ಜೀವನ ಶೈಲಿಸೌಂದರ್ಯ

ತಲೆಗೂದಲಿನ ತೈಲದ ಬಗ್ಗೆ ಇಲ್ಲಿದೆ ಒಂದಿಷ್ಟು ಟಿಪ್ಸ್

ಅನೇಕ ಯುವಕ ಯುವತಿಯರು ತಲೆಗೂದಲಿಗೆ ಎಣ್ಣೆ ಹಚ್ಚಿಕೊಳ್ಳುವುದೇ ಇಲ್ಲ. ಕೆಲವರಿಗೆ ಎಣ್ಣೆ ಹಚ್ಚುವುದೆಂದರೆ ಅಲರ್ಜಿ. ಆದರೆ ನಿಯಮಿತವಾಗಿ ಎಣ್ಣೆ ಹಚ್ಚುವುದರಿಂದ ಆಗುವ ಲಾಭಗಳನ್ನು ಕೇಳಿದರೆ ನೀವು ಇಂದಿನಿಂದಲೇ ತಲೆಗೆ ಎಣ್ಣೆ ಲೇಪಿಸಲು ಶುರು ಮಾಡುತ್ತೀರಿ. ಅಂದಹಾಗೆ ಇಲ್ಲಿ ತೈಲದ ಬಗ್ಗೆ ಒಂದಿಷ್ಟು ಟಿಪ್ಸ್ ಕೊಡಲಾಗಿದೆ ಏನೆಂದು ನೀವೇ ನೋಡಿ…

Image result for oil massage for hair

*ತಲೆಯ ಸ್ನಾನಕ್ಕೆ ಮುಂಚಿನ ರಾತ್ರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಕೂದಲನ್ನು ಮೂರ್ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಕೂದಲಿನ ಬುಡಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಬೇಕು.ಬೆರಳುಗಳಿಂದ ಮೃದುವಾಗಿ ಕೂದಲಿನ ಬುಡಕ್ಕೆ ಮಸಾಜ್ ಮಾಡಿಕೊಳ್ಳಬೇಕು. ವಾರಕ್ಕೆರೆಡು ಬಾರಿಯಾದರೂ ಹೀಗೆ ಮಾಡುವುದರಿಂದ ಕೂದಲಿನ ಬುಡಕ್ಕೆ ರಕ್ತ ಸಂಚಾರ ಸಲೀಸಾಗಿ ಆಗುತ್ತದೆ.

*ಇತ್ತೀಚೆಗೆ ಜಾಹೀರಾತುಗಳಲ್ಲಿ ಬಗೆಬಗೆಯ ಪರಿಮಳಯುಕ್ತ ತೈಲಗಳ ವಿವರಣೆ ನಮಗೆ ಬೇಡವೆಂದರೂ ಕಣ್ಣಿಗೆ ಕಾಣುತ್ತದೆ. ಅಂತಹವುಗಳನ್ನು ನೋಡಿ ದಿನಕ್ಕೊಂದು ತೈಲವನ್ನು ಬದಲಾಯಿಸುವುದು ಬೇಡ.

*ಮನೆಯಲ್ಲಿಯೇ ತೈಲವನ್ನು ತಯಾರಿಸಿಕೊಂಡು ಬಳಸಬೇಕು.ಅಲ್ಲದೇ ಪ್ರತಿದಿನ ರಾತ್ರಿ ಮಲಗುವ ಮುಂಚೆ ನೆತ್ತಿಗೆ ಸ್ವಲ್ಪ ಎಣ್ಣೆ ಹಚ್ಚಿಕೊಳ್ಳುವುದು ಒಳ್ಳೆಯದು.

ಜ್ವರ ಬಂದಾಗ ಮಾಡಬಹುದಾದ ಮನೆ ಔಷಧಿಗಳು

#balkaninews #hair #hairoil #oilbenefits

Tags