ಜೀವನ ಶೈಲಿಸೌಂದರ್ಯ

ಚರ್ಮದ ಸೌಂದರ್ಯವನ್ನು ವೃದ್ಧಿಸುವ ಆಲೂಗಡ್ಡೆ !

ಆಲೂಗಡ್ಡೆ ಕೇವಲ ಸಾರು, ಪಲ್ಯಕ್ಕಷ್ಟೇ ಅಲ್ಲ. ಅದನ್ನು ಮನೆಮದ್ದಿನ ರೂಪದಲ್ಲೂ ಬಳಸಬಹುದು. ಮುಖ್ಯವಾಗಿ ಫೇಸ್‌ ಪ್ಯಾಕ್, ಕಪ್ಪುಕಲೆಗಳು, ಮುಖದ ಕಾಂತಿ ಹೆಚ್ಚಿಸುವ, ಸುಟ್ಟಗಾಯಗಳಿಗೆ, ಮೈಗ್ರೇನ್ ತಲೆನೋವಿಗೆ ಇದನ್ನು ಬಳಸಬಹುದು. ಹಾಗಿದ್ದರೆ ಆಲೂಗಡ್ಡೆಯ ಉಪಯೋಗಗಳನ್ನು ಒಮ್ಮೆ ನೋಡೋಣ ಬನ್ನಿ.

* ನಿದ್ದೆ ಹೆಚ್ಚಾಗಿ, ಅಳುವಿನಿಂದ, ರಾತ್ರಿ ಸರಿಯಾಗಿ ನಿದ್ದೆಯಾಗದಂಥ ಸಮಸ್ಯೆ ಗಳಿಂದ ಕಣ್ಣುಗಳ ಸುತ್ತ ಊದಿದ್ದರೆ ಸಿಪ್ಪೆ ತೆಗೆದ ಹಸಿ ಆಲೂಗಡ್ಡೆ ತುಂಡನ್ನು ಕಣ್ಣು ಗಳ ಮೇಲೆ 10 ರಿಂದ 15 ನಿಮಿಷ ಇಟ್ಟರೆ ಊತ ನಿವಾರಣೆಯಾಗುತ್ತದೆ.

*ಆಲೂಗಡ್ಡೆಯನ್ನು ಚೆನ್ನಾಗಿ ನೀರಲ್ಲಿ ಬೇಯಿಸಿ ನಂತರ ಆ ನೀರನ್ನು ತಲೆ ಸ್ನಾನ ಮಾಡಿದ ನಂತರ ಕೊನೆಯಲ್ಲ್ಲಿ ಹಾಕಿದರೆ ಕೂದಲ ಬಣ್ಣ ಹಾಗೆಯೇ ಇರುತ್ತದೆ.

*ವಾರಕ್ಕೊಮ್ಮೆ ಒಂದು ಹಸಿ ಆಲೂಗಡ್ಡೆಗೆ ಒಂದು ನಿಂಬೆಹಣ್ಣಿನ ಪೂರ್ತಿ ರಸ ಮತ್ತು ಅರ್ಧ ಚಮಚ ಅರಿಶಿನ ಬೆರೆಸಿ ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿ 30 ನಿಮಿಷ ಬಿಟ್ಟು ಮುಖ ತೊಳೆದರೆ ಕಪ್ಪು ಕಲೆಗಳು ಕಡಿಮೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ.

* ಸನ್‌ ಟ್ಯಾನ್‌ ಆಗಿದ್ದರೆ ಆಲೂಗಡ್ಡೆಯ ಜ್ಯೂಸ್‌ ಮಾಡಿ ತಣ್ಣನೆಯ ಆ ಜ್ಯೂಸ್‌ ಅನ್ನು ಟ್ಯಾನ್‌ ಆದ ಜಾಗಕ್ಕೆ ಹಚ್ಚಿದರೆ ಪ್ರಯೋಜನವಿದೆ.

* ಸುಟ್ಟ ಗಾಯಕ್ಕೆ ತಕ್ಷಣ ಆಲೂಗಡ್ಡೆಯನ್ನು ಹೆಚ್ಚಿ ಇಟ್ಟರೆ ಉರಿ ಬೇಗ ಕಡಿಮೆಯಾಗುತ್ತದೆ.

* ಮೈಗ್ರೇನ್‌ ತಲೆನೋವು ಇದ್ದಾಗ ಹಣೆ ಮತ್ತು ಕಣ್ಣುಗಳ ಮೇಲೆ ಹಸಿ ಆಲೂಗಡ್ಡೆ ತುಂಡುಗಳನ್ನು 20 ನಿಮಿಷ ಇಟ್ಟರೆ ತಲೆನೋವು ಕಡಿಮೆಯಾಗುತ್ತದೆ.

* ಮುಖದ ಚರ್ಮ ಸುಕ್ಕಾಗಿದ್ದರೆ ಹಸಿ ಆಲೂಗಡ್ಡೆಯನ್ನು ಪೇಸ್ಟ್‌ ಮಾಡಿ ಅದಕ್ಕೆ ಮೊಸರು ಕಲಸಿ 30 ನಿಮಿಷ ನೆನೆಸಿಡಿ. ನಂತರ ಅದನ್ನು ಮುಖಕ್ಕೆ ಲೇಪ ಮಾಡಿ ಅರ್ಧ ಗಂಟೆ ಬಿಟ್ಟು ಮುಖ ತೊಳೆದರೆ ಸುಕ್ಕು ಕ್ರಮೇಣ ನಿವಾರಣೆಯಾಗುತ್ತದೆ.

Tags

Related Articles

Leave a Reply

Your email address will not be published. Required fields are marked *