ಜೀವನ ಶೈಲಿಸೌಂದರ್ಯ

ಮಳೆಗಾಲಕ್ಕೆ ವಾಟರ್ ಪ್ರೂಫ್ ಮೇಕಪ್

ಎಲ್ಲಾ ಕಾಲಕ್ಕೂ ಬೇಸಿಕ್ ಮೇಕಪ್‍ನ ಅವಶ್ಯಕತೆ ಇದ್ದೇ ಇರುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಆದ್ರ್ರತೆ ಹೆಚ್ಚಿರುವುದರಿಂದ ಮೇಕಪ್ ಬಗ್ಗೆ ತುಸು ಹೆಚ್ಚಿನ ಜಾಗ್ರತೆಯೇ ವಹಿಸಬೇಕಾಗುತ್ತದೆ. ನಾವು ಮಾಡುವ ಮೇಕಪ್ ನಮ್ಮ ವ್ಯಕಿತ್ವವನ್ನು ಎತ್ತಿ ತೋರಿಸುವುದರಿಂದ ಯಾವ ಕಾಲಕ್ಕೆ ಹೇಗೆ ಮೇಕಪ್ ಮಾಡಬೇಕೆಂಬುದನ್ನು ಮೊದಲು ತಿಳಿಯಬೇಕು. ಈ ಸಾರಿ ಇಲ್ಲಿ ಮಳೆಗಾಲದ ಮೇಕಪ್ ಬಗ್ಗೆ ಸರಳವಾದ ಟಿಪ್ಸ್ ಕೊಡಲಾಗಿದೆ ಎಂಜಾಯ್ ಮಾನ್ಸೂನ್…

ಮಳೆಗಾಲ ಬಂದರೆ ಮುಖ ಒಣಗುವುದಿಲ್ಲ, ಬಿರಿಯುವುದಿಲ್ಲ ಎಂದುಕೊಳ್ಳುವುದು ತಪ್ಪು. ಆಯಾ ಸೀಸನ್‍ಗೆ ತಕ್ಕಂತೆ ಚರ್ಮದಲ್ಲಿ ವ್ಯತ್ಯಾಸ ಕಂಡುಬಂದರೂ, ಕೆಲವು ಬಾರಿ ತ್ವಚೆ ತನಗೆ ಬೇಕಾದಷ್ಟು ಮೊಯಿಶ್ಚರೈಸರ್ ಪಡೆಯುವಲ್ಲಿ ವಿಫಲವಾಗುತ್ತದೆ. ಹಾಗಾಗಿ ಋತುಮಾನಕ್ಕೆ ತಕ್ಕಂತೆ ಆರೈಕೆ ಒಳ್ಳೆಯದು. ಕೂದಲುದುರುವಿಕೆ, ದದ್ದು ಮಳೆಗಾಲದಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಈ ಸಮಸ್ಯೆಗಳನ್ನೆಲ್ಲಾ ದೂರ ಮಾಡುವುದು ನಮ್ಮ ಕೈಯ್ಯಲ್ಲೇ ಇದೆ. ಜಸ್ಟ್ ಟ್ರೈ…

ಕ್ಲೆನ್ಸಿಂಗ್ ಮೊದಲು…

ಮೇಕಪ್ ಮಾಡುವ ಮುನ್ನ ಮುಖಕ್ಕೆ ಕ್ಲೆನ್ಸಿಂಗ್ ಜೆಲ್ ಹಚ್ಚಿ ಚೆನ್ನಾಗಿ ತೊಳೆಯಿರಿ. ಕೊಳೆ ಸಂಪೂರ್ಣವಾಗಿ ಹೋಗಿ ಮುಖ ಸ್ವಚ್ಛವಾಗುತ್ತದೆ. ನಂತರ ಒಳ್ಳೆಯ ಟೋನರ್ ಹಚ್ಚಿ. ಇದು ಪಿ.ಹೆಚ್. ಮಟ್ಟವನ್ನು ಸಮತೋಲನದಲ್ಲಿಟ್ಟು ಇಡೀ ದಿನ ಫ್ರೆಶ್ ಆಗಿರುವಂತೆ ನೋಡಿಕೊಳ್ಳುತ್ತದೆ. ಮೇಕಪ್ ಹಾಳಾಗುವುದಿಲ್ಲ. ಈಗ ಮೊಯಿಶ್ಚರೈಸಿಂಗ್ ಸರದಿ. ದಿನಕ್ಕೆ ಒಂದು ಬಾರಿಯಾದರೂ ಉತ್ತಮ ಮೊಯಿಶ್ಚರೈಸರ್ ಕ್ರೀಮ್ ಹಚ್ಚಿ ಮಸಾಜ್ ಮಾಡಿ.

ಫೌಂಡೇಶನ್ ಹೇಗಿರಬೇಕು?

ಕ್ಲೆನ್ಸಿಂಗ್, ಟೋನಿಂಗ್, ಮೊಯಿಶ್ಚರೈಸಿಂಗ್ ನಂತರÀ ಸ್ಕಿನ್ ಕಲರ್ ವಾಟರ್ ಪ್ರೂಫ್ ಫೌಂಡೇಶನ್ ಹಾಕಿ. ಫೌಂಡೇಶನ್ ಹಾಕುವಾಗ ಮೇಕಪ್ ಬ್ರಶ್ ಅಥವಾ ಸ್ಪಾಂಜ್ ಉಪಯೋಗಿಸಿ. ಈಗ ಮುಖ, ಕುತ್ತಿಗೆ, ಹಣೆಯ ಮೇಲೆ ಕೈಬೆರಳುಗಳನ್ನು ಉಪಯೋಗಿಸಿ ನಿಧಾನವಾಗಿ ಪ್ರೆಸ್ ಮಾಡುತ್ತಾ ಬನ್ನಿ (ಈ ಕ್ರಮವನ್ನು ಒಮ್ಮೆ ಬ್ಯೂಟಿಷನ್‍ನಿಂದ ಕಲಿಯಿರಿ) ಹೀಗೆ ಮಾಡುವುದರಿಂದ ಮೇಕಪ್ ಸರಿಯಾಗಿ ಉಳಿಯುತ್ತದೆ. ವಾಟರ್‍ಪ್ರೂಫ್ ಮೇಕಪ್ ಸರಿಯಾಗಿದೆಯೋ, ಇಲ್ಲವೋ ಎಂದು ತಿಳಿಯಲು ಮುಖದ ಮೇಲೆ ಸ್ವಲ್ಪ ನೀರು ಚಿಮುಕಿಸಿ, ಒಂದು ಚಿಕ್ಕ ಟಿಶ್ಯೂ ಪೇಪರ್ ತೆಗೆದುಕೊಂಡು ಮೇಕಪ್ ಮೇಲೆ ನಿಧಾನವಾಗಿ ಒರೆಸಿ. ಸರಿಯಾಗಿದ್ದರೆ ಅದು ಅಳಿಸುವುದಿಲ್ಲ. ಒಂದು ವೇಳೆ ಅಳಿಸಿದರೆ, ಪುನಃ ಮೇಕಪ್ ಮಾಡಿ, ಟಿಶ್ಯೂ ಪೇಪರ್‍ನಲ್ಲಿ ಮರ್ಜ್ ಮಾಡಿ, 2 ನಿಮಿಷ ಬಿಡಿ.

ಡಾರ್ಕ್ ಐಶ್ಯಾಡೋ ಬೇಡ

ಐ ಶ್ಯಾಡೋ ಕಡಿಮೆ ಹಾಕಿದಷ್ಟು ಒಳ್ಳೆಯದು. ಐ ಲೈನರ್ ಲೈಟ್ ಕಲರ್ ಉಪಯೋಗಿಸಿ. ಮಸ್ಕಾರ ಎರಡಕ್ಕಿಂತ ಹೆಚ್ಚು ಕೋಟ್ ಹಾಕಬೇಡಿ. ಟ್ರಾನ್ಸ್‍ಪರೆಂಟ್ ಮಸ್ಕಾರ ಕಣ್ಣಿನ ಅಂದ ಹೆಚ್ಚಿಸುತ್ತದೆ. ವಾಟರ್ ಪ್ರೂಫ್ ಐ ಶ್ಯಾಡೋ, ಐ ಲೈನರ್‍ಗಳನ್ನೇ ಉಪಯೋಗಿಸಿ. ಡಾರ್ಕ್ ಕಲರ್ ಬಹಳ ಬೇಗ ಹರಡಿಕೊಳ್ಳುವುದರಿಂದ, ಗಾಢ ಬಣ್ಣದ ಬಳಕೆ ಬೇಡ. ಲೈಟ್ ಬ್ರೌನ್, ಪ್ಯಾಸ್ಟಲ್, ಪಿಂಕ್ ಕ್ರೀಮ್ ಕಲರ್ ಬೆಸ್ಟ್.

ಸಾಫ್ಟ್ ಲಿಪ್‍ಸ್ಟಿಕ್

ಲಿಪ್ ಲೈನ್ ಹಾಕಲು ಖಡ್ಡಾಯವಾಗಿ ಪೆನ್ಸಿಲ್ ಉಪಯೋಗಿಸಿ. ಶೇಪ್ ಕೊಡಲು ಸುಲಭವಾಗುತ್ತದೆ. ಲಾಂಗ್ ಸ್ಟೆ ಲಿಪ್‍ಸ್ಟಿಕ್‍ಗಳನ್ನು ಉಪಯೋಗಿಸಿರುವುದರಿಂದ, ಲಿಪ್‍ಸ್ಟಿಕ್ ಬಹಳ ಸಮಯದವರೆಗೆ ಹಾಗೆಯೇ ಉಳಿಯುತ್ತದೆ. ಸಾಫ್ಟ್ ಬ್ರೌನ್ ಅಥವಾ ಪಿಂಕ್‍ಶೇಡ್ ಬಣ್ಣಗಳು ತುಟಿಯ ರಂಗನ್ನು ಹೆಚ್ಚಿಸುತ್ತವೆ. ಲಿಪ್ ಗ್ಲಾಸ್ ಹಾಕುವುದು ಬೇಡ. ಲಿಪ್ ಬಾಮ್ ಬಳಸಿ.

ಕೂದಲಿಗೆ ಟ್ರಿಮ್ ಮಾಡಿಸಿ

ಈ ಸಮಯದಲ್ಲಿ ಯಾವುದೇ ಹೇರ್ ಸ್ಟೈಲ್ ಮಾಡೋಣವೆಂದರೂ ಕೂದಲು ಒಣಗಿದ ಹಾಗೇ ಕಾಣುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಹೇರ್ ಟ್ರಿಮ್ ಮಾಡಿಸಿ ಕವಲೊಡೆದ ಕೂದಲನ್ನು ತೆಗೆಯಿರಿ. ಬಾದಾಮಿ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿ. ಕೂದಲನ್ನು ಒದ್ದೆಯಾಗಿ ಬಾಚದೆ, ಫ್ರಿಯಾಗಿ ಬಿಡಿ. ಒಣಗಿದ ಕೂಡಲೇ ನೀಟಾಗಿ ತಲೆಗೂದಲನ್ನು ಕಟ್ಟಿ.

ನೆನಪಿನಲ್ಲಿಡಿ 

• ಮಳೆಗಾಲದಲ್ಲಿ ವಾಟರ್ ಬೇಸ್ ಪ್ರಾಡಕ್ಟ್‍ಗಳನ್ನು ಉಪಯೋಗಿಸುವುದನ್ನು ಮರೆಯಬೇಡಿ.

• ಕ್ರೀಮ್ ಹಾಗೂ ಲೋಶನ್ ಬೇಸ್ ಇರುವ ಫೌಂಡೇಶನ್‍ಗಳನ್ನು ಹಾಕಬೇಡಿ. ಲೈಟ್ ಜೆಲ್ ಬೇಸ್ ಪ್ರಾಡಕ್ಟ್‍ಗಳನ್ನು ಉಪಯೋಗಿಸಿ.

• ಕ್ರೀಮಿ ಬ್ಲಶರ್‍ಗಳನ್ನೇ ಉಪಯೋಗಿಸಿ. ಮೇಕಪ್ ಸರಿಯಾಗಿ ಅಂಟಿಕೊಳ್ಳುತ್ತದೆ.

• ದಿನನಿತ್ಯ ಅಥವಾ ವಾರದಲ್ಲಿ ಮೂರು ಸಾರಿ ತಲೆಸ್ನಾನ ಮಾಡುವುದು ಒಳ್ಳೆಯದು. ತಲೆಹೊಟ್ಟು ಸೇರಿದಂತೆ ಇತರೆ ಕೂದಲಿನ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ.

• ಹುಬ್ಬುಗಳಿಗೆ ಥ್ರೆಡ್ಡಿಂಗ್ ಮಾಡಿಸಿ, ಸರಿಯಾದ ಶೇಪ್ ಕೊಡಿ.

• ಸ್ಟೋನ್ ಸ್ಟಡೆಡ್ ಲೈಟ್ ಜ್ಯುವೆಲ್ಲರಿ ಉಪಯೋಗಿಸಿ.

• ನ್ಯೂಡ್ ಕಲರ್‍ಗಳ ಬಳಕೆ ಒಳ್ಳೆಯದು.

• 8-10 ಗ್ಲಾಸ್ ನೀರು ಕುಡಿಯಿರಿ.

ಹಾಲು ಮತ್ತು ಕೇಸರಿ ಮಿಶ್ರಣದ ಅದ್ಭುತ ಲೀಲೆ

#balkaninews #rainyseason #waterproofmakeup #makeup #skin #beauty

Tags