಮುಖದ ತ್ವಚ್ಛೆಯನ್ನು ಹಾಳು ಮಾಡಿಕೊಳ್ಳುತ್ತಿದ್ದೀರಾ, ತ್ವಚ್ಛೆ ಕಾಂತಿಯುತವಾಗಿ ಕಾಣಲು ತ್ವಚ್ಛೆ ಮೇಲಿರುವ ಡೆಡ್ ಸೆಲ್ಸ್‍ಗಳನ್ನು ಸ್ವಚ್ಛ ಮಾಡಲು ಕೆಮಿಕಲ್‍ಯುಕ್ತ ಕ್ರೀಮ್ ಹಚ್ಚಿ ತ್ವಚ್ಛೆ ಹಾಳಾಗಿದೆಯೇ?  ಹಾಗಾದರೆ ಇಲ್ಲಿ ನೋಡಿ.

ಹಿಂದಿನ ಕಾಲದಲ್ಲಿ ಮುಖದ ತ್ವಚ್ಛೆಯ ರಕ್ಷಣೆಗೆ ಮನೆಮದ್ದುಗಳನ್ನು ಉಪಯೋಗಿಸುತ್ತಿದ್ದರು. ಜತೆಗೆ ಮುಖದ ಕಾಂತಿ ಕೂಡ ಅಷ್ಟೇ ಸುರಕ್ಷವಾಗಿ ಇತ್ತು , ಅದರಲ್ಲು ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಕಡಲೆ ಹಿಟ್ಟು ಇಂದಿಗೂ ಅಷ್ಟೇ ಉಪಯೋಗಕಾರಿ ಪದಾರ್ಥ.

ಕಡಲೆ ಹಿಟ್ಟು ಉಪಯೋಗಕಾರಿ ಪದಾರ್ಥ

ದುಬಾರಿ ರಾಸಾಯನಿಕ ಉತ್ಪನ್ನಗಳನ್ನು ಬಳಸಿ ಮುಖದ ಕಾಂತಿಯನ್ನು ಕಳೆದುಕೊಳ್ಳುವುದನ್ನು ನಿಲ್ಲಿಸಿ. ಹಿಂದಿನಿಂದಲೂ ತ್ವಚೇಯ ರಕ್ಷಣೆಗಾಗಿ ಬಳಸುತ್ತಿರುವ ಕಡಲೆ ಹಿಟ್ಟಿನ ಪೇಸ್ಟ್‍ಅನ್ನು ಉಪಯೋಗಿಸಿ ನೋಡಿ ನಿಮ್ಮ ತ್ವಚ್ಛೆಯ ಕಾಂತಿ ಹೇಗೆ ಹೆಚ್ಚುತ್ತದೆ ಎಂದು ನೀವೆ ನೋಡಿ ….

ಕಡಲೆ ಹಿಟ್ಟು ತ್ವಚ್ಛೆಯ ಪಿಹೆಚ್ ಮಟ್ಟವನ್ನು ನಿಯಂತ್ರಿಸುವ ವಸ್ತು. ಜತೆಗೆ ತ್ವಚ್ಛೆಯ ಡೆಡ್ ಸೆಲ್ಸ್ ತೆಗೆಯಲು ಹೊಸ ಸೆಲ್ಸ್‍ಗಳ ಉತ್ಪತ್ತಿಯಾಗಲು ಸಹಾಯ ಕಡಲೆಹಿಟ್ಟು ತುಂಬಾ ಉಪಯೋಗಕಾರಿ, ಸೋ ಕೂಡಲೆ ನಿಮ್ಮ ತ್ವಚ್ಛೆ ಕಾಂತಿ ಮತ್ತು ಹೊಸ ಸೆಲ್ಸ್‍ಗಳ ಉತ್ಪತ್ತಿಗಾಗಿ ಕಡಲೆಹಿಟ್ಟನ್ನು ಉಪಯೋಗಿಸಿ.ಕಡಲೆಹಿಟ್ಟಿನ ಮಾಸ್ಕ್ ಅನ್ನು ಹೀಗೆ ಉಪಯೋಗಿಸಿ.

  1. ಕಡಲೆಹಿಟ್ಟು ಮತ್ತು ಯೋಗಾರ್ಟ್‍ನ ಮಿಶ್ರಣ ಮಾಡಿ ಪೇಸ್ಟ್ ಮಾಡಿ, ಮುಖವನ್ನು ಚೆನ್ನಾಗಿ ತೊಳೆದು ಪೇಸ್ಟ್‍ಅನ್ನು ಹಚ್ಚಿಕೊಂಡು ಒಣಗಿದ ನಂತರ ತಂಪಾದ ನೀರಿನಲ್ಲಿ ತೊಳೆಯಿರಿ.
  2. ಕಡಲೆಹಿಟ್ಟು ಮತ್ತು ಹಾಲನ್ನು ಸೇರಿಸಿ ತಯಾರಿಸಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ 15-20 ನಿಮಿಷ ಬಿಟ್ಟು ತಂಪಾದ ನೀರಿನಲ್ಲಿ ತೊಳೆದುಕೊಳ್ಳಿ, ಈ ಪೇಸ್ಟ್ ಒಣ ತ್ವಚ್ಛೆಗೆ ಉತ್ತಮ ಪರಿಹಾರ ನೀಡಿ ಡೆಡ್ ಸ್ಕಿನ್ ತೆಗೆದು ಉತ್ತಮ ಸ್ಕಿನ್ ನೀಡುತ್ತದೆ.
  3. ಮೊಡವೆ ಕಲೆ ಮತ್ತು ಪಿಗ್ಮೆನ್‍ಟೇಶನ್ ಸಮಸ್ಯೆಗೆ ಕಡಲೆ ಹಿಟ್ಟು ಮತ್ತು ಟೊಮ್ಯಾಟೊ ಫೇಸ್ ಪ್ಯಾಕ್ ತುಂಬಾ ಒಳ್ಳೆಯದು, ಟೊಮ್ಯಾಟೊವನ್ನು ರುಬ್ಬಿಕೊಂಡು ಕಡಲೆಹಿಟ್ಟಿನೊಂದಿಗೆ ಕಲಸಿಕೊಂಡು ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿ 20 ನಿಮಿಷ ಬಿಟ್ಟು ನಂತರ ತೊಳೆಯಿರಿ.
  4. ಮೊಡವೆ ಮತ್ತು ಮೊಡವೆ ಕಲೆಯನ್ನು ತೆಗೆದು ಚರ್ಮದ ಬಣ್ಣವನ್ನು ಇನ್ನಷ್ಟು ಹೆಚ್ಚಿಸಲು ಕಡಲೆಹಿಟ್ಟು, ಅರಿಶಿಣ, ಹಾಲು ಒಟ್ಟಾಗಿ ಕಲಸಿ ಮುಖಕ್ಕೆ ಹಚ್ಚಿಕೊಂಡು ತೊಳೆಯಿರಿ.

ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಕ್ರೀಮ್‍ಗಳನ್ನು ಹಚ್ಚುವುದನ್ನು ನಿಲ್ಲಿಸಿ ನೈಸರ್ಗಿಕ ಟಿಪ್ಸ್‍ಗಳನ್ನು ಉಪಯೋಗಿಸಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ.

 

Tags