ಜೀವನ ಶೈಲಿಸೌಂದರ್ಯ

ತ್ವಚೆಯ ರಕ್ಷಣೆಗೆ ಹೀಗೆ ಮಾಡಿ, ಚಳಿಯಿಂದ ನಿಮ್ಮ ಚರ್ಮವನ್ನು ಜೀವಂತವಾಗಿಡಿ

ಬೆಂಗಳೂರು, ಜ.09: ಚಳಿ ಎಂದರೆ ಹಾಗೆ, ಮೈ ಬಿಡಲಾಗದು, ಸದಾ ಹಾಸಿಗೆ, ರಗ್ಗು, ಅಮ್ಮನ ಮಡಿಲು, ಬಿಸಿ ಬಿಸಿ ಕಾಫಿ, ಕಷಾಯ ಹೀಗೆ ಎಲ್ಲವೂ ಬಿಸಿ ಅಪ್ಪುಗೆಯೇ ಬೇಕು. ಬಿಸಿ ಬಿಸಿಯಾದದ್ದೇ ಬೇಕು ಎನ್ನುವ ಕಾಲವೇ ಮಾಗಿ. ಚಳಿ ಒಂಥರಾ ಸೊಗಸಿನ ಕಾಲವೆನಿಸಿದರೂ ಮತ್ತೊಂದು ರೀತಿಯಲ್ಲಿ ಇರಿಸು-ಮುರಿಸು ಎನಿಸುವ ಧನುರ್ಮಾಸ.

ಚಳಿಗಾಲ ಬಂತೆಂದರೆ ಎಲ್ಲವೂ ಬದಲಾಗುತ್ತದೆ. ತಿನ್ನುವ ಆಹಾರ, ಜೀವನ ಶೈಲಿ ಹೀಗೆ ಮಾನಸಿಕ ಮತ್ತು ದೈಹಿಕವಾಗಿಯೂ ಸಿದ್ಧವಾಗುವುದು ಅನಿವಾರ್ಯವಾಗುತ್ತದೆ. ಈ ಕಾಲದಲ್ಲಿ ಚರ್ಮ ಉಳಿದೆಲ್ಲಾ ಕಾಲಕ್ಕಿಂತ ಹೆಚ್ಚಾಗಿಯೇ ಆರೈಕೆಯನ್ನು ಬೇಡುತ್ತದೆ. ಬಿರುಕು ಬಿಡುವ ತುಟಿ, ಒಡೆಯುವ ಚರ್ಮ ಸಾಕಷ್ಟು ಹಿಂಸೆ ಕೊಡುತ್ತದೆ.

ಈ ಹಿಂಸೆಯಿಂದ ಪಾರಾಗಲು ಈ ಒಂದು ಸುಲಭ ಉಪಾಯವನ್ನು ಅನುಸರಿಸಿ ನಿಮ್ಮ ತ್ವಚೆಯನ್ನು ಕೋಮಲವಾಗಿಟ್ಟುಕೊಳ್ಳಿ.

ಬೇಕಾದ ಸಾಮಾಗ್ರಿಗಳು:

ಮಾರುಕಟ್ಟೆಯಲ್ಲಿ ದೊರೆಯುವ ಯಾವುದೇ ಮಾಶ್ಚುರೈಸರ್ ಕ್ರೀಂ 500 ಎಂಎಲ್‍

ರೋಸ್‍ ವಾಟರ್- 100 ಎಂಎಲ್‍

ಗ್ಲಿಸರಿನ್‍- 100 ಎಂಎಲ್‍

ಇವೆಲ್ಲವನ್ನು ಮಿಶ್ರಣ ಮಾಡಿ ತ್ವಚೆಗೆ ಹಚ್ಚುವುದರಿಂದ ಚಳಿಯಿಂದ ಬಿರುಕು ಬಿಡದಂತೆ ರಕ್ಷಣೆ ನೀಡುತ್ತದೆ. ಮೊದಲ ಪ್ರಯೋಗದ್ಲಲೇ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ಇಂದೇ ಪ್ರಯೋಗಿಸಿ ನಿಮ್ಮ ಚಳಿಯಿಂದ ನಿಮ್ಮ ಚರ್ಮವನ್ನು ಸಂರಕ್ಷಿಸಿಕೊಳ್ಳಿ.

 

Tags